Stock Market Opening Bell: ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 250ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ
ಏಪ್ರಿಲ್ 18ನೇ ತಾರೀಕಿನ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭಾರೀ ಇಳಿಕೆ ಕಂಡಿವೆ. ಪ್ರಮುಖವಾಗಿ ಏರಿಕೆ, ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.
ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏಪ್ರಿಲ್ 18ನೇ ತಾರೀಕಿನ ಸೋಮವಾರದಂದು ಭಾರೀ ಕುಸಿತ ಕಂಡಿದೆ. ಬಿಎಸ್ಇ ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್ ನೆಲ ಕಚ್ಚಿದರೆ, ನಿಫ್ಟಿ 50 ಸೂಚ್ಯಂಕವು 279 ಪಾಯಿಂಟ್ಸ್ ಕುಸಿಯಿತು. ಇನ್ನು ನಿಫ್ಟಿ ಬ್ಯಾಂಕ್ 639 ಪಾಯಿಂಟ್ಸ್ ಇಳಿಕೆ ಕಂಡಿತ್ತು. ಇದು ಸೋಮವಾರದ ಆರಂಭಿಕ ವಹಿವಾಟಿನಲ್ಲೇ ಕಂಡುಬಂದ ಬೆಳವಣಿಗೆ ಆಗಿದೆ. ವಲಯವಾರು ಗಮನಿಸುವುದಾದರೆ ಮಾಹಿತಿ ತಂತ್ರಜ್ಞಾನ ಸೂಚ್ಯಂಕವು ಶೇ 4ರಷ್ಟು ಇಳಿದರೆ, ಬ್ಯಾಂಕ್ ಸೂಚ್ಯಂಕ ಶೇ 1ರಷ್ಟು ಕೆಳಗೆ ಇಳಿದಿತ್ತು. ವಾಹನ, ಎಫ್ಎಂಸಿಜಿ, ಫಾರ್ಮಾ ಮತ್ತು ಲೋಹದ ವಲಯದಲ್ಲಿ ಖರೀದಿ ಕಂಡುಬಂತು. ಹಿಂದಿನ ವಹಿವಾಟಿನ ಅಂತ್ಯವನ್ನು ಸೆನ್ಸೆಕ್ಸ್ 58,338.93 ಪಾಯಿಂಟ್ಸ್ನೊಂದಿಗೆ ಮುಗಿಸಿತ್ತು. ಇಂದಿನ ವ್ಯವಹಾರವನ್ನು 1000 ಪಾಯಿಂಟ್ಸ್ ಇಳಿಕೆಯೊಂದಿಗೆ, ಅಂದರೆ 57,338.58ರೊಂದಿಗೆ ಶುರು ಮಾಡಿತು. ಇನ್ನು ದಿನದ ಕನಿಷ್ಠ ಮಟ್ಟ 57,152.75 ಪಾಯಿಂಟ್ಸ್ ಮುಟ್ಟಿದರೆ, ಗರಿಷ್ಠ ಮಟ್ಟ 57,420.80 ಪಾಯಿಂಟ್ಸ್ಗೆ ಏರಿತ್ತು.
ನಿಫ್ಟಿ-50 ಸೂಚ್ಯಂಕವು ಈ ಹಿಂದಿನ ದಿನಾಂತ್ಯಕ್ಕೆ 17,475.65 ಪಾಯಿಂಟ್ಸ್ನಲ್ಲಿ ವ್ಯವಹಾರ ಮುಗಿಸಿತ್ತು. ಇಂದಿನ ಆರಂಭವನ್ನು 17,183.45ರೊಂದಿಗೆ ಶುರು ಮಾಡಿತು. ಕನಿಷ್ಠ ಮಟ್ಟ 17,160.70 ಮುಟ್ಟಿದರೆ, ಗರಿಷ್ಠ ಮಟ್ಟ 17,237.75 ಪಾಯಿಂಟ್ಸ್ಗೆ ಏರಿತು. ಈ ವರದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 1026.56 ಪಾಯಿಂಟ್ಸ್ ಕೆಳಗೆ ಇಳಿದು, 57312.37 ಪಾಯಿಂಟ್ಸ್ನಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ- 50 ಸೂಚ್ಯಂಕವು 267.25 ಪಾಯಿಂಟ್ಸ್ ಕುಸಿದು 17,208.30 ಪಾಯಿಂಟ್ಸ್ನಲ್ಲಿ ವ್ಯವಹಾರ ನಡೆಸುತ್ತಿತ್ತು.
ನಿಫ್ಟಿಯಲ್ಲಿ ಗಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಎನ್ಟಿಪಿಸಿ ಶೇ 4.03 ಟಾಟಾ ಸ್ಟೀಲ್ ಶೇ 2.37 ಎಸ್ಬಿಐ ಲೈಫ್ ಇನ್ಷೂರೆನ್ಸ್ ಶೇ 1.66 ಒಎನ್ಜಿಸಿ ಶೇ 1.61 ಕೋಲ್ ಇಂಡಿಯಾ ಶೇ 1.31
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಇನ್ಫೋಸಿಸ್ ಶೇ -7.03 ಟೆಕ್ ಮಹೀಂದ್ರಾ ಶೇ -5.1 ಎಚ್ಡಿಎಫ್ಸಿ ಶೇ -3.64 ಎಚ್ಡಿಎಫ್ಸಿ ಬ್ಯಾಂಕ್ ಶೇ -3.36 ಟಿಸಿಎಸ್ ಶೇ -3.08
ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್