SBI Savings Plus: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಈ ಉಳಿತಾಯ ಖಾತೆ ಮೇಲೆ ಹೆಚ್ಚು ಬಡ್ಡಿ

| Updated By: Srinivas Mata

Updated on: Jul 09, 2021 | 4:55 PM

ಸೇವಿಂಗ್ಸ್ ಪ್ಲಸ್ ಖಾತೆಯು ಎಸ್‌ಬಿಐನ ಒಂದು ವಿಶಿಷ್ಟ ಉಳಿತಾಯ ಬ್ಯಾಂಕ್ ಖಾತೆಯಾಗಿದ್ದು, ಇದು ಮಲ್ಟಿ ಆಪ್ಷನ್ ಠೇವಣಿ (ಎಂಒಡಿ)ಗೆ ಜೋಡಣೆ ಹೊಂದಿದೆ, ಈ ವೈಶಿಷ್ಟ್ಯವು ಉಳಿತಾಯ ಬ್ಯಾಂಕ್ ಖಾತೆಯಿಂದ ಮಿತಿ ಮಿತಿಗಿಂತ ಹೆಚ್ಚಿನ ಹಣವನ್ನು ಆಟೋಮೆಟಿಕ್ ಆಗಿ ಸ್ಥಿರ ಠೇವಣಿಗೆ ವರ್ಗಾಯಿಸುತ್ತದೆ.

SBI Savings Plus: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಈ ಉಳಿತಾಯ ಖಾತೆ ಮೇಲೆ ಹೆಚ್ಚು ಬಡ್ಡಿ
ಸಾಂದರ್ಭಿಕ ಚಿತ್ರ
Follow us on

ಅಲ್ಪಾವಧಿಗಾಗಿ ನೀವು ಬಯಸುವ ನಗದು ಇಡುವುದಕ್ಕೆ ಅಥವಾ ತುರ್ತು ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗಲು ಉಳಿತಾಯ ಖಾತೆಯು (ಸೇವಿಂಗ್ಸ್​ ಅಕೌಂಟ್) ಉತ್ತಮ ಆಯ್ಕೆಯಾಗಿದೆ. ಆದರೆ ಉಳಿತಾಯ ಖಾತೆಯಲ್ಲಿನ ಬಡ್ಡಿದರ ಕಡಿಮೆ, ಎಫ್‌ಡಿಗಿಂತ ಕಡಿಮೆ. ದೇಶದ ಅತಿದೊಡ್ಡ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಈಗ ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲೆ ಕೇವಲ ಶೇ 2.70ರಷ್ಟು ಬಡ್ಡಿಯನ್ನು ನೀಡುತ್ತದೆ. ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲೆ ಕನಿಷ್ಠ ಮಾಸಿಕ ಬಾಕಿ (ಮಂತ್ಲಿ ಮಿನಿಮಮ್ ಬ್ಯಾಲೆನ್ಸ್) ಬಾಧ್ಯತೆಯೂ ಇದೆ. ಒಂದು ವೇಳೆ ನೀವು ಎಸ್​ಬಿಐ ಗ್ರಾಹಕರಾಗಿದ್ದರೆ ನಿಮ್ಮ ಹಣದಿಂದ ಹೆಚ್ಚಿನ ಆದಾಯವನ್ನು ಪಡೆಯುವ ಆಯ್ಕೆ ಇದೆ.

ಎಸ್‌ಬಿಐ ಸೇವಿಂಗ್ಸ್ ಪ್ಲಸ್
ಸೇವಿಂಗ್ಸ್ ಪ್ಲಸ್ ಖಾತೆಯು ಎಸ್‌ಬಿಐನ ಒಂದು ವಿಶಿಷ್ಟ ಉಳಿತಾಯ ಬ್ಯಾಂಕ್ ಖಾತೆಯಾಗಿದ್ದು, ಇದು ಮಲ್ಟಿ ಆಪ್ಷನ್ ಠೇವಣಿ (ಎಂಒಡಿ)ಗೆ ಜೋಡಣೆ ಹೊಂದಿದೆ, ಈ ವೈಶಿಷ್ಟ್ಯವು ಉಳಿತಾಯ ಬ್ಯಾಂಕ್ ಖಾತೆಯಿಂದ ಮಿತಿ ಮಿತಿಗಿಂತ ಹೆಚ್ಚಿನ ಹಣವನ್ನು ಆಟೋಮೆಟಿಕ್ ಆಗಿ ಸ್ಥಿರ ಠೇವಣಿಗೆ ವರ್ಗಾಯಿಸುತ್ತದೆ. ಎಫ್​ಡಿಗೆ ವರ್ಗಾಯಿಸಲು ಕನಿಷ್ಠ ಮಿತಿ 35,000 ರೂಪಾಯಿ. ಒಂದು ವೇಳೆ ಉಳಿತಾಯ ಖಾತೆಯ ಬಾಕಿ 3,000 ರೂಪಾಯಿಗಿಂತ ಕಡಿಮೆಯಿದ್ದರೆ, ಮೊತ್ತವನ್ನು ಎಫ್‌ಡಿಯಿಂದ ಕಡಿತಗೊಳಿಸಲಾಗುತ್ತದೆ ಮತ್ತು ಉಳಿತಾಯ ಖಾತೆಗೆ ಜಮಾ ಮಾಡಲಾಗುವುದು. ಇದರಿಂದಾಗಿ ಕನಿಷ್ಠ ಬಾಕಿ ಮೊತ್ತವನ್ನು ಅಷ್ಟಕ್ಕೇ ತರಲಾಗುವುದು. ಈ ಠೇವಣಿಯ ಅವಧಿಯು 1 ವರ್ಷದಿಂದ 5 ವರ್ಷಗಳವರೆಗೆ ಇರುತ್ತದೆ. ಇದೇ ಅವಧಿಯ ಎಫ್​ಡಿಗೆ ಅನ್ವಯವಾಗುವ ಬಡ್ಡಿದರವೇ ಇರುತ್ತದೆ. ಎಸ್‌ಬಿಐ ಎಫ್‌ಡಿಯಲ್ಲಿ 1 ವರ್ಷದಿಂದ 5 ವರ್ಷಗಳವರೆಗೆ ನೀಡುವ ಬಡ್ಡಿದರಗಳು ಶೇ 5 ಮತ್ತು ಶೇ 5.30ರ ಮಧ್ಯೆ ಇರುತ್ತದೆ.

ಅರ್ಹತಾ ಮಾನದಂಡಗಳು
ಎಸ್‌ಬಿಐ ಪ್ರಕಾರ, ಕೆವೈಸಿ ದಾಖಲೆಗಳನ್ನು ಹೊಂದಿರುವ ಎಲ್ಲ ವ್ಯಕ್ತಿಗಳು ಸೇವಿಂಗ್ಸ್ ಪ್ಲಸ್ ಖಾತೆಯನ್ನು ತೆರೆಯಲು ಅರ್ಹರು. ಈ ಖಾತೆಯನ್ನು ವಿಭಿನ್ನ ವಿಧಾನಗಳಲ್ಲಿ ತೆರೆಯಬಹುದು- ಒಬ್ಬರು, ಜಂಟಿಯಾಗಿ, ಇಬ್ಬರೂ ಅಥವಾ ಬದುಕುಳಿದವರು, ಈ ಹಿಂದಿನವರು ಅಥವಾ ಬದುಕುಳಿದವರು, ಯಾರಾದರೂ ಅಥವಾ ಬದುಕುಳಿದವರು ಇತ್ಯಾದಿ ಈ ಮೋಡ್​ಗಳಲ್ಲಿ ಖಾತೆ ತೆರೆಯಬಹುದು.

ಮುಖ್ಯ ಲಕ್ಷಣಗಳು
– ಮಲ್ಟಿ ಆಪ್ಷನ್ ಠೇವಣಿ (ಎಫ್‌ಡಿ)ಗೆ ವರ್ಗಾಯಿಸಲು ಕನಿಷ್ಠ ಮಿತಿ 35,000 ರೂಪಾಯಿ.
– MODಗೆ ಕನಿಷ್ಠ ವರ್ಗಾವಣೆ 10,000 ರೂ. ಆ ನಂತರ ಪ್ರತಿ ಬಾರಿಯೂ 1,000 ರೂ.ಗಳ ಗುಣಾಕಾರದಲ್ಲಿ ವರ್ಗಾವಣೆ ಮಾಡಬೇಕು
– ಮಾಸಿಕ ಸರಾಸರಿ ಬ್ಯಾಲೆನ್ಸ್ ಅಗತ್ಯವಿಲ್ಲ.
– MOD ವಿರುದ್ಧ ಸಾಲವೂ ಲಭ್ಯವಿದೆ.
– ವರ್ಷಕ್ಕೆ 25 ಉಚಿತ ಚೆಕ್​ಗಳು.

ಪಾಸ್‌ಬುಕ್, ಎಟಿಎಂ ಕಾರ್ಡ್, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಎಸ್‌ಎಂಎಸ್ ಅಲರ್ಟ್ ಸೌಲಭ್ಯ ಕೂಡ ಉಳಿತಾಯ ಬ್ಯಾಂಕ್ ಖಾತೆ ಗ್ರಾಹಕರಿಗೆ ಲಭ್ಯವಿದೆ.
(ಮೂಲ: ಮನಿ9.ಕಾಮ್)

ಇದನ್ನೂ ಓದಿ: SBI minimum balance: ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಬಗ್ಗೆ ಎಸ್‌ಬಿಐ ಹೊಸ ನಿಯಮ

ಇದನ್ನೂ ಓದಿ: SBI Online Personal Loan: ಯಾವಾಗಾದರೂ ಎಲ್ಲಿಂದಾದರೂ ಎಸ್​ಬಿಐ ಆನ್​ಲೈನ್ ಲೋನ್​ಗೆ ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ

(SBI savings plus which fetches more interest than normal savings account. Here is the details)

Published On - 4:54 pm, Fri, 9 July 21