AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPI Based Inflation: ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಮಾರ್ಚ್​ನಲ್ಲಿ 4 ತಿಂಗಳ ಗರಿಷ್ಠ ಮಟ್ಟವಾದ ಶೇ 14.55ಕ್ಕೆ

2022ರ ಮಾರ್ಚ್​ ತಿಂಗಳ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರವು ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇ 14.55ಕ್ಕೆ ತಲುಪಿಕೊಂಡಿದೆ.

WPI Based Inflation: ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಮಾರ್ಚ್​ನಲ್ಲಿ 4 ತಿಂಗಳ ಗರಿಷ್ಠ ಮಟ್ಟವಾದ ಶೇ 14.55ಕ್ಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 18, 2022 | 2:18 PM

Share

ವಾಣಿಜ್ಯ ಸಚಿವಾಲಯ ಏಪ್ರಿಲ್ 18ರಂದು ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಸಗಟು ಬೆಲೆ ಸೂಚ್ಯಂಕ (WPI) ಆಧರಿಸಿದ ಭಾರತದ ಹಣದುಬ್ಬರವು (Inflation) 2022ರ ಮಾರ್ಚ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇ 14.55ಕ್ಕೆ ಏರಿಕೆಯಾಗಿದೆ. ಫೆಬ್ರವರಿಯಲ್ಲಿ ಶೇ 13.11 ಇತ್ತು. 2021ರ ಮಾರ್ಚ್​ನಲ್ಲಿ ಸಗಟು ದರ ಹಣದುಬ್ಬರವು ಶೇಕಡಾ 7.89ರಷ್ಟಿತ್ತು. ಇನ್ನೊಂದು ಶೇಕಡಾ 10 ಹೆಚ್ಚು ಅಂದರೆ ಸಗಟು ಬೆಲೆ ಸೂಚ್ಯಂಕ ಹಣದುಬ್ಬರವು ಈಗ ಸತತ 12 ತಿಂಗಳು ಎರಡಂಕಿಯಲ್ಲಿ ಇದ್ದಂತಾಗುತ್ತದೆ. ಏಪ್ರಿಲ್ 12ರಂದು ಬಿಡುಗಡೆಯಾದ ಮಾಹಿತಿ ನಂತರ ಮಾರ್ಚ್‌ನಲ್ಲಿ ಸಗಟು ಹಣದುಬ್ಬರ ಏರಿಕೆಯು ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿ, ಹೆಚ್ಚು ನಿಕಟವಾಗಿ ಟ್ರ್ಯಾಕ್ ಮಾಡಲಾದ ಚಿಲ್ಲರೆ ಹಣದುಬ್ಬರ ದರವನ್ನು ಕಳೆದ ತಿಂಗಳು 17 ತಿಂಗಳ ಗರಿಷ್ಠ ಶೇ 6.95ಕ್ಕೆ ಜಿಗಿದ ನಂತರ ಬಂದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣಕಾಸು ನೀತಿ ಗುರಿಯನ್ನು ಸಿಪಿಐ ಹಣದುಬ್ಬರದ ವ್ಯಾಖ್ಯಾನದಲ್ಲಿ ವಿವರಿಸಲಾಗಿದೆ. ಹೆಚ್ಚಿನ ಸಗಟು ದರ ಸೂಚ್ಯಂಕ ಹಣದುಬ್ಬರವು ಹೆಚ್ಚಿನ ಗ್ರಾಹಕ ಬೆಲೆಗಳಿಗೆ ಪೂರ್ವಭಾವಿಯಾಗಿ ಕಂಡುಬರುತ್ತದೆ. ಏಕೆಂದರೆ ಹೆಚ್ಚುತ್ತಿರುವ ವೆಚ್ಚವನ್ನು ಉತ್ಪಾದಕರು ಗ್ರಾಹಕರಿಗೆ ವರ್ಗಾಯಿಸುತ್ತಾರೆ. ಮಾರ್ಚ್‌ ತಿಂಗಳಿನಲ್ಲಿ ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಏರಿಕೆಯು ಎಲ್ಲದರ ಬೆಲೆಗಳ ಹೆಚ್ಚಳದಿಂದ ಆಗಿದೆ. ಆದರೂ ಆಹಾರೇತರ ವಸ್ತುಗಳು ಶುಲ್ಕವನ್ನು ಹೆಚ್ಚಿಸಿವೆ.

“2022ರ ಮಾರ್ಚ್​ನಲ್ಲಿ ಹಣದುಬ್ಬರದ ಹೆಚ್ಚಿನ ದರವು ಪ್ರಾಥಮಿಕವಾಗಿ ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಖನಿಜ ತೈಲಗಳು, ಮೂಲ ಲೋಹಗಳು, ಇತ್ಯಾದಿಗಳ ಬೆಲೆಗಳಲ್ಲಿ ಏರಿಕೆಯಾಗಿದ್ದು, ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ ಜಾಗತಿಕ ಪೂರೈಕೆ ಸರಪಳಿಯಲ್ಲಿನ ಅಡಚಣೆಯಿಂದಾಗಿ ಆಗಿದೆ,” ಎಂದು ವಾಣಿಜ್ಯ ಸಚಿವಾಲಯ ಹೇಳಿದೆ. WPIಯ ಇಂಧನ ಮತ್ತು ಎನರ್ಜಿ ಗುಂಪಿನ ಸೂಚ್ಯಂಕವು ಮಾರ್ಚ್‌ನಲ್ಲಿ ತಿಂಗಳಿನಿಂದ ತಿಂಗಳಿಗೆ ಶೇ 5.68ರಷ್ಟು ಜಿಗಿದಿದೆ, ಆದರೆ ಉತ್ಪಾದಿಸಿದ ಉತ್ಪನ್ನಗಳಿಗೆ ಅದೇ ಅವಧಿಯಲ್ಲಿ ಶೇ 2.31 ಏರಿಕೆಯಾಗಿದೆ. WPI ಬ್ಯಾಸ್ಕೆಟ್‌ನ ಶೇ 64.23ರಷ್ಟು ಉತ್ಪಾದಿಸಿದ ಉತ್ಪನ್ನಗಳಿವೆ. ಆಹಾರ ಸೂಚ್ಯಂಕವು ಹೋಲಿಸಿದರೆ ಫೆಬ್ರವರಿಯಿಂದ ಮಾರ್ಚ್‌ನಲ್ಲಿ ಕೇವಲ ಶೇ 0.54 ಏರಿಕೆಯಾಗಿದೆ. ಆದರೂ ಮಾರ್ಚ್‌ನಲ್ಲಿ ತಿಂಗಳಿನಿಂದ ತಿಂಗಳ ಹೆಚ್ಚಳವು ಫೆಬ್ರವರಿಯಲ್ಲಿ ದಾಖಲಿಸಿದ್ದಕ್ಕಿಂತ ಶೇ 0.06 ಹೆಚ್ಚಾಗಿದೆ.

WPI ಹಣದುಬ್ಬರ – ಪ್ರಮುಖ ವಸ್ತುಗಳು (ಮಾರ್ಚ್ 2022) WPI- ಶೇ 14.55 ಆಹಾರ ಪದಾರ್ಥಗಳು- ಶೇ 8.06 ಧಾನ್ಯಗಳು- ಶೇ 8.12 ಗೋಧಿ- ಶೇ 14.04 ಬೇಳೆಕಾಳುಗಳು- ಶೇ 2.22 ತರಕಾರಿಗಳು- ಶೇ 19.88 ಎಣ್ಣೆ ಬೀಜಗಳು- ಶೇ 22.49 ಇಂಧನ ಮತ್ತು ಎನರ್ಜಿ- ಶೇ 34.52 ತಯಾರಿಸಿದ ಉತ್ಪನ್ನಗಳು- ಶೇ 10.71

ಒಟ್ಟಾರೆಯಾಗಿ, WPIಯ ಎಲ್ಲ ಸರಕುಗಳ ಸೂಚ್ಯಂಕವು ಫೆಬ್ರವರಿಯಲ್ಲಿ 0.76ಗೆ ವಿರುದ್ಧವಾಗಿ ತಿಂಗಳಿನಿಂದ ತಿಂಗಳಿಗೆ 2.69ರಷ್ಟು ಏರಿಕೆಯಾಗಿದೆ. ಇದು ಬೆಲೆ ಒತ್ತಡದಲ್ಲಿ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ರಷ್ಯಾ ಮತ್ತು ಉಕ್ರೇನ್ ಮಧ್ಯದ ಯುದ್ಧದ ಪರಿಣಾಮವು ಇಂಧನೇತರ ಬೆಲೆಗಳಲ್ಲಿ ಹೆಚ್ಚುತ್ತಿರುವಂತೆ ತೋರುತ್ತಿದ್ದು, ಫೆಬ್ರವರಿಯಿಂದ ಮಾರ್ಚ್‌ನಲ್ಲಿ ಗೋಧಿಯ ಸೂಚ್ಯಂಕವು ಶೇ 3.19ರಷ್ಟು ಶೇಕಡಾ ಏರಿಕೆಯಾಗಿದೆ. ಪರಿಣಾಮವಾಗಿ, ಫೆಬ್ರವರಿಯಲ್ಲಿ ಗೋಧಿ ಹಣದುಬ್ಬರವು ಶೇಕಡಾ 11.03ರಿಂದ ಶೇಕಡಾ 14.04ಕ್ಕೆ ಏರಿತು. ಅಂದಹಾಗೆ ರಷ್ಯಾ ಮತ್ತು ಉಕ್ರೇನ್ ಗೋಧಿಯ ಪ್ರಮುಖ ಜಾಗತಿಕ ರಫ್ತುದಾರರು.

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು? ಒಂದು ಉತ್ಪನ್ನ ಅಥವಾ ವಸ್ತು ಅಂತಿಮವಾಗಿ ಗ್ರಾಹಕರನ್ನು ತಲುಪುವುದಕ್ಕೆ ಮುಂಚೆ ವಿವಿಧ ಹಂತಗಳನ್ನು ದಾಟಿ ಬರುತ್ತದೆ. ಮೊದಲಿಗೆ ಉತ್ಪಾದಕರು, ಅಂದರೆ ಆ ವಸ್ತುವಿನ ತಯಾರಕರು. ಆ ನಂತರದಲ್ಲಿ ಹೋಲ್​ಸೇಲರ್ (ಸಗಟು ಮಾರಾಟಗಾರರು). ಅದಾದ ಮೇಲೆ ಚಿಲ್ಲರೆ ಮಾರಾಟಗಾರರು (ರೀಟೇಲರ್). ಕೊನೆಗೆ ಗ್ರಾಹಕರನ್ನು ತಲುಪುತ್ತದೆ. ಇದಕ್ಕೆ ಇನ್ನೂ ಒಂದೆರಡು ಪದರ ಸೇರ್ಪಡೆ ಕೂಡ ಆಗಬಹುದು. ಹೀಗೆ ವಿವಿಧ ಹಂತವನ್ನು ದಾಟುವಾಗ ವಿಧಿಸುವ ಶುಲ್ಕ ಅಥವಾ ದರ ಕೂಡ ಬದಲಾಗುತ್ತಾ ಹೋಗುತ್ತದೆ. ಇದನ್ನು ಸೂಚಿಸುವುದಕ್ಕೆ ಒಂದು ಮಾನದಂಡ ಬೇಕಲ್ಲಾ, ಅದನ್ನು ಸಗಟು ದರ ಸೂಚ್ಯಂಕ ಎನ್ನಲಾಗುತ್ತದೆ.

ಇನ್ನು ಉತ್ಪನ್ನಗಳು, ವಸ್ತು, ಸೇವೆಗಳ ದರ ಎಷ್ಟು ಏರಿಕೆ ಆಗಿದೆ ಎಂಬುದನ್ನು ಸೂಚಿಸುವುದಕ್ಕೆ ಹಣದುಬ್ಬರ ಎನ್ನಲಾಗುತ್ತದೆ. ಅಲ್ಲಿಗೆ ಈ ಎರಡು ವ್ಯಾಖ್ಯಾನವನ್ನು ಒಗ್ಗೂಡಿಸಿದರೆ ನಿಮಗೆ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು ಅಂತ ಗೊತ್ತಾಗುತ್ತದೆ. ಸರಿ, ಇದರಿಂದ ನಮ್ಮ ಮೇಲೆ ಏನು ಪರಿಣಾಮ ಅಂದರೆ, ದಿನ ಬಳಕೆಯ ವಸ್ತು, ಸೇವೆ, ಉತ್ಪನ್ನಗಳು ಸಿಕ್ಕಾಪಟ್ಟೆ ಜಾಸ್ತಿ ಆಗಿವೆ ಅಂತ ಅಂದುಕೊಳ್ಳುತ್ತಿರುತ್ತೇವಲ್ಲಾ ಅಥವಾ ಪರವಾಗಿಲ್ಲ ಮುಂಚೆಗಿಂತ ಈಗ ಸ್ವಲ್ಪ ಬೆಲೆ ಇಳಿದಿದೆ ಅಂತ ನಿರಾಳ ಆಗುತ್ತೇವಲ್ಲಾ ಅದಕ್ಕೆ ಕಾರಣ ತಿಳಿಯುವುದು ಈ ಅಂಕಿ- ಅಂಶದ ಮೂಲಕವಾಗಿ.

ಇದನ್ನೂ ಓದಿ: ಬೆಲೆ ಏರಿಕೆ ನಮಗೆ ನುಂಗಲಾರದ ತುತ್ತಾಗಿದೆ, ತಿಂಡಿ ಬೆಲೆ ಶೇ. 10 ಜಾಸ್ತಿ ಮಾಡ್ತಿದ್ದೇವೆ -ಸಹಿಸಿಕೊಳೀ ಎಂದ ಹೋಟೆಲು ಮಾಲೀಕರು

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್