Closing Bell: ಸೆನ್ಸೆಕ್ಸ್ 1457 ಪಾಯಿಂಟ್ಸ್, ನಿಫ್ಟಿ 427 ಪಾಯಿಂಟ್ಸ್ ಕುಸಿತ; ಷೇರು ಹೂಡಿಕೆದಾರರಿಗೆ ಭಾರೀ ನಷ್ಟ

ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಜೂನ್ 13ನೇ ತಾರೀಕಿನ ಸೋಮವಾರದಂದು ಭಾರೀ ಪ್ರಮಾಣದಲ್ಲಿ ನೆಲ ಕಚ್ಚಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Closing Bell: ಸೆನ್ಸೆಕ್ಸ್ 1457 ಪಾಯಿಂಟ್ಸ್, ನಿಫ್ಟಿ 427 ಪಾಯಿಂಟ್ಸ್ ಕುಸಿತ; ಷೇರು ಹೂಡಿಕೆದಾರರಿಗೆ ಭಾರೀ ನಷ್ಟ
Follow us
TV9 Web
| Updated By: Srinivas Mata

Updated on: Jun 13, 2022 | 5:59 PM

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜೂನ್ 13ನೇ ತಾರೀಕಿನ ಸೋಮವಾರದಂದು ಭಾರೀ ಕುಸಿತ ದಾಖಲಿಸಿದವು ಜಾಗತಿಕ ಮಾರುಕಟ್ಟೆಯಲ್ಲೇ ದುರ್ಬಲತೆ ಕಂಡುಬಂತು. ಈ ಹಿನ್ನೆಲೆಯಲ್ಲಿ ನಿಫ್ಟಿ ಸೂಚ್ಯಂಕವು 15,800 ಪಾಯಿಂಟ್ಸ್​ಗಿಂತ ಕೆಳಗೆ ಬಂತು. ದಿನಾಂತ್ಯಕ್ಕೆ ಸೆನ್ಸೆಕ್ಸ್ 1456.74 ಪಾಯಿಂಟ್ಸ್ ಅಥವಾ ಶೇ 2.68ರಷ್ಟು ನೆಲ ಕಚ್ಚಿ, 52,846.70 ಪಾಯಿಂಟ್ಸ್​ಗೆ ದಿನದ ವಹಿವಾಟನ್ನು ಮುಗಿಸಿತು. ನಿಫ್ಟಿ 427.40 ಪಾಯಿಂಟ್ಸ್ ಅಥವಾ ಶೇ 2.64ರಷ್ಟು ಇಳಿಕೆ ಕಂಡು, 15,774.40 ಪಾಯಿಂಟ್ಸ್​ನಲ್ಲಿ ವ್ಯವಹಾರ ಕೊನೆಗೊಳಿಸಿತು. ಇಂದಿನ ವಹಿವಾಟಿನಲ್ಲಿ 2759 ಕಂಪೆನಿಯ ಷೇರು ಇಳಿಕೆ ದಾಖಲಿಸಿದರೆ, 117 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ ಮತ್ತು 650 ಕಂಪೆನಿಯ ಷೇರುಗಳು ಏರಿಕೆ ಕಂಡವು.

ಇಂದಿನ ವ್ಯವಹಾರದಲ್ಲಿ ಎಲ್ಲ ವಲಯಗಳು ಕುಸಿತ ದಾಖಲಿಸಿದವು. ಬಿಎಸ್​ಇ ಮಿಡ್​ಕ್ಯಾಪ್ ಶೇ 2.7ರಷ್ಟು ಮತ್ತು ಸ್ಮಾಲ್​ಕ್ಯಾಪ್ ಶೇ 3ರಷ್ಟು ಇಳಿಕೆ ಕಂಡವು. ಬ್ಯಾಂಕ್, ಕ್ಯಾಪಿಟಲ್ ಗೂಡ್ಸ್, ವಾಹನ, ಮಾಹಿತಿ ತಂತ್ರಜ್ಞಾನ, ಲೋಹ, ರಿಯಾಲ್ಟಿ, ಪಿಎಸ್​ಯು ಬ್ಯಾಂಕ್, ತೈಲ ಮತ್ತು ಅನಿಲ ಸೂಚ್ಯಂಕಗಳು ತಲಾ ಶೇ 2ರಿಂದ 4ರಷ್ಟು ಕುಸಿದವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ನೆಸ್ಟ್ಲೆ ಶೇ 0.47

ಬಜಾಜ್ ಆಟೋ ಶೇ 0.01

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಬಜಾಜ್​ ಫಿನ್​ಸರ್ವ್ ಶೇ -7.08

ಬಜಾಜ್ ಫೈನಾನ್ಸ್ ಶೇ -5.46

ಇಂಡಸ್​ಇಂಡ್ ಬ್ಯಾಂಕ್ ಶೇ -5.23

ಟೆಕ್​ ಮಹೀಂದ್ರಾ ಶೇ -5.22

ಹಿಂಡಾಲ್ಕೋ ಶೇ -5.00

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Warren Buffett: ಷೇರುಗಳಲ್ಲಿ ಹೂಡಿಕೆ ಮಾಡುವವರು ಹೂಡಿಕೆದಾರರ ಜಗದ್ಗುರು ವಾರೆನ್ ಬಫೆಟ್ ಮಾತುಗಳನ್ನೊಮ್ಮೆ ಕೇಳಿಸಿಕೊಳ್ಳಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ