SBI Customer Alert: ಎಸ್​ಬಿಐ ಡಿಜಿಟಲ್ ಸೇವೆಗಳಲ್ಲಿ ಆಗಸ್ಟ್ 6-7ರಂದು ಈ ಅವಧಿಯಲ್ಲಿ ವ್ಯತ್ಯಯ

| Updated By: Srinivas Mata

Updated on: Aug 05, 2021 | 4:42 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಆಗಸ್ಟ್ 6 ಮತ್ತು 7ರಂದು ಈ ಸಮಯದಲ್ಲಿ ನಿರ್ವಹಣಾ ಚಟುವಟಿಕೆಗಳು ಕೈಗೊಳ್ಳುವುದರಿಂದ ಗ್ರಾಹಕರಿಂದ ಡಿಜಿಟಲ್​ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ ಎಂದು ಮಾಹಿತಿ ನೀಡಲಾಗಿದೆ.

SBI Customer Alert: ಎಸ್​ಬಿಐ ಡಿಜಿಟಲ್ ಸೇವೆಗಳಲ್ಲಿ  ಆಗಸ್ಟ್ 6-7ರಂದು ಈ ಅವಧಿಯಲ್ಲಿ ವ್ಯತ್ಯಯ
ಎಸ್​ಬಿಐ
Follow us on

ದೇಶದ ಅತಿದೊಡ್ಡ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ನೀಡಿರುವ ಮಾಹಿತಿಯಂತೆ, ನಿರ್ವಹಣೆ ಕಾರ್ಯ ಇರುವುದರಿಂದ ಆಗಸ್ಟ್ 6 ಮತ್ತು 7ರಂದು ಅದರ ಡಿಜಿಟ್ ಸೇವೆಗಳ ಮೇಲೆ ಕೆಲ ಗಂಟೆಗಳ ಕಾಲ ಪರಿಣಾಮ ಆಗಲಿದೆ. “ನಾವು ಉತ್ತಮ ಬ್ಯಾಂಕಿಂಗ್ ಅನುಭವ ಒದಗಿಸುವ ಸಲುವಾಗಿ ಶ್ರಮಿಸುತ್ತಿದ್ದೇವೆ. ಅದಕ್ಕೆ ನಮ್ಮ ಗೌರವಾನ್ವಿತ ಗ್ರಾಹಕರು ಇದಕ್ಕೆ ಸಹಕರಿಸಬೇಕು,” ಎಂದು ಎಸ್​ಬಿಐ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ. ಎಸ್​ಬಿಐನ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್​ಫಾರ್ಮ್​ಗಳಾದ Yono, Yono Lite, ಇಂಟರ್​ನೆಟ್ ಬ್ಯಾಂಕಿಂಗ್ ಮತ್ತು Yono ಬಿಜಿನೆಸ್ ಮೇಲೆ ಇದರಿಂದಾಗಿ ಆಗಸ್ಟ್​ 6, 22.45ರಿಂದ (ರಾತ್ರಿ 10.45) ಆಗಸ್ಟ್​ 7ರ ಮಧ್ಯರಾತ್ರಿ 1.15ರ ತನಕ ಸೇವೆ ವ್ಯತ್ಯಯ ಆಗಲಿದೆ ಎಂದು ಬ್ಯಾಂಕ್​ನಿಂದ ತಿಳಿಸಲಾಗಿದೆ.

ಈ ಬಗ್ಗೆಯೇ ಟ್ವೀಟ್ ಮಾಡಿರುವ ಎಸ್​ಬಿಐ, “ನಾವು ಆಗಸ್ಟ್ 6ನೇ ತಾರೀಕಿನ 22.45 ಗಂಟೆಯಿಂದ ಆಗಸ್ಟ್ 7ರ 01.15ರ ವರೆಗೆ (150 ನಿಮಿಷಗಳು) ನಿರ್ವಹಣೆ ಚಟುವಟಿಕೆಗಳಲ್ಲಿ ಭಾಗೀ ಆಗಲಿದ್ದೇವೆ. ಈ ಅವಧಿಯಲ್ಲಿ Yono, Yono Lite, ಇಂಟರ್​ನೆಟ್ ಬ್ಯಾಂಕಿಂಗ್ ಮತ್ತು Yono ಬಿಜಿನೆಸ್ ಲಭ್ಯ ಇರುವುದಿಲ್ಲ.” ಎಂದು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ ಅಂಶ ಏನೆಂದರೆ, ಎಸ್​ಬಿಐನಿಂದ ಈಚೆಗಷ್ಟೇ ಹೊಸ ಹಾಗೂ ವಿಸ್ತೃತ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡ- SIM Binding ಅನ್ನು ಗ್ರಾಹಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದಲೇ YONO ಹಾಗೂ YONO ಲೈಟ್​ನಲ್ಲಿ ಪರಿಚಯಿಸಲಾಯಿತು. ಆ ಪ್ರಕಾರ, ಬ್ಯಾಂಕ್ ಜತೆ ನೋಂದಣಿ ಆಗಿರುವ SIM ಮೊಬೈಲ್ ನಂಬರಿನ ಸಾಧನವನ್ನು ಬಳಸಿದಲ್ಲಿ ಮಾತ್ರ ಈ ಪ್ಲಾಟ್​ ಫಾರ್ಮ್​ಗಳು ಕಾರ್ಯ ನಿರ್ವಹಿಸಯತ್ತವೆ.

ಹೊಸ ವರ್ಷನ್​ನ YONO ಹಾಗೂ YONO ಲೈಟ್​ ಅನ್ನು ವಿಸ್ತೃತ ಭದ್ರತಾ ಫೀಚರ್​ಗಳ ಜತೆಗೆ ಬಳಸುವುದಕ್ಕೆ ಬಳಕೆದಾರರು ತಮ್ಮ ಮೊಬೈಲ್ ಆ್ಯಪ್ ಅಪ್​ಡೇಟ್​ ಮಾಡಬೇಕು ಹಾಗೂ ಈ ಆ್ಯಪ್​ಗಳಲ್ಲಿ ಒನ್​ಟೈಮ್ ನೋಂದಣಿಯನ್ನು ಪೂರ್ಣಗೊಳಿಸಬೇಕು. ಅಂದಹಾಗೆ 2021-22ನೇ ಸಾಲಿನ ಮೊದಲ ತ್ರೈಮಾಸಿಕದ ಆರ್ಥಿಕ ಫಲಿತಾಂಶವನ್ನು ಎಸ್​ಬಿಐ ಪ್ರಕಟಿಸಿದ್ದು, 6504 ಕೋಟಿ ರೂಪಾಯಿ ಲಾಭವನ್ನು ದಾಖಲಿಸಿದೆ.

ಇದನ್ನೂ ಓದಿ: SBI Home Loan: ಎಸ್​ಬಿಐ ಗೃಹ ಸಾಲಕ್ಕೆ ಆಗಸ್ಟ್​ 31ರ ತನಕ ಪ್ರೊಸೆಸಿಂಗ್ ಶುಲ್ಕ ಮನ್ನಾ ವಿಸ್ತರಣೆ

ಇದನ್ನೂ ಓದಿ: SBI savings account: ಈ ಉಳಿತಾಯ ಖಾತೆದಾರರಿಗೆ ಎಸ್​ಬಿಐನಿಂದ ರೂ. 2 ಲಕ್ಷದ ಉಚಿತ ಇನ್ಷೂರೆನ್ಸ್

(SBI Maintenance Activities On August 6th And 7th These Platform Digital Services Will Be Affected)

Published On - 2:15 pm, Thu, 5 August 21