Sign In

By signing in or creating an account, you agree with Associated Broadcasting Company's Terms & Conditions and Privacy Policy.

Swiggy: ತಂಪುಪಾನೀಯಕ್ಕೆ ಹೆಚ್ಚುವರಿ 4.50 ರೂಪಾಯಿ ಜಿಎಸ್​ಟಿ ಹಾಕಿದ್ದಕ್ಕೆ ಸ್ವಿಗ್ಗಿಗೆ ರೂ. 20 ಸಾವಿರ ದಂಡ

ಎಂಆರ್​ಪಿ ಮೇಲೂ ತಂಪು ಪಾನೀಯಕ್ಕೆ ರೂ. 4.50 ಜಿಎಸ್​ಟಿ ವಿಧಿಸಿದ ಕಾರಣಕ್ಕೆ ಆನ್‌ಲೈನ್ ಆಹಾರ ಡೆಲಿವರಿ ಪ್ಲಾಟ್​ಫಾರ್ಮ್ ಆದ ಸ್ವಿಗ್ಗಿ 20,000 ರೂಪಾಯಿ ದಂಡವನ್ನು ಪಾವತಿಸಬೇಕಾಗಿದೆ. ವರದಿಯ ಪ್ರಕಾರ, ಈ ಪ್ರಕರಣವು 2018ರಷ್ಟು ಹಿಂದಿನದು.

Swiggy: ತಂಪುಪಾನೀಯಕ್ಕೆ ಹೆಚ್ಚುವರಿ 4.50 ರೂಪಾಯಿ ಜಿಎಸ್​ಟಿ ಹಾಕಿದ್ದಕ್ಕೆ ಸ್ವಿಗ್ಗಿಗೆ ರೂ. 20 ಸಾವಿರ ದಂಡ
ಸ್ವಿಗ್ಗಿ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Srinivas Mata

Updated on: Jul 09, 2021 | 11:37 PM

ತಂಪು ಪಾನೀಯಕ್ಕೆ ರೂ. 4.50 ಜಿಎಸ್​ಟಿ ವಿಧಿಸಿದ ಕಾರಣಕ್ಕೆ ಆನ್‌ಲೈನ್ ಆಹಾರ ಡೆಲಿವರಿ ಪ್ಲಾಟ್​ಫಾರ್ಮ್ ಆದ ಸ್ವಿಗ್ಗಿ 20,000 ರೂಪಾಯಿ ದಂಡವನ್ನು ಪಾವತಿಸಬೇಕಾಗಿದೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಈ ಪ್ರಕರಣವು 2018ರಷ್ಟು ಹಿಂದಿನದು. ಪಂಚಕುಲ ಮೂಲದ ಅಭಿಷೇಕ್ ಗರ್ಗ್ 144 ರೂಪಾಯಿ ಮೌಲ್ಯದ ಗಾರ್ಲಿಕ್ ಸ್ಟಿಕ್ ಮತ್ತು 90 ರೂಪಾಯಿ ಬೆಲೆಯ ಮೂರು ತಂಪು ಪಾನೀಯಗಳನ್ನು ಸ್ವಿಗ್ಗಿ ಮೊಬೈಲ್ ಆ್ಯಪ್ ಮೂಲಕ ಆರ್ಡರ್ ಮಾಡಿದ್ದರು. ಆದರೆ ಗರ್ಗ್ ಅವರಿಗೆ ನಂತರ ಗೊತ್ತಾಗಿದ್ದೇನೆಂದರೆ, ತಂಪು ಪಾನೀಯಗಳಿಗೆ ಜಿಎಸ್​ಟಿ ಆಗಿ 4.50 ರೂಪಾಯಿ ವಿಧಿಸಲಾಗಿತ್ತು. ಆದರೆ ಅವರು ಅದಾಗಲೇ ಸಾಫ್ಟ್​ಡ್ರಿಂಕ್ ಮೇಲೆ ಎಂಆರ್​ಪಿ (ಗರಿಷ್ಠ ಮಾರಾಟ ದರ) ಪಾವತಿಸಿದ್ದರು. ಇದರ ಪರಿಣಾಮವಾಗಿ, ಗರ್ಗ್ ಅವರು ಬೆಂಗಳೂರು ಮೂಲದ ಸ್ವಿಗ್ಗಿ ಕಂಪೆನಿ ವಿರುದ್ಧ ಗ್ರಾಹಕ ಸರಕುಗಳ (ಉತ್ಪಾದನಾ ವೆಚ್ಚದ ಕಡ್ಡಾಯ ಮುದ್ರಣ ಮತ್ತು ಗರಿಷ್ಠ ಚಿಲ್ಲರೆ ಬೆಲೆ) ಕಾಯ್ದೆ 2006ರ ಅಡಿಯಲ್ಲಿ ಪ್ರಕರಣ ದಾಖಲಿಸಿದರು.

ಆದರೆ, ಸ್ವಿಗ್ಗಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತು. ತಾನು ಮಧ್ಯವರ್ತಿ ಮಾತ್ರ. ವ್ಯಾಪಾರಿಯ ಪರವಾಗಿ ಹಣವನ್ನು ಸಂಗ್ರಹಿಸುತ್ತಿದ್ದು, ಆ ಮಾರಾಟಗಾರರು ಬಿಲ್​ನಲ್ಲಿ ಅನ್ವಯವಾಗುವ ಎಲ್ಲ ತೆರಿಗೆಗಳನ್ನು ವಿಧಿಸುತ್ತಾರೆ ಎಂದು ತಿಳಿಸಿತ್ತು. ಮತ್ತೊಂದೆಡೆ, ಪಂಚಕುಲದ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಸ್ವಿಗ್ಗಿಯ ಹೇಳಿಕೆಯನ್ನು ತಳ್ಳಿಹಾಕಿತು. ಮತ್ತು “ಸ್ವಿಗ್ಗಿ ತನ್ನ ಗ್ರಾಹಕರಿಗೆ ಯಾವುದೇ ಪರಿಗಣನೆಯಿಲ್ಲದೆ ಸಂಪೂರ್ಣವಾಗಿ ಅನಪೇಕ್ಷಿತ ಸೇವೆಯನ್ನು ಒದಗಿಸುತ್ತಿದೆ” ಎಂದು ಹೇಳಿತು. ಪತ್ರಿಕೆಯಲ್ಲಿ ವರದಿಯಾದ ಪ್ರಕಾರ, ಗ್ರಾಹಕ ನ್ಯಾಯಾಲಯವು ಹೀಗೆ ಹೇಳಿದೆ: “ಸ್ವಿಗ್ಗಿ ಆನ್‌ಲೈನ್ ಶಾಪಿಂಗ್ ಪೋರ್ಟಲ್ ಆಗಿದ್ದು, ಗ್ರಾಹಕರಿಂದ ಆರ್ಡರ್​ಗಳನ್ನು ಸಂಗ್ರಹಿಸಿ ಮತ್ತು ಅದನ್ನು ವಿತರಣೆ ಉದ್ದೇಶಕ್ಕಾಗಿ ಸಂಬಂಧಪಟ್ಟ ಮಾರಾಟಗಾರ/ ಮಾರಾಟಗಾರರಿಗೆ ಕಳುಹಿಸುತ್ತದೆ. ಹೀಗೆ ಖರೀದಿದಾರ ಮತ್ತು ಮಾರಾಟಗಾರರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಖಂಡಿತವಾಗಿಯೂ ದತ್ತಿ ಸಂಸ್ಥೆ ಅಲ್ಲ,” ಎಂದಿದೆ.

ಸ್ವಿಗ್ಗಿಯು ನ್ಯಾಯಯುತವಾಗಿ ನಡೆದುಕೊಂಡಿಲ್ಲ ಮತ್ತು ಸೇವೆಯಲ್ಲಿ ವ್ಯತ್ಯಯ ಮಾಡಿದೆ. ಆದ್ದರಿಂದ ಸ್ವಿಗ್ಗಿ ತಪ್ಪಿತಸ್ಥ ಎಂದು ಕಂಡುಬಂದಿದೆ. ಆದ್ದರಿಂದ ದೂರು ಸಲ್ಲಿಸಿದ ದಿನಾಂಕದಿಂದ ಅದನ್ನು ಪಾವತಿಸುವ ದಿನಾಂಕದ ತನಕ ವಾರ್ಷಿಕ ಶೇ 9ರ ಬಡ್ಡಿಯೊಂದಿಗೆ ಗರ್ಗ್‌ಗೆ 4.50 ರೂ. ಮರುಪಾವತಿ ಮಾಡಲು ನಿರ್ದೇಶನ ನೀಡಿತು. ಮಾನಸಿಕ ಹಿಂಸೆ, ಕಿರುಕುಳ ನೀಡಿದ್ದಕ್ಕಾಗಿ ಮತ್ತು ದಾವೆ ಶುಲ್ಕವಾಗಿ ಗರ್ಗ್‌ಗೆ ₹ 10,000 ಪಾವತಿಸಲು ನ್ಯಾಯಾಲಯ ಸ್ವಿಗ್ಗಿಗೆ ಆದೇಶಿಸಿತು. ಇದರ ಜತೆಗೆ 10,000 ರೂಪಾಯಿಯನ್ನು ಹರಿಯಾಣ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯ ಖಾತೆಗೆ ಜಮಾ ಮಾಡಲು ಸ್ವಿಗ್ಗಿಗೆ ಹೇಳಲಾಗಿದೆ.

ಇದನ್ನೂ ಓದಿ: ಭಾರತೀಯರಿಗೆ ಅತಿಪ್ರಿಯವಾಗಿರುವ ತಿನಿಸ್ಯಾವುದು ಗೊತ್ತಾ?

(Bengaluru based online food delivery platform Swiggy to pay Rs 20,000 for charging Rs 4.50 as GST on soft drinks)

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !