Atal Pension Scheme: ದಿನಕ್ಕೆ 7 ರೂಪಾಯಿಯಂತೆ ಉಳಿತಾಯ ಮಾಡಿದಲ್ಲಿ ವರ್ಷಕ್ಕೆ 60 ಸಾವಿರ ರೂಪಾಯಿ ಪೆನ್ಷನ್ ಪಡೆಯಬಹುದು

| Updated By: Srinivas Mata

Updated on: Apr 22, 2022 | 2:08 PM

ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ದಿನಕ್ಕೆ 7 ರುಪಾಯಿ ಉಳಿತಾಯ ಮಾಡಿದರೆ ವಾರ್ಷಿಕವಾಗಿ 60,000 ರೂಪಾಯಿ ಪಿಂಚಣಿ ಪಡೆಯಬಹುದು. ಆ ಯೋಜನೆ ಬಗ್ಗೆ ಮಾಹಿತಿ ಇಲ್ಲಿದೆ.

Atal Pension Scheme: ದಿನಕ್ಕೆ 7 ರೂಪಾಯಿಯಂತೆ ಉಳಿತಾಯ ಮಾಡಿದಲ್ಲಿ ವರ್ಷಕ್ಕೆ 60 ಸಾವಿರ ರೂಪಾಯಿ ಪೆನ್ಷನ್ ಪಡೆಯಬಹುದು
ಸಾಂದರ್ಭಿಕ ಚಿತ್ರ
Follow us on

ಆರೋಗ್ಯಕರ ನಿವೃತ್ತಿ ನಿಧಿಯನ್ನು ಇಟ್ಟುಕೊಂಡಿರುವುದು ಸಂಬಳ ಪಡೆಯುವ ಯಾವುದೇ ವ್ಯಕ್ತಿಯ ಗುರಿ ಆಗಿರುತ್ತದೆ. ಖಾಸಗಿ ಮತ್ತು ಸರ್ಕಾರಿ ವಲಯದ ಉದ್ಯೋಗಿಗಳು ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಗೆ ಕೊಡುಗೆ ನೀಡಬಹುದಾದರೂ ಕೇಂದ್ರವು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರಿಗೆ ನಿವೃತ್ತಿ ಯೋಜನೆ (Pension Scheme) ಸಹ ಪ್ರಾರಂಭಿಸಿದೆ. ಅಸಂಘಟಿತ ವಲಯದಲ್ಲಿ ತೊಡಗಿರುವ ಕಾರ್ಮಿಕರಿಗೆ ಬಹು ದೊಡ್ಡ ಕ್ರಮದಲ್ಲಿ ಕೇಂದ್ರವು ಮೇ 9, 2015ರಂದು ಅಟಲ್ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಿತು. ಇಲ್ಲಿಯವರೆಗೆ ಯೋಜನೆಯು ಸುಮಾರು 4 ಕೋಟಿ ಚಂದಾದಾರರನ್ನು ಹೊಂದಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಮೂಲಕ ಕೇಂದ್ರ ಸರ್ಕಾರವು ನಿರ್ವಹಿಸುವ ನಿವೃತ್ತಿ ಯೋಜನೆಯು ನಿವೃತ್ತಿಯ ಮೇಲೆ ಆದಾಯವನ್ನು ಖಾತ್ರಿಪಡಿಸುತ್ತದೆ.

ಕನಿಷ್ಠ ವಯಸ್ಸು, ಯಾರು ಹೂಡಿಕೆ ಮಾಡಬಹುದು ಮತ್ತು ಯೋಜನೆಯ ಇತರ ವೈಶಿಷ್ಟ್ಯಗಳು
– ಬ್ಯಾಂಕ್ ಖಾತೆಯನ್ನು ಹೊಂದಿರುವ ಮತ್ತು ಅಸಂಘಟಿತ ವಲಯದಲ್ಲಿ ತೊಡಗಿರುವ ಯಾವುದೇ ಭಾರತೀಯ ಪ್ರಜೆ.
– ವ್ಯಕ್ತಿ 18ರಿಂದ 40 ವರ್ಷ ವಯಸ್ಸಿನವರಾಗಿರಬೇಕು.
– ಹೂಡಿಕೆದಾರರು 60 ವರ್ಷ ವಯಸ್ಸಿನಲ್ಲಿ ನಿವೃತ್ತಿಯ ಸಮಯದಲ್ಲಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ.
– ಹೂಡಿಕೆದಾರರು ತಮ್ಮ ಮರಣದ ತನಕ ಮಾಸಿಕ ಪಿಂಚಣಿ ಗಳಿಸುತ್ತಾರೆ.
– ಹೂಡಿಕೆದಾರರ ಮರಣದ ಸಂದರ್ಭದಲ್ಲಿ, ಅವರ ಸಂಗಾತಿಯು ಮರಣದ ತನಕ ಪಿಂಚಣಿ ಪಡೆಯಬಹುದು.
– ಹೂಡಿಕೆದಾರರು ಮತ್ತು ಸಂಗಾತಿಯ ಮರಣದ ಸಂದರ್ಭದಲ್ಲಿ ನಿವೃತ್ತಿ ನಿಧಿಯನ್ನು ನಾಮಿನಿಯ ಖಾತೆಗೆ ವರ್ಗಾಯಿಸಲಾಗುತ್ತದೆ.

18 ವರ್ಷ ವಯಸ್ಸಿನ ಜನರು ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅವರು ನಿವೃತ್ತಿಯ ಸಮಯದಿಂದ ರೂ. 5,000 ಮಾಸಿಕ ಪಿಂಚಣಿ ಪಡೆಯಲು 42 ವರ್ಷಗಳವರೆಗೆ ಮಾಸಿಕ 210 ರೂಪಾಯಿಗಳನ್ನು ಹಾಕಬೇಕಾಗುತ್ತದೆ.

210 ರೂಪಾಯಿ ಅಂದರೆ ದಿನಕ್ಕೆ 7 ರೂಪಾಯಿ ಆಗುತ್ತದೆ ಮತ್ತು ಒಂದು ವರ್ಷಕ್ಕೆ ಹೂಡಿಕೆ ಮಾಡಿದರೆ ಹೂಡಿಕೆದಾರರು ರೂ. 60,000 ಪಿಂಚಣಿ ಪಡೆಯುತ್ತಾರೆ.

ಆದರೆ ಯೋಜನೆಯನ್ನು ಆಯ್ಕೆ ಮಾಡಲು ಸಿದ್ಧರಿರುವ ಯಾವುದೇ ವ್ಯಕ್ತಿಯು ಮಾಸಿಕ ಪಿಂಚಣಿಯನ್ನು ಪಡೆಯಲು ತಪ್ಪದೇ ತಿಂಗಳಿಗೆ ರೂ. 210ರ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.

ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಹಂತ-ಹಂತದ ಮಾರ್ಗದರ್ಶಿ ಇಲ್ಲಿದೆ:
ಹಂತ 1: ಅಟಲ್ ಪಿಂಚಣಿ ಯೋಜನೆಯ ಅಧಿಕೃತ ವೆಬ್‌ಸೈಟ್-https://enps.nsdl.com/eNPS/NationalPensionSystem.html ವೆಬ್‌ಸೈಟ್‌ಗೆ ತೆರಳಿ.
ಹಂತ 2: ವೈಯಕ್ತಿಕ ಮತ್ತು ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸಿ.
ಹಂತ 3: ಒಟಿಪಿ ದೃಢೀಕರಣನೊಂದಿಗೆ ಮಾಹಿತಿಯನ್ನು ಪರಿಶೀಲಿಸಿ. ಆಧಾರ್‌ಗೆ ಜೋಡಣೆ ಮಾಡಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
ಹಂತ 4: ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ – ಖಾತೆ ಸಂಖ್ಯೆ ಮತ್ತು ಐಎಫ್​ಎಸ್​ಸಿ ಕೋಡ್.
ಹಂತ 5: ಪ್ರಕ್ರಿಯೆ ಪೂರ್ಣಗೊಂಡ ನಂತರ ಖಾತೆಯನ್ನು ಸಕ್ರಿಯಗೊಳಿಸಲಾಗುತ್ತದೆ.
ಹಂತ 6: ನಾಮಿನಿ ವಿವರಗಳನ್ನು ನಮೂದಿಸಿ ಮತ್ತು ಪ್ರೀಮಿಯಂ ಪಾವತಿ ಆಯ್ಕೆಯನ್ನು ಆರಿಸಿ.
ಹಂತ 7: ಫಾರ್ಮ್‌ಗೆ ಇ-ಸಹಿ ಮಾಡಿ ಮತ್ತು ನಿಮ್ಮ ಅಟಲ್ ಪಿಂಚಣಿ ಯೋಜನೆ ನೋಂದಣಿ ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: Pension Rule: ಪೆನ್ಷನ್ ನಿಯಮದಲ್ಲಿ ಭಾರೀ ಬದಲಾವಣೆ; ಇನ್ಮುಂದೆ ಈ ದಿನಕ್ಕೂ ಮೊದಲೇ ಖಾತೆಗೆ ಬರಲಿದೆ ಪಿಂಚಣಿ