Inflation In UK: ಯುನೈಟೆಡ್​ ಕಿಂಗ್​ಡಮ್​ನಲ್ಲಿ ಫೆಬ್ರವರಿ ತಿಂಗಳ ಹಣದುಬ್ಬರ 30 ವರ್ಷಗಳ ಗರಿಷ್ಠ ಮಟ್ಟಕ್ಕೆ

ಯುನೈಟೆಡ್​ ಕಿಂಗ್​ಡಮ್​ನ ಫೆಬ್ರವರಿ ತಿಂಗಳ ಹಣದುಬ್ಬರ ದರವು 30 ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

Inflation In UK: ಯುನೈಟೆಡ್​ ಕಿಂಗ್​ಡಮ್​ನಲ್ಲಿ ಫೆಬ್ರವರಿ ತಿಂಗಳ ಹಣದುಬ್ಬರ 30 ವರ್ಷಗಳ ಗರಿಷ್ಠ ಮಟ್ಟಕ್ಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 24, 2022 | 12:58 AM

ಯುನೈಟೆಡ್​ ಕಿಂಗ್​ಡಮ್​​ನಲ್ಲಿ 2022ರ ಫೆಬ್ರವರಿ ತಿಂಗಳ ಹಣದುಬ್ಬರ (Inflation) ದರವು 30 ವರ್ಷಗಳ ಗರಿಷ್ಠ ಮಟ್ಟಕ್ಕೆ ದಾಖಲಾಗಿದೆ. ಎಲ್ಲದರಲ್ಲೂ ಏರುತ್ತಿರುವ ಬೆಲೆಗಳು ಯುನೈಟೆಡ್ ಕಿಂಗ್‌ಡಂನಲ್ಲಿ ಹಣದುಬ್ಬರವನ್ನು ಫೆಬ್ರವರಿಯಲ್ಲಿ ಹೊಸದಾಗಿ 30-ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಸಿದ್ದು, ಅಧಿಕೃತ ಅಂಕಿ-ಅಂಶಗಳ ಪ್ರಕಾರ ಜೀವನ ವೆಚ್ಚದ (Cost Of Living) ಬಿಕ್ಕಟ್ಟು ತೀವ್ರಗೊಂಡಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ONS) ಬುಧವಾರದಂದು ಹೇಳಿರುವ ಪ್ರಕಾರ, ಗ್ರಾಹಕರ ಬೆಲೆ ಸೂಚ್ಯಂಕ (CPI) ಹಣದುಬ್ಬರವು ಫೆಬ್ರವರಿಯಲ್ಲಿ ಶೇ 6.2ಕ್ಕೆ ಏರಿದ್ದು, ಜನವರಿಯಲ್ಲಿ ಇದು ಶೇ 5.5ರಷ್ಟಿತ್ತು. ಈ ಹಿಂದೆ ಅತಿ ಹೆಚ್ಚಿನ ಪ್ರಮಾಣ ಅಂದರೆ 1992ರ ಮಾರ್ಚ್​ನಲ್ಲಿ ಶೇ 7.1ರ ಮಟ್ಟವನ್ನು ತಲುಪಿತ್ತು.

ಈ ಏರಿಕೆಯು ನಿರೀಕ್ಷೆಗಿಂತ ಹೆಚ್ಚಾಗಿತ್ತು. ಆಹಾರ, ಬಟ್ಟೆ ಮತ್ತು ಪಾದರಕ್ಷೆಗಳು ಹಾಗೂ ಉತ್ಪನ್ನಗಳು ಮತ್ತು ಸೇವೆಗಳ ಶ್ರೇಣಿಯಲ್ಲಿ ಬೆಲೆಗಳನ್ನು ಹೆಚ್ಚಿಸಿದ ನಂತರ ಬಂದಿದೆ. ONS ಹೇಳುವಂತೆ, ಹಣದುಬ್ಬರವು ಸೂಚ್ಯಂಕಕ್ಕೆ ಫೀಡ್ ಮಾಡುವ 12 ವಿಭಾಗಗಳ ಪೈಕಿ 10ರಲ್ಲಿ ಏರಿಕೆಯಾಗಿದ್ದು, ಕೇವಲ ಸಂವಹನ ಮತ್ತು ಶಿಕ್ಷಣವು ಹೆಚ್ಚಳವನ್ನು ಕಂಡಿಲ್ಲ. ಉಕ್ರೇನ್ ಸಂಘರ್ಷವು ಈಗಾಗಲೇ ಆಕಾಶದ ಎತ್ತರಕ್ಕೆ ಹಣದುಬ್ಬರವನ್ನು ಹೆಚ್ಚಿಸುವುದರಿಂದ ಬೆಲೆಗಳು ಇನ್ನೂ ಹೆಚ್ಚಾಗುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ತೈಲ, ಇಂಧನ, ಸರಕುಗಳು ಮತ್ತು ಆಹಾರದ ಬೆಲೆ ಏರಿಕೆಗೆ ಇನ್ನಷ್ಟು ಸೇರ್ಪಡೆ ಮಾಡಿ, ಸಮಸ್ಯೆಯನ್ನು ಇನ್ನಷ್ಟು ಸೇರಿಸುತ್ತದೆ.

ಹೆಚ್ಚಿದ ಇಂಧನ ಬೆಲೆಯ ಮಿತಿ, ಆತಿಥ್ಯ ವಲಯದಲ್ಲಿನ ವ್ಯಾಟ್​ (VAT) ಕಡಿತದ ಯೋಜಿತ ವಾಪಸಾತಿ ಮತ್ತು ರಾಷ್ಟ್ರೀಯ ವಿಮಾ ತೆರಿಗೆಯ ಹೆಚ್ಚಳವು ಬ್ರಿಟಿಷ್ ಕುಟುಂಬಗಳು ಎದುರಿಸುತ್ತಿರುವ ಬಿಕ್ಕಟ್ಟನ್ನು ಇನ್ನಷ್ಟು ಜಾಸ್ತಿ ಮಾಡಲು ಸಿದ್ಧವಾಗಿವೆ, ಬ್ಯಾಂಕ್ ಆಫ್ ಇಂಗ್ಲೆಂಡ್ ಕಳೆದ ವಾರ ಡಿಸೆಂಬರ್ ಮಧ್ಯದಿಂದ ಮೂರನೇ ಬಾರಿಗೆ ಬಡ್ಡಿದರಗಳನ್ನು ಶೇ 0.5ರಿಂದ ಶೇ 0.75ಕ್ಕೆ ಏರಿಸಿತು ಮತ್ತು ಹಣದುಬ್ಬರವು ಈಗ ಏಪ್ರಿಲ್‌ನಲ್ಲಿ ಸುಮಾರು ಶೇ 8ಕ್ಕೆ ಏರುತ್ತದೆ ಎಂದು ಎಚ್ಚರಿಸಿದೆ – ಮತ್ತು ಉಕ್ರೇನ್​ ಯುದ್ಧದ ಮಧ್ಯೆ ಸಗಟು ಇಂಧನ ಬೆಲೆಗಳು ಹೀಗೇ ಮುಂದುವರಿದರೆ ಎರಡಂಕಿ ದಾಟಬಹುದು.

ಏಪ್ರಿಲ್‌ನಲ್ಲಿ ಅನಿಲ ಮತ್ತು ವಿದ್ಯುತ್ ಮಾರುಕಟ್ಟೆಗಳ ಕಚೇರಿ (Ofgem) – ಯುಕೆ ಸರ್ಕಾರದ ನಿಯಂತ್ರಕ – ಇಂಧನ ಬೆಲೆಯ ಮಿತಿಯನ್ನು ಶೇ 54ರಷ್ಟು ಹೆಚ್ಚಿಸುತ್ತದೆ ಮತ್ತು ಅನಿಲ ಬೆಲೆಗಳ ಮೇಲೆ ಉಕ್ರೇನ್‌ನ ಪ್ರಭಾವವನ್ನು ಬೀರಿದರೆ, ಅಕ್ಟೋಬರ್‌ನಲ್ಲಿ ಮತ್ತಷ್ಟು ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಬಹುಶಃ ಆ ಹೆಚ್ಚಳವು ಮತ್ತೆ ಶೇ 50ರಷ್ಟಾಗಬಹುದು.

ಇದನ್ನೂ ಓದಿ: ಚೀನಾ, ಯುಕೆ, ಸಿಂಗಾಪುರಗಳಲ್ಲಿ ಮಿತಿಮೀರುತ್ತಿದೆ ಕೊರೊನಾ ಪ್ರಕರಣ; ಇದು ಭಾರತಕ್ಕೆ ಎಚ್ಚರಿಕೆ, ಆರೋಗ್ಯ ಸಚಿವರಿಂದ ಉನ್ನತ ಸಭೆ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ