AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokenisation Explainer: ಜುಲೈನಿಂದ ಆನ್‌ಲೈನ್ ಪಾವತಿಗೆ ಹೊಸ ಕ್ರೆಡಿಟ್, ಡೆಬಿಟ್ ಕಾರ್ಡ್ ನಿಯಮಗಳು

ಜುಲೈನಿಂದ ಅನ್ವಯ ಆಗುವಂತೆ ಕ್ರೆಡಿಟ್, ಡೆಬಿಟ್ ಕಾರ್ಡ್ ಆನ್​ಲೈನ್ ಪಾವತಿಗಳಿಗೆ ಹೊಸ ನಿಯಮ ಅನ್ವಯ ಆಗಲಿದೆ. ಆ ಬಗ್ಗೆ ವಿವರಣೆ ಇಲ್ಲಿದೆ.

Tokenisation Explainer: ಜುಲೈನಿಂದ ಆನ್‌ಲೈನ್ ಪಾವತಿಗೆ ಹೊಸ ಕ್ರೆಡಿಟ್, ಡೆಬಿಟ್ ಕಾರ್ಡ್ ನಿಯಮಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 13, 2022 | 2:00 PM

Share

ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್​ ಕಾರ್ಡ್​ದಾರರು ಈ ತಿಂಗಳು ಮಾಡಲೇಬೇಕಾದ ಕೆಲಸದ ಬಗ್ಗೆ ಗುರುತು ಹಾಕಿಟ್ಟುಕೊಳ್ಳಿ. ಏಕೆಂದರೆ, ಜೂನ್ 30, 2022ರ ಗಡುವಿನೊಂದಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕಾರ್ಡ್ ವಹಿವಾಟುಗಳ ಟೋಕನೈಸೇಷನ್ ಪರಿಚಯವನ್ನು ಕಾನೂನು ಮಾಡಿದೆ. ಇದರೊಂದಿಗೆ ಜೂನ್ ತಿಂಗಳು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಬಹಳ ಮುಖ್ಯವಾಗಿದೆ. ಟೋಕನೈಸೇಷನ್ ಎಂಬುದು ಈಗ ಅಸ್ತಿತ್ವದಲ್ಲಿ ಇರುವ ಕಾರ್ಡ್ ವಿವರಗಳ ಪರ್ಯಾಯಕ್ಕೆ ಸಂಬಂಧಿಸಿದೆ. ಟೋಕನ್ ಎಂದು ಕರೆಯುವ ವಿಶಿಷ್ಟ ಕೋಡ್‌ನೊಂದಿಗೆ ಮತ್ತು ಟೋಕನೈಸೇಷನ್ ವಿನಂತಿಯ ಅನುಷ್ಠಾನವನ್ನು ಕಾರ್ಡ್​ದಾರರಿಂದ ಅಡಿಷನಲ್ ಫ್ಯಾಕ್ಟರ್ ಅಥೆಂಟಿಕೇಷನ್ (AFA) ಮೂಲಕ ಮಾಡಲಾಗುತ್ತದೆ. ಆರ್‌ಬಿಐನ ಈ ಕ್ರಮವು ಕ್ರೆಡಿಟ್ ಕಾರ್ಡ್‌ನ ಕ್ರೆಡೆನ್ಷಿಯಲ್​ಗಳನ್ನು ಭದ್ರಪಡಿಸಲಿದ್ದು, ಜೂನ್ ಅಂತ್ಯದವರೆಗೆ ಟೋಕನೈಸೇಷನ್ ವ್ಯವಸ್ಥೆಯನ್ನು ಆರಿಸಿಕೊಂಡಿದ್ದರೆ ಮತ್ತು ಅಗತ್ಯವಾದದ್ದನ್ನು ಮಾಡಲು ವಿಫಲವಾದರೆ ಜುಲೈನಿಂದ ನೀವು ಡಿಜಿಟಲ್ ವಹಿವಾಟುಗಳನ್ನು ಮಾಡುವಾಗ ನಿಮ್ಮ ಕಾರ್ಡ್ ವಿವರಗಳನ್ನು ಮ್ಯಾನ್ಯುಯಲ್ ಆಗಿ ನಮೂದಿಸಬೇಕಾಗುತ್ತದೆ.

ಕಾರ್ಡ್ ಟೋಕನೈಸೇಷನ್ ಎಂದರೇನು?

ಟೋಕನೈಸ್ ಆದ ಕಾರ್ಡ್‌ಗಳ ಮೂಲಕ ಮಾಡಿದ ವಹಿವಾಟು ವಂಚನೆಯನ್ನು ಎದುರಿಸಲು ಸುರಕ್ಷತಾ ಕ್ರಮ ಆಗಿರುತ್ತದೆ. ಏಕೆಂದರೆ ವಹಿವಾಟಿನ ಸಮಯದಲ್ಲಿ ವ್ಯಾಪಾರಿಯೊಂದಿಗೆ ಕಾರ್ಡ್ ವಿವರಗಳನ್ನು ಹಂಚಿಕೊಳ್ಳುವಾಗ ನಿಜವಾದ ಕಾರ್ಡ್ ವಿವರಗಳನ್ನು ಟೋಕನ್‌ನೊಂದಿಗೆ ಬದಲಾಯಿಸಲಾಗುತ್ತದೆ. ಈ ಟೋಕನ್ ಪ್ರತಿ ಕಾರ್ಡ್‌ಗೆ ಮತ್ತು ಜುಲೈನಲ್ಲಿ ಡಿಜಿಟಲ್ ವಹಿವಾಟು ಮಾಡುವಾಗ ಟೋಕನ್ ವಿನಂತಿಸುವವರಿಗೆ ಹಾಗೂ ವ್ಯಾಪಾರಿಗಳಿಗೆ ವಿಶಿಷ್ಟವಾಗಿರುತ್ತದೆ. ಕಾರ್ಡ್ ಟೋಕನೈಸೇಷನ್ ಸಿಸ್ಟಂ ಬಗ್ಗೆ ಐಸಿಐಸಿಐ ಬ್ಯಾಂಕ್ ಹೇಳುವುದೇನೆಂದರೆ, “ಟೋಕನೈಸೇಷನ್ ಎನ್ನುವುದು ನಿಜವಾದ ಅಥವಾ ಸ್ಪಷ್ಟವಾದ ಕಾರ್ಡ್ ಸಂಖ್ಯೆಯನ್ನು “ಟೋಕನ್” ಎಂಬ ಪರ್ಯಾಯ ಕೋಡ್‌ನೊಂದಿಗೆ ಬದಲಾಯಿಸುವುದನ್ನು ಸೂಚಿಸುತ್ತದೆ.” (ಕಾರ್ಡ್‌ನ ಟೋಕನೈಸೇಷನ್‌ಗಾಗಿ ಗ್ರಾಹಕರು ಮತ್ತು ಅನುಗುಣವಾದ ಟೋಕನ್ ನೀಡಲು ಕಾರ್ಡ್ ನೆಟ್‌ವರ್ಕ್‌ಗೆ ಅದನ್ನು ರವಾನಿಸಲಾಗಿತ್ತದೆ) ಮತ್ತು ವ್ಯಾಪಾರಿ (ಟೋಕನ್ ವಿನಂತಿಸುವವರು ಮತ್ತು ವ್ಯಾಪಾರಿ ಒಂದೇ ಘಟಕ ಆಗಿರಬಹುದು ಅಥವಾ ಆಗಿಲ್ಲದಿರಬಹುದು).”

ಕಾರ್ಡ್ ಟೋಕನೈಸೇಷನ್​ ವಂಚಕರಿಂದ ಹೇಗೆ ರಕ್ಷಿಸುತ್ತದೆ?

ಕಾರ್ಡ್ ಟೋಕನೈಸೇಷನ್ ವ್ಯವಸ್ಥೆಗೆ ಮೊದಲು ಕಾರ್ಡ್​ದಾರರು ತಮ್ಮ ಕಾರ್ಡ್ ವಿವರಗಳನ್ನು ವ್ಯಾಪಾರಿಯ ವೆಬ್‌ಸೈಟ್‌ನಲ್ಲಿ ಇಂಟರ್​​ನೆಟ್‌ನಲ್ಲಿ ಉಳಿಸುವ ಟ್ರೆಂಡ್ ಅನುಸರಿಸುತ್ತಿದ್ದರು. ಈ ವಿಧಾನವು ಕಾರ್ಡ್‌ದಾರರಿಗೆ ಸಮಯವನ್ನು ಉಳಿಸುತ್ತದೆ. ಏಕೆಂದರೆ ಅವರು ಭವಿಷ್ಯದ ವಹಿವಾಟುಗಳಲ್ಲಿ ಕಾರ್ಡ್ ವಿವರಗಳನ್ನು ಮ್ಯಾನ್ಯುಯಲ್​ ಆಗಿ ನಮೂದಿಸಬೇಕಾಗಿಲ್ಲ. ಇದು ಹಲವಾರು ವಂಚಕರು ಕಾರ್ಡ್ ಕ್ರೆಡೆನ್ಷಿಯಲ್​ಗಳನ್ನು ಕದಿಯಲು ಮತ್ತು ಅಂತಿಮವಾಗಿ ಖಾತೆಯಿಂದ ಹಣವನ್ನು ಕಳೆದುಕೊಳ್ಳುವ ಮೂಲಕ ಕಾರ್ಡ್ ಹೊಂದಿರುವವರು ಬಲಿಪಶುವಾಗಲು ಕಾರಣವಾಗಿದೆ. ವಂಚಕರು ಮತ್ತು ಹೆಚ್ಚುತ್ತಿರುವ ಕಾರ್ಡ್ ವಂಚನೆಗಳನ್ನು ಎದುರಿಸಲು ಆರ್​ಬಿಐನಿಂದ ಟೋಕನೈಸೇಷನ್ – ಕಾರ್ಡ್ ವಹಿವಾಟುಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಕಾರ್ಡ್​ನ ಗೋಪ್ಯ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ ಮತ್ತು ಇಂಟರ್​ನೆಟ್​ನಲ್ಲಿ ಇನ್ನು ಮುಂದೆ ಉಳಿಸಲಾಗುವುದಿಲ್ಲ.

ಕಾರ್ಡ್ ಟೋಕನೈಸೇಷನ್ ವ್ಯವಸ್ಥೆಯ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ICICI ಬ್ಯಾಂಕ್ ಹೇಳುವಂತೆ, “ನಿಜವಾದ ಕಾರ್ಡ್ ಡೇಟಾ, ಟೋಕನ್ ಮತ್ತು ಇತರ ಸಂಬಂಧಿತ ವಿವರಗಳನ್ನು ಅಧಿಕೃತ ಕಾರ್ಡ್ ನೆಟ್‌ವರ್ಕ್‌ಗಳಿಂದ ಸುರಕ್ಷಿತ ವಿಧಾನದಲ್ಲಿ ಸಂಗ್ರಹಿಸಲಾಗುತ್ತದೆ. ಟೋಕನ್ ವಿನಂತಿಸುವವರು ಪ್ರಾಥಮಿಕ ಖಾತೆ ಸಂಖ್ಯೆ (PAN), ಅಂದರೆ ಕಾರ್ಡ್ ಸಂಖ್ಯೆ ಅಥವಾ ಯಾವುದೇ ಇತರ ಕಾರ್ಡ್ ವಿವರಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಟೋಕನ್ ವಿನಂತಿದಾರರನ್ನು ಸುರಕ್ಷತೆ ಮತ್ತು ಭದ್ರತೆಗಾಗಿ ಪ್ರಮಾಣೀಕರಿಸಲು ಕಾರ್ಡ್ ನೆಟ್‌ವರ್ಕ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ಅದು ಅಂತರರಾಷ್ಟ್ರೀಯ ಉತ್ತಮ ಅಭ್ಯಾಸಗಳು / ಜಾಗತಿಕವಾಗಿ ಅಂಗೀಕರಿಸಿದ ಮಾನದಂಡಗಳಿಗೆ ಅನುಗುಣವಾಗಿರುತ್ತದೆ.”

ಕಾರ್ಡ್ ಟೋಕನೈಸೇಷನ್ ಪ್ರಯೋಜನಗಳು

ಹೀಗೆ ಮುಂದುವರಿಸಲು ಕಾರ್ಡ್ ಟೋಕನೈಸೇಷನ್ ಅಗತ್ಯವಿಲ್ಲ; ಆದರೆ ಗ್ರಾಹಕರು ತಮ್ಮ ಕಾರ್ಡ್ ಅನ್ನು ಟೋಕನೈಸ್ ಮಾಡಲು ಆಯ್ಕೆ ಮಾಡಬಹುದು ಮತ್ತು ಇಲ್ಲದಿದ್ದರೆ ಜೂನ್ ಅಂತ್ಯದವರೆಗೆ ಆನ್‌ಲೈನ್ ವಹಿವಾಟುಗಳನ್ನು ಪೂರ್ಣಗೊಳಿಸಲು ಪ್ರತಿ ಬಾರಿ ಕಾರ್ಡ್ ಸಂಪೂರ್ಣ ವಿವರಗಳನ್ನು ನಮೂದಿಸಬೇಕು. ಅಂದರೆ ಕಾರ್ಡ್ ವಿವರಗಳನ್ನು ಮತ್ತಷ್ಟು ವಹಿವಾಟುಗಳನ್ನು ಪೂರ್ಣಗೊಳಿಸಲು ಉಳಿಸಬಹುದು. ಟೋಕನ್ ಒಂದು ನಿರ್ದಿಷ್ಟ ವ್ಯಾಪಾರಿಯಲ್ಲಿ ಒಂದೇ ಕಾರ್ಡ್‌ಗೆ ವಿಶಿಷ್ಟವಾಗಿರುತ್ತದೆ, ಇದು ಕಾರ್ಡ್ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಕಳ್ಳತನಕ್ಕೆ ಒಳಗಾಗುವ ಅಪಾಯವನ್ನು ಪರಿಗಣಿಸಿ ಪ್ರತಿಯೊಬ್ಬ ಕಾರ್ಡ್‌ದಾರರಿಂದ ಕಾರ್ಡ್ ಟೋಕನೈಸೇಷನ್ ಅನ್ನು ಅನ್ವಯಿಸಬೇಕು. ಕಾರ್ಡ್ ಟೋಕನೈಸೇಷನ್ ಉಚಿತವಾಗಿದೆ ಮತ್ತು ಯಾವುದೇ ವಹಿವಾಟನ್ನು ಪೂರ್ಣಗೊಳಿಸಲು ಕಾರ್ಡ್‌ದಾರರು ಟೋಕನ್ ವಿನಂತಿದಾರರಿಂದ ಅಧಿಕೃತಗೊಳಿಸಿದ ಯಾವುದೇ ಕಾರ್ಡ್‌ಗಳನ್ನು ಬಳಸಬಹುದು.

ಮರ್ಚೆಂಟ್ ಪೋರ್ಟಲ್‌ನಲ್ಲಿ ಕಾರ್ಡ್ ಅನ್ನು ಟೋಕನೈಸ್ ಮಾಡಿದ ನಂತರ ಗ್ರಾಹಕರು ಕಾರ್ಡ್‌ನ ಕೊನೆಯ ನಾಲ್ಕು ಅಂಕಿಗಳನ್ನು ಮಾತ್ರ ವೀಕ್ಷಿಸಬಹುದು ಮತ್ತು ಕಾರ್ಡ್ ಅನ್ನು ಬದಲಾಯಿಸಿದರೆ, ನವೀಕರಿಸಿದರೆ, ಮರುವಿತರಣೆ ಮಾಡಿದರೆ ಅಥವಾ ಅಪ್‌ಗ್ರೇಡ್ ಮಾಡಿದರೆ ಕಾರ್ಡ್ ಹೊಂದಿರುವವರು ವ್ಯಾಪಾರಿ ವೆಬ್‌ಸೈಟ್‌ಗೆ ಭೇಟಿ ನೀಡಲು ಕ್ರಮವಾಗಿ ಮತ್ತೊಮ್ಮೆ ಟೋಕನ್ ಅನ್ನು ರಚಿಸಬೇಕಾಗುತ್ತದೆ. ಬಹು ಕಾರ್ಡ್‌ಗಳನ್ನು ಬಳಸುವ ಕಾರ್ಡ್‌ದಾರರಿಗೆ ಟೋಕನೈಸ್ ಮಾಡಿದ ಕಾರ್ಡ್‌ಗಳನ್ನು ವೀಕ್ಷಿಸಲು ಮತ್ತು ನಿರ್ವಹಿಸಲು ಕಾರ್ಡ್ ಹೊಂದಿರುವವರಿಗೆ “ಬ್ಯಾಂಕ್ ಒಂದು ಪೋರ್ಟಲ್ ಅನ್ನು ಒದಗಿಸುತ್ತದೆ ಎಂದು ಐಸಿಐಸಿಐ ಬ್ಯಾಂಕ್ ಸ್ಪಷ್ಟಪಡಿಸಿದೆ. ಕಾರ್ಡ್ ಹೊಂದಿರುವವರು ಈ ಪೋರ್ಟಲ್ ಮೂಲಕ ಆಯಾ ಕಾರ್ಡ್‌ಗಳಿಗೆ ಟೋಕನ್‌ಗಳನ್ನು ವೀಕ್ಷಿಸಬಹುದು/ಅಳಿಸಬಹುದು. ಟೋಕನೈಸ್ ಮಾಡಲಾದ ಕಾರ್ಡ್‌ಗಳನ್ನು ನಿರ್ವಹಿಸಲು ವಿನಂತಿಯನ್ನು ಸಲ್ಲಿಸಲು ಗ್ರಾಹಕರು ಫೋನ್ ಬ್ಯಾಂಕಿಂಗ್ ಸೇವೆಗೆ ಕರೆ ಮಾಡಬಹುದು.” ಕಾರ್ಡ್ ಸುರಕ್ಷತೆ ಮತ್ತು ಟೋಕನೈಸ್ ಮಾಡಿದ ಕಾರ್ಡ್ ನಿರ್ವಹಣೆಯ ವಿಷಯದಲ್ಲಿ ಗಡುವಿನ ಮೊದಲು ಮುನ್ನಡೆಸುವುದಕ್ಕೆ ಆರಿಸಿಕೊಳ್ಳುವುದು ಸರಿಯಲ್ಲ.

ನಿಮ್ಮ ಕಾರ್ಡ್ ಅನ್ನು ಆನ್‌ಲೈನ್ ವಹಿವಾಟಿಗೆ ಸುರಕ್ಷಿತವಾಗಿ ಕಾರ್ಡ್ ಅನ್ನು ಬಳಸಲು ದ್ವಿಗುಣಗೊಳಿಸುತ್ತದೆ ಮತ್ತು ನಿಮ್ಮ ಕಾರ್ಡ್ ವಿವರಗಳನ್ನು ತಪ್ಪಾದವರು ಬಳಸುವುದನ್ನು ತಡೆಯುತ್ತದೆ.

ಕಾರ್ಡ್ ಟೋಕನೈಸೇಷನ್ ಅನ್ನು ಹೇಗೆ ಕಾರ್ಯಗತಗೊಳಿಸಬಹುದು?

ಟೋಕನೈಸೇಷನ್ ಅನ್ನು ವೀಸಾ/ಮಾಸ್ಟರ್‌ಕಾರ್ಡ್/ಅಮೆರಿಕನ್ ಎಕ್ಸ್‌ಪ್ರೆಸ್/ರುಪೇಯಂತಹ ಮಾನ್ಯತೆ ಪಡೆದ ಕಾರ್ಡ್ ನೆಟ್‌ವರ್ಕ್‌ಗಳು ಮತ್ತು ವಿತರಿಸುವ ಬ್ಯಾಂಕ್‌ಗಳು ಮಾತ್ರ ನಡೆಸಬಹುದು. ಕಾರ್ಡ್ ಟೋಕನೈಸೇಷನ್‌ಗಾಗಿ ಗ್ರಾಹಕರ ವಿನಂತಿಗಳನ್ನು ಸ್ವೀಕರಿಸುವ ಮತ್ತು ವಿತರಿಸುವ ಬ್ಯಾಂಕ್ ಅಥವಾ ಕಾರ್ಡ್ ನೆಟ್‌ವರ್ಕ್‌ಗೆ ವಿನಂತಿಯನ್ನು ಪರಿಣಾಮಕಾರಿಯಾಗಿ ಫಾರ್ವರ್ಡ್ ಮಾಡುವ ವ್ಯಾಪಾರಿಯ ಪೋರ್ಟಲ್‌ನಲ್ಲಿ ಮನವಿಯನ್ನು ಪ್ರಾರಂಭಿಸುವ ಮೂಲಕ ಕಾರ್ಡ್‌ದಾರರು ಕಾರ್ಡ್ ಅನ್ನು ಟೋಕನೈಸ್ ಮಾಡಬಹುದು. ನಿಮ್ಮ ಟೋಕನ್ ಅನ್ನು ನಿಮ್ಮ ಕಾರ್ಡ್ ವಿತರಿಸುವ ಬ್ಯಾಂಕ್‌ನ ಅನುಮೋದನೆಯೊಂದಿಗೆ ಶೀಘ್ರವಾಗಿ ನೀಡಲಾಗುತ್ತದೆ. ಕಾರ್ಡ್‌ಗೆ ಅನುಗುಣವಾಗಿ ಟೋಕನ್ ವಿನಂತಿಸುವವರು ಮತ್ತು ವ್ಯಾಪಾರಿ ನಂತರ ನಿಮ್ಮ ಟೋಕನೈಸ್ ಮಾಡಿದ ಕಾರ್ಡ್‌ನ ಸಹಾಯದಿಂದ ದೇಶೀಯ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ವಹಿವಾಟುಗಳನ್ನು ಯಶಸ್ವಿಯಾಗಿ ನಿರ್ವಹಿಸಬಹುದು. ಟೋಕನೈಸೇಷನ್ ವಿನಂತಿಯ ನೋಂದಣಿಗಾಗಿ ಐಸಿಐಸಿಐ ಬ್ಯಾಂಕ್ ಹೇಳುತ್ತದೆ “ಟೋಕನೈಸೇಷನ್ ವಿನಂತಿಯ ನೋಂದಣಿಯನ್ನು ಅಡಿಷನಲ್ ಫ್ಯಾಕ್ಟರ್ ಅಥೆಂಟಿಕೇಷನ್ (AFA) ಮೂಲಕ ಸ್ಪಷ್ಟ ಗ್ರಾಹಕರ ಒಪ್ಪಿಗೆಯೊಂದಿಗೆ ಮಾತ್ರ ಮಾಡಲಾಗುತ್ತದೆ ಮತ್ತು ಚೆಕ್ ಬಾಕ್ಸ್‌ನ ಬಲವಂತದ / ಡೀಫಾಲ್ಟ್ / ಮ್ಯಾನ್ಯುಯೆಲ್/ ರೇಡಿಯೋ ಬಟನ್, ಇತ್ಯಾದಿ ಆಯ್ಕೆಯ ಮೂಲಕ ಅಲ್ಲ.”

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Tokenisation: ಟೋಕನೈಸೇಷನ್ ಗಡುವನ್ನು ಜೂನ್ 30, 2022ಕ್ಕೆ ಮುಂದೂಡಿದ ಆರ್​ಬಿಐ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ