ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜೂನ್ 24ನೇ ತಾರೀಕಿನ ಶುಕ್ರವಾರದಂದು ಏರಿಕೆಯಲ್ಲಿ ಕೊನೆಗೊಂಡಿವೆ. ನಿಫ್ಟಿ 15,700 ಪಾಯಿಂಟ್ಸ್ ಬಳಿ ಇದೆ. ದಿನಾಂತ್ಯಕ್ಕೆ ಸೆನ್ಸೆಕ್ಸ್ 462.26 ಪಾಯಿಂಟ್ಸ್ ಅಥವಾ ಶೇ 0.88ರಷ್ಟು ಏರಿಕೆಯಾಗಿ 52,727.98 ಪಾಯಿಂಟ್ಸ್ನಲ್ಲಿ ವ್ಯವಹಾರ ಮುಗಿಸಿದರೆ, ನಿಫ್ಟಿ 142.60 ಪಾಯಿಂಟ್ಸ್ ಅಥವಾ ಶೇ 0.92ರಷ್ಟು ಮೇಲೇರಿ 15,699.30 ಪಾಯಿಂಟ್ಸ್ನಲ್ಲಿ ವಹಿವಾಟು ಚುಕ್ತಾ ಮಾಡಿತು. ಇಂದಿನ ವಹಿವಾಟಿನಲ್ಲಿ 2332 ಕಂಪೆನಿಯ ಷೇರುಗಳು ಗಳಿಕೆಯನ್ನು ಕಂಡರೆ, 899 ಕಂಪೆನಿ ಷೇರುಗಳು ಇಳಿಕೆ ಕಂಡವು. ಇನ್ನು 133 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ವಲಯವಾರು ಗಮನಿಸುವುದಾದರೆ ವಾಹನ, ತೈಲ ಮತ್ತು ಅನಿಲ, ವಿದ್ಯುತ್, ಬ್ಯಾಂಕ್, ಲೋಹ ಮತ್ತು ಎಫ್ಎಂಸಿಜಿ ಸೂಚ್ಯಂಕಗಳು ತಲಾ ಶೇ 1ರಷ್ಟು ಹೆಚ್ಚಳ ಕಂಡವು. ಆದರೆ ಮಾಹಿತಿ ತಂತ್ರಜ್ಞಾನ ವಲಯದ ಕೆಲವು ಷೇರುಗಳಲ್ಲಿ ಕುಸಿತ ಕಂಡುಬಂತು. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ತಲಾ ಶೇ 1ರಷ್ಟು ಗಳಿಕೆಯನ್ನು ಕಂಡವು.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಮಹೀಂದ್ರಾ ಅಂಡ್ ಮಹೀಂದ್ರಾ ಶೇ 4.32
ಹೀರೋ ಮೋಟೋಕಾರ್ಪ್ ಶೇ 3.21
ಇಂಡಸ್ಇಂಡ್ ಬ್ಯಾಂಕ್ ಶೇ 2.75
ಬಜಾಜ್ ಫೈನಾನ್ಸ್ ಶೇ 2.56
ಹಿಂದೂಸ್ತಾನ್ ಯುನಿಲಿವರ್ ಶೇ 2.28
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಟೆಕ್ ಮಹೀಂದ್ರಾ ಶೇ -1.00
ಇನ್ಫೋಸಿಸ್ ಶೇ -0.78
ಟಿಸಿಎಸ್ ಶೇ -0.47
ಎಚ್ಸಿಎಲ್ ಟೆಕ್ ಶೇ -0.47
ಕೋಲ್ ಇಂಡಿಯಾ ಶೇ -0.47
ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್
Published On - 4:40 pm, Fri, 24 June 22