Warren Buffett: ಷೇರುಗಳಲ್ಲಿ ಹೂಡಿಕೆ ಮಾಡುವವರು ಹೂಡಿಕೆದಾರರ ಜಗದ್ಗುರು ವಾರೆನ್ ಬಫೆಟ್ ಮಾತುಗಳನ್ನೊಮ್ಮೆ ಕೇಳಿಸಿಕೊಳ್ಳಿ
ಷೇರು ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಲು ಏನು ಮಾಡಬೇಕು ಎಂಬ ಬಗ್ಗೆ ವಾರೆನ್ ಬಫೆಟ್ ಅವರು ಅತ್ಯುತ್ತಮವಾದ ಸಲಹೆ ಮಾಡಿದ್ದಾರೆ.
ಹೂಡಿಕೆಗಳ ಜಗದ್ಗುರು ವಾರೆನ್ ಬಫೆಟ್ (Warren Buffett) ಅವರು ಹೇಳುವಂತೆ, ದೀರ್ಘಕಾಲದವರೆಗೆ ಷೇರುಗಳನ್ನು ಇಟ್ಟುಕೊಳ್ಳದ ಹೊರತು ಜನರು ಅವುಗಳನ್ನು ಖರೀದಿಸಬಾರದು ಎನ್ನುತ್ತಾರೆ. ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ವಾರೆನ್ ಬಫೆಟ್ ಹಂಚಿಕೊಂಡ ವಿಡಿಯೋದಲ್ಲಿ, ಬರ್ಕ್‌ಷೈರ್ ಹ್ಯಾಥ್‌ವೇ ಸಿಇಒ ಹೂಡಿಕೆದಾರರಿಗೆ ಷೇರುಗಳು ಶೇ 50ರಷ್ಟು ಕುಸಿದರೂ ಸಿದ್ಧರಾಗಿರಲು ಸಲಹೆ ನೀಡಿರುವುದು ಕಂಡುಬಂದಿದೆ. “ಬರ್ಕ್‌ಷೈರ್ ಇತಿಹಾಸದಲ್ಲಿ ಮೂರು ಬಾರಿ ಸ್ಟಾಕ್ ಶೇ 50ರಷ್ಟು ಕುಸಿದಿದೆ,” ಎಂದು ಅವರು ಹೇಳಿದ್ದಾರೆ. “ಈಗ ನೀವು ಅದನ್ನು ಹೊಂದಿದ್ದಲ್ಲಿ ಅಥವಾ ಹಣವನ್ನು ಸಾಲ ಪಡೆದಿದ್ದರೆ ನಿಮ್ಮನ್ನು ಶುದ್ಧಗೊಳಿಸಬಹುದು.”
ಬರ್ಕ್‌ಷೈರ್ ಷೇರುಗಳು ಕುಸಿದಾಗ ಅದರಲ್ಲಿ ಏನೂ ತಪ್ಪಿಲ್ಲ ಎಂದು ವಾರೆನ್ ಬಫೆಟ್ ಸೇರಿಸಿದ್ದಾರೆ. ಹೂಡಿಕೆದಾರರು ಸರಿಯಾದ ಮನಸ್ಥಿತಿ ಹೊಂದಿರಬೇಕು. ಹಾಗೊಂದು ವೇಳೆ ಇಲ್ಲದಿದ್ದಲ್ಲಿ ಬೆಲೆಯ ಏರಿಳಿತಗಳಿಂದ ಅಥವಾ ಇತರರು ಏನು ಹೇಳುತ್ತಾರೆಂದು ಅವಲಂಬಿಸಿ ಕಾರ್ಯನಿರ್ವಹಿಸಬೇಕು ಎಂದುಕೊಂಡು, ತಪ್ಪಾದ ಸಮಯದಲ್ಲಿ ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಶುರು ಮಾಡುತ್ತಾರೆ. ಜಮೀನನ್ನು ಇಟ್ಟುಕೊಳ್ಳುವಷ್ಟು ಆರ್ಥಿಕ ಮತ್ತು ಮಾನಸಿಕ ಸಿದ್ಧತೆ ಇದಕ್ಕೆ ಅಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
ಈ ಹಿಂದೆ, ಬಫೆಟ್ ಅವರು ತಮ್ಮ ಬೆಲೆಗಳು ಹೆಚ್ಚಾಗಬಹುದೆಂದು ನಿರೀಕ್ಷಿಸುವ ಕಾರಣದಿಂದ ಷೇರುಗಳಲ್ಲಿ ಹೂಡಿಕೆ ಮಾಡದಂತೆ ಜನರಿಗೆ ಸಲಹೆ ನೀಡಿದ್ದರು. ಅವರು 2020ರಲ್ಲಿ ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ, ಜನರು ತಾವು ಅರ್ಥ ಮಾಡಿಕೊಳ್ಳುವ ಕಂಪೆನಿಗಳಲ್ಲಿ ಹೂಡಿಕೆ ಮಾಡಬೇಕು ಮತ್ತು ಅವರ ಷೇರುಗಳು ದೀರ್ಘಾವಧಿಯ ಮೌಲ್ಯವನ್ನು ನೀಡುತ್ತದೆ ಎಂದು ಅವರು ನಂಬುತ್ತಾರೆ. “ಮುಂದಿನ ವರ್ಷ ಮಳೆ ಬೀಳಲಿದೆ ಎಂದು ಅವರು ಭಾವಿಸುತ್ತಾರೆಯೇ ಎಂಬುದರ ಆಧಾರದ ಮೇಲೆ ಯಾರೂ ಜಮೀನನ್ನು ಖರೀದಿಸುವುದಿಲ್ಲ” ಎಂದು ಅವರು ಹೇಳಿದ್ದರು.
ಬಫೆಟ್ ಅವರು ಯಾವ ಕಂಪೆನಿಗಳಲ್ಲಿ ಹೂಡಿಕೆ ಮಾಡಬೇಕೆಂದು ನಿರ್ಧರಿಸಲು ಸಹಾಯ ಆಗುವುದಕ್ಕೆ ಮೂರು ನಿಯಮಗಳನ್ನು ಹೊಂದಿದ್ದಾರೆ. “ಮೊದಲನೆಯದಾಗಿ, ಅವರು ತಮ್ಮ ಕಾರ್ಯಾಚರಣೆಯಲ್ಲಿ ಅಗತ್ಯವಿರುವ ನಿವ್ವಳ ಸ್ಪಷ್ಟವಾದ ಬಂಡವಾಳದ ಮೇಲೆ ಉತ್ತಮ ಆದಾಯವನ್ನು ಗಳಿಸಬೇಕು. ಎರಡನೆಯದಾಗಿ, ಅವುಗಳನ್ನು ಸಮರ್ಥ ಮತ್ತು ಪ್ರಾಮಾಣಿಕ ವ್ಯವಸ್ಥಾಪಕರು ನಡೆಸಬೇಕು. ಅಂತಿಮವಾಗಿ, ಷೇರು ಸಮಂಜಸವಾದ ಬೆಲೆಯಲ್ಲಿ ಲಭ್ಯವಿರಬೇಕು,” ಎಂದು ಬಫೆಟ್ ಅವರು 2019ರಲ್ಲಿ ಬರ್ಕ್‌ಷೈರ್ ಷೇರುದಾರರಿಗೆ ತಿಳಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Warren Buffett: ಹೂಡಿಕೆದಾರರ ಜಗದ್ಗುರು ವಾರೆನ್ ಬಫೆಟ್ ಹೇಳಿರುವ ಬದುಕಿನ ಪಾಠಗಳು