Adani Row: ಅದಾನಿ ಪ್ರಕರಣ; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಮಾಹಿತಿ ನೀಡಲಿದೆ ಸೆಬಿ
ಅದಾನಿ ಸಮೂಹದ ಷೇರುಗಳ ಮೇಲೆ ಯಾವ ರೀತಿಯ ನಿಗಾ ಇರಿಸಲಾಗಿದೆ. ಇತ್ತೀಚಿನ ಆರೋಪಗಳು ಮತ್ತು ಷೇರು ಮೌಲ್ಯದ ಏರಿಳಿತಕ್ಕೆ ಸಂಬಂಧಿಸಿ ಸೆಬಿ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಅಧಿಕಾರಿಗಳು ವಿವರಣೆ ನೀಡಲಿದ್ದಾರೆ.

ನವದೆಹಲಿ: ಅದಾನಿ ಸಮೂಹವು (Adani Group) ಎಫ್ಪಿಒ ಅಥವಾ ಫಾಲೋ ಆನ್ ಪಬ್ಲಿಕ್ ಆಫರ್ (Follow-On Public Offer) ರದ್ದುಪಡಿಸಿದ ವಿಚಾರವಾಗಿ ಮಾರುಕಟ್ಟೆ ನಿಯಂತ್ರಕ ಸೆಬಿ ಪರಿಶೀಲನೆ ನಡೆಸುತ್ತಿದೆ. ಈ ವಾರದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರಿಗೆ ವಿವರ ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 15ರಂದು ಹಣಕಾಸು ಸಚಿವರನ್ನು ಸೆಬಿ ಅಧಿಕಾರಿಗಳು ಭೇಟಿಯಾಗಲಿದ್ದಾರೆ. ಈ ವೇಳೆ ಅದಾನಿ ಸಮೂಹಕ್ಕೆ ಸಂಬಂಧಿಸಿದ ವಿವರ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಅದಾನಿ ಸಮೂಹದ ಷೇರುಗಳ ಮೇಲೆ ಯಾವ ರೀತಿಯ ನಿಗಾ ಇರಿಸಲಾಗಿದೆ. ಇತ್ತೀಚಿನ ಆರೋಪಗಳು ಮತ್ತು ಷೇರು ಮೌಲ್ಯದ ಏರಿಳಿತಕ್ಕೆ ಸಂಬಂಧಿಸಿ ಸೆಬಿ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಅಧಿಕಾರಿಗಳು ವಿವರಣೆ ನೀಡಲಿದ್ದಾರೆ.
ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್ಬರ್ಗ್ ರಿಸರ್ಚ್ ಅಕ್ರಮ ಮತ್ತು ಷೇರು ಮೌಲ್ಯ ತಿರುಚಿದ ವಿಚಾರವಾಗಿ ಜನವರಿ ತಿಂಗಳ ಕೊನೆಯಲ್ಲಿ ಅದಾನಿ ಸಮೂಹದ ವಿರುದ್ಧ ಆರೋಪ ಮಾಡಿತ್ತು. ಪರಿಣಾಮವಾಗಿ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಷೇರುಗಳ ಮೌಲ್ಯದಲ್ಲಿ ಗಣನೀಯ ಕುಸಿತವಾಗಿತ್ತು. ಕಂಪನಿಯ ಮಾರುಕಟ್ಟೆ ಮೌಲ್ಯದಲ್ಲಿ 100 ಶತಕೋಟಿ ಡಾಲರ್ಗೂ ಹೆಚ್ಚು ಕುಸಿತವಾಗಿತ್ತು.
ಇದನ್ನೂ ಓದಿ: Hindenburg Research: ಹಿಂಡನ್ಬರ್ಗ್ ವರದಿಗೆ ಕಿಮ್ಮತ್ತೇ ನೀಡಿರಲಿಲ್ಲ ಅಮೆರಿಕದ ನ್ಯಾಯಾಲಯ; ಕಾರಣ ಇಲ್ಲಿದೆ ನೋಡಿ
ಅದಾನಿ ಸಮೂಹಕ್ಕೆ ಸಂಬಂಧಿಸಿದ ವಿದೇಶಿ ನಿಧಿಗಳ ಬಗ್ಗೆಯೂ ಸೆಬಿ ಹಣಕಾಸು ಸಚಿವರಿಗೆ ವಿವರಣೆ ನೀಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ವಿಚಾರವಾಗಿ ತಕ್ಷಣಕ್ಕೆ ಸೆಬಿ ಪ್ರತಿಕ್ರಿಯೆ ನೀಡಿಲ್ಲ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ, ಹಿಂಡನ್ಬರ್ಗ್ ರಿಸರ್ಚ್ ವಿರುದ್ಧ ಅಮೆರಿಕದಲ್ಲಿ ಕಾನೂನು ಹೋರಾಟ ನಡೆಸಲು ಉದ್ಯಮಿ ಗೌತಮ್ ಅದಾನಿ ಮುಂದಾಗಿರುವ ಬಗ್ಗೆ ಕಳೆದ ವಾರ ವರದಿಯಾಗಿತ್ತು. ಅದಾನಿ ಅವರು ಅಮೆರಿಕದ ದುಬಾರಿ ಕಾನೂನು ಸಲಹಾ ಸಂಸ್ಥೆ ವಾಚೆಲ್ ಮೊರೆ ಹೋಗಿದ್ದಾರೆ. ವಾಚೆಲ್ನ ನ್ಯೂಯಾರ್ಕ್ ಘಟಕದ ಹಿರಿಯ ವಕೀಲರನ್ನು ಅದಾನಿ ಸಮೂಹದ ಕಾನೂನು ಸೇವೆಗೆ ನಿಯೋಜಿಸಲಾಗಿದೆ ಎಂದು ಬ್ರಿಟನ್ನ ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ