AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maruti Car Price Hike: ಏಪ್ರಿಲ್​ನಲ್ಲಿ ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ ಬಗ್ಗೆ ಘೋಷಣೆ

ಇನ್​ಪುಟ್​ ವೆಚ್ಚಗಳ ಹೆಚ್ಚಳದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಕಾರುಗಳ ಬೆಲೆಯಲ್ಲಿ ಏರಿಕೆ ಮಾಡುವುದಾಗಿ ಮಾರುತಿ ಸುಜುಕಿ ಇಂಡಿಯಾದಿಂದ ಬುಧವಾರ ಘೋಷಣೆ ಮಾಡಲಾಗಿದೆ.

Maruti Car Price Hike: ಏಪ್ರಿಲ್​ನಲ್ಲಿ ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ ಬಗ್ಗೆ ಘೋಷಣೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Apr 07, 2022 | 1:23 PM

Share

ಇನ್‌ಪುಟ್ ವೆಚ್ಚಗಳ ಹೆಚ್ಚಳದ ಮಧ್ಯೆ ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ (MSI) ಈ ತಿಂಗಳು ತನ್ನ ಸಂಪೂರ್ಣ ಮಾದರಿ ಶ್ರೇಣಿಯ ಬೆಲೆಗಳನ್ನು ಹೆಚ್ಚಿಸುವುದಾಗಿ ಬುಧವಾರ ತಿಳಿಸಿದೆ. ಕಳೆದ ವರ್ಷದಲ್ಲಿ ವಿವಿಧ ಇನ್‌ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಂಪೆನಿಯ ವಾಹನಗಳ ಬೆಲೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಮಾರುತಿ ಸುಜುಕಿ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. “ಆದ್ದರಿಂದ ಬೆಲೆ ಏರಿಕೆ ಮೂಲಕ ಗ್ರಾಹಕರಿಗೆ ಮೇಲಿನ ಹೆಚ್ಚುವರಿ ವೆಚ್ಚಗಳ ಕೆಲವು ಮಟ್ಟಿಗಿನ ಪರಿಣಾಮವನ್ನು ವರ್ಗಾಯಿಸುವುದು ಕಂಪೆನಿಗೆ ಅನಿವಾರ್ಯವಾಗಿದೆ,” ಎಂದು ಅದು ಸೇರಿಸಿದೆ. ಕಂಪೆನಿಯು ಏಪ್ರಿಲ್‌ನಲ್ಲಿ ಬೆಲೆಗಳನ್ನು ಹೆಚ್ಚಿಸಲು ಯೋಜಿಸಿದೆ ಮತ್ತು ಹೆಚ್ಚಳವು ವಿವಿಧ ಮಾದರಿಗಳಿಗೆ ಬದಲಾಗುತ್ತದೆ. ಆದರೆ ಪ್ರಸ್ತಾವಿತ ಬೆಲೆ ಏರಿಕೆಯ ಪ್ರಮಾಣವನ್ನು ಕಂಪೆನಿಯು ಬಹಿರಂಗಪಡಿಸಿಲ್ಲ.

ಇನ್‌ಪುಟ್ ವೆಚ್ಚದಲ್ಲಿ ನಿರಂತರ ಹೆಚ್ಚಳದಿಂದಾಗಿ ಮಾರುತಿ ಸುಜುಕಿ ಇಂಡಿಯಾ ಈಗಾಗಲೇ ವಾಹನ ಬೆಲೆಗಳನ್ನು 2021ರಿಂದ 2022ರ ಮಾರ್ಚ್​ವರೆಗೆ ಸುಮಾರು ಶೇ 8.8ರಷ್ಟು ಹೆಚ್ಚಿಸಿದೆ. ಕಂಪೆನಿಯು ದೇಶೀಯ ಮಾರುಕಟ್ಟೆಯಲ್ಲಿ ಆಲ್ಟೊದಿಂದ ಪ್ರಾರಂಭಿಸಿ ಎಸ್-ಕ್ರಾಸ್​ವರೆಗೆ ಹಲವಾರು ಮಾದರಿಗಳನ್ನು ಮಾರಾಟ ಮಾಡುತ್ತದೆ. ಇದರ ಬೆಲೆ ರೂ. 3.25 ಲಕ್ಷ ಮತ್ತು ರೂ. 12.77 ಲಕ್ಷದ (ಎಕ್ಸ್ ಶೋ ರೂಂ ದೆಹಲಿ) ತನಕ ಇದೆ. ಉಕ್ಕು, ಅಲ್ಯೂಮಿನಿಯಂ ಮತ್ತು ಪಲ್ಲಾಡಿಯಮ್‌ನಂತಹ ಅಮೂಲ್ಯ ಲೋಹಗಳ ಬೆಲೆ ಏರಿಕೆಯೊಂದಿಗೆ ವಾಹನ ಕಂಪೆನಿಗಳು ಬೆಲೆಗಳನ್ನು ಹೆಚ್ಚಿಸುತ್ತಿವೆ. ಉದ್ಯಮವು ಸರಕು ಮತ್ತು ಸಾರಿಗೆ ಶುಲ್ಕಗಳ ಹೆಚ್ಚಳ ಮತ್ತು ಎಲೆಕ್ಟ್ರಾನಿಕ್ ಘಟಕಗಳ ವೆಚ್ಚವನ್ನು ವಾಹನದ ಬೆಲೆಗಳನ್ನು ಹೆಚ್ಚಿಸುವ ಅಂಶಗಳಾಗಿ ಉಲ್ಲೇಖಿಸುತ್ತಿವೆ.

ಈಗಾಗಲೇ, ವಿವಿಧ ವಾಹನ ತಯಾರಕರು ತಮ್ಮ ಉತ್ಪನ್ನಗಳ ಬೆಲೆಯನ್ನು ಈ ತಿಂಗಳಿನಿಂದ ಹೆಚ್ಚಿಸುವುದಾಗಿ ಘೋಷಿಸಿವೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚದ ಪರಿಣಾಮವನ್ನು ಸರಿದೂಗಿಸಲು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಸಂಪೂರ್ಣ ಮಾದರಿ ಶ್ರೇಣಿಯ ಬೆಲೆಗಳನ್ನು ಏಪ್ರಿಲ್ 1ರಿಂದ ಶೇಕಡಾ 4ರ ವರೆಗೆ ಹೆಚ್ಚಿಸಿದೆ. ಅದೇ ರೀತಿ ಬಿಎಂಡಬ್ಲ್ಯ ಇಂಡಿಯಾ ಈ ತಿಂಗಳಿನಿಂದ ಉತ್ಪನ್ನದ ಬೆಲೆಯನ್ನು ಶೇಕಡಾ 3.5 ರಷ್ಟು ಹೆಚ್ಚಿಸಿದೆ. ಇತರ ಐಷಾರಾಮಿ ಕಾರು ತಯಾರಕರಾದ ಔಡಿ ಮತ್ತು ಮರ್ಸಿಡಿಸ್-ಬೆಂಜ್ ಕೂಡ ಏಪ್ರಿಲ್ 1 ರಿಂದ ಬೆಲೆಗಳನ್ನು ಹೆಚ್ಚಿಸಿವೆ.

ಇದನ್ನೂ ಓದಿ: ಹೊಸ ಸೆಲೆರಿಯೊ ಸಿ ಎನ್ ಜಿ ಆವೃತ್ತಿಯನ್ನು ಲಾಂಚ್ ಮಾಡಿದೆ ಮಾರುತಿ ಸುಜುಕಿ, ಬೆಲೆ ರೂ. 6,58,000

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ