Maruti Cars Price: ಏಪ್ರಿಲ್ 18ರಿಂದ ಅನ್ವಯಿಸುವಂತೆ ಮಾರುತಿ ಕಾರುಗಳ ಬೆಲೆಯಲ್ಲಿ ಏರಿಕೆ

ಮಾರುತಿ ಸುಜುಕಿ ಇಂಡಿಯಾವು ಏಪ್ರಿಲ್ 18, 2022ರಿಂದ ಅನ್ವಯ ಆಗುವಂತೆ ಎಲ್ಲ ಕಾರುಗಳ ಮಾಡೆಲ್​ನ ಬೆಲೆಯಲ್ಲೂ ಹೆಚ್ಚಳ ಮಾಡಿದೆ.

Maruti Cars Price: ಏಪ್ರಿಲ್ 18ರಿಂದ ಅನ್ವಯಿಸುವಂತೆ ಮಾರುತಿ ಕಾರುಗಳ ಬೆಲೆಯಲ್ಲಿ ಏರಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 18, 2022 | 5:17 PM

ಇನ್‌ಪುಟ್ ವೆಚ್ಚಗಳ ಹೆಚ್ಚಳದ ಮಧ್ಯೆ ದೇಶದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ ಇಂಡಿಯಾ (Maruti Suzuki India) ಸೋಮವಾರ (ಏಪ್ರಿಲ್ 18) ತನ್ನ ಸಂಪೂರ್ಣ ಮಾದರಿ ಶ್ರೇಣಿ ಬೆಲೆಗಳನ್ನು ಹೆಚ್ಚಿಸಿದೆ. ವರದಿಯ ಪ್ರಕಾರ, ಕಂಪೆನಿಯು ತನ್ನ ಎಲ್ಲ ಮಾದರಿಗಳ ಬೆಲೆಗಳನ್ನು ಸರಾಸರಿ ಶೇ 1.3ರಷ್ಟು ಹೆಚ್ಚಿಸಿದೆ (ಎಕ್ಸ್ ಶೋ ರೂಂ ದೆಹಲಿ). ಇನ್‌ಪುಟ್ ವೆಚ್ಚದಲ್ಲಿನ ಏರಿಕೆಯನ್ನು ಸರಿದೂಗಿಸಲು ತಿಂಗಳ ಅವಧಿಯಲ್ಲಿ ಬೆಲೆಗಳನ್ನು ಹೆಚ್ಚಿಸುವುದಾಗಿ ಮಾರುತಿ ಈ ಹಿಂದೆ ಏಪ್ರಿಲ್ 6 ರಂದು ತಿಳಿಸಿತ್ತು. ಇತ್ತೀಚಿನ ವಿನಿಮಯ ಕೇಂದ್ರದ ಫೈಲಿಂಗ್ ಪ್ರಕಾರ, ಎಲ್ಲ ಪರಿಷ್ಕೃತ ಬೆಲೆಗಳು ಏಪ್ರಿಲ್ 18 (ಸೋಮವಾರ)ರಿಂದ ಜಾರಿಗೆ ಬರುತ್ತವೆ. ಇತ್ತೀಚಿನ ಫೈಲಿಂಗ್‌ನಲ್ಲಿ, “ನಮ್ಮ ಹಿಂದಿನ ಮಾಹಿತಿಯನ್ನು ಏಪ್ರಿಲ್ 6, 2022ರಂದು ಉಲ್ಲೇಖಿಸಿ, ಇನ್‌ಪುಟ್ ವೆಚ್ಚಗಳ ಹೆಚ್ಚಳದ ಕಾರಣದಿಂದ ಕಂಪೆನಿಯು ಇಂದು ಮಾಡೆಲ್‌ಗಳಾದ್ಯಂತ ಬೆಲೆಗಳಲ್ಲಿ ಬದಲಾವಣೆಯನ್ನು ಪ್ರಕಟಿಸಿದೆ. ಮಾದರಿಗಳಾದ್ಯಂತ ವೇಯ್ಟೆಡ್ ಸರಾಸರಿ ಹೆಚ್ಚಳವು ಶೇ 1.3- ಎಕ್ಸ್ ಶೋರೂಂ ಬೆಲೆಗಳು (ದೆಹಲಿ). ಈ ಹೊಸ ಬೆಲೆಗಳು ಏಪ್ರಿಲ್ 18, 2022ರಿಂದ ಜಾರಿಗೆ ಬರುತ್ತವೆ.

“ಕಳೆದ ವರ್ಷದಲ್ಲಿ, ವಿವಿಧ ಇನ್‌ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಂಪೆನಿಯ ವಾಹನಗಳ ಬೆಲೆಯು ಪ್ರತಿಕೂಲ ಪರಿಣಾಮ ಬೀರುತ್ತಿದೆ. ಆದ್ದರಿಂದ ಬೆಲೆ ಏರಿಕೆ ಮೂಲಕ ಹೆಚ್ಚುವರಿ ವೆಚ್ಚಗಳ ಸ್ವಲ್ಪ ಮಟ್ಟಿಗಿನ ಪರಿಣಾಮವನ್ನು ಗ್ರಾಹಕರಿಗೆ ವರ್ಗಾಯಿಸುವುದು ಕಂಪೆನಿಗೆ ಅನಿವಾರ್ಯವಾಗಿದೆ,” ಎಂದು ಮಾರುತಿ ಸುಜುಕಿಯಿಂದ ವಿನಿಮಯ ಕೇಂದ್ರಗಳಿಗೆ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಲಾಗಿದೆ. “ನಾವು ಈ ಬೆಲೆ ಏರಿಕೆಯನ್ನು ಏಪ್ರಿಲ್ 2022ರಲ್ಲಿ ಯೋಜಿಸಿದ್ದೇವೆ. ವಿವಿಧ ಮಾದರಿಗಳಿಗೆ ಹೆಚ್ಚಳವು ಬದಲಾಗುತ್ತದೆ,” ಎಂದು ಅದು ಹೇಳಿದೆ.

ಕಂಪೆನಿಯು ಏಪ್ರಿಲ್‌ನಲ್ಲಿ ಬೆಲೆಗಳನ್ನು ಹೆಚ್ಚಿಸಲು ಯೋಜಿಸಿದೆ ಮತ್ತು ಹೆಚ್ಚಳವು ವಿವಿಧ ಮಾದರಿಗಳಿಗೆ ಬದಲಾಗುತ್ತದೆ. ಆದರೆ ಪ್ರಸ್ತಾವಿತ ಬೆಲೆ ಏರಿಕೆ ಪ್ರಮಾಣವನ್ನು ಕಂಪೆನಿಯು ಬಹಿರಂಗಪಡಿಸಿಲ್ಲ. ಇನ್‌ಪುಟ್ ವೆಚ್ಚಗಳಲ್ಲಿನ ನಿರಂತರ ಹೆಚ್ಚಳದಿಂದಾಗಿ ಮಾರುತಿ ಸುಜುಕಿ ಇಂಡಿಯಾ ಈಗಾಗಲೇ ವಾಹನ ಬೆಲೆಗಳನ್ನು 2021ರ ಜನವರಿಯಿಂದ 2022ರ ಮಾರ್ಚ್ ತನಕ ಸುಮಾರು ಶೇ 8.8ರಷ್ಟು ಹೆಚ್ಚಿಸಿದೆ. ಕಂಪೆನಿಯು ದೇಶೀಯ ಮಾರುಕಟ್ಟೆಯಲ್ಲಿ ಆಲ್ಟೊದಿಂದ ಪ್ರಾರಂಭಿಸಿ ಎಸ್-ಕ್ರಾಸ್​ವರೆಗೆ ಹಲವಾರು ಮಾದರಿಗಳನ್ನು ಮಾರಾಟ ಮಾಡುತ್ತದೆ.

ಇದನ್ನೂ ಓದಿ: Maruti Car Price Hike: ಏಪ್ರಿಲ್​ನಲ್ಲಿ ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ ಬಗ್ಗೆ ಘೋಷಣೆ