AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Closing Bell: 700 ಪಾಯಿಂಟ್ಸ್ ಏರಿಕೆ ಕಂಡ ಸೆನ್ಸೆಕ್ಸ್ ಸೂಚ್ಯಂಕ; ಏಷ್ಯನ್ ಪೇಂಟ್ಸ್ ಷೇರಿಗೆ 100 ರೂ. ಹೆಚ್ಚಳ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏಪ್ರಿಲ್ 28ನೇ ತಾರೀಕಿನ ಗುರುವಾರದಂದು ಭಾರೀ ಏರಿಕೆ ದಾಖಲಿಸಿವೆ. ಏರಿಕೆ, ಇಳಿಕೆ ಕಂಡ ಪ್ರಮುಖ ಷೇರುಗಳ ವಿವರ ಇಲ್ಲಿದೆ.

Closing Bell: 700 ಪಾಯಿಂಟ್ಸ್ ಏರಿಕೆ ಕಂಡ ಸೆನ್ಸೆಕ್ಸ್ ಸೂಚ್ಯಂಕ; ಏಷ್ಯನ್ ಪೇಂಟ್ಸ್ ಷೇರಿಗೆ 100 ರೂ. ಹೆಚ್ಚಳ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Apr 28, 2022 | 7:04 PM

Share

ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏಪ್ರಿಲ್ 28ನೇ ತಾರೀಕಿನ ಗುರುವಾರದಂದು ಮತ್ತೆ ಗಳಿಕೆಯನ್ನು ಕಂಡಿದೆ. ಈ ಏರಿಕೆಯಲ್ಲಿ ಎಲ್ಲ ವಲಯಗಳೂ ಪಾಲ್ಗೊಂಡವು. ಎಫ್​ಐಐ (ವಿದೇಶೀ ಸಾಂಸ್ಥಿಕ ಹೂಡಿಕೆದಾರರು) ನಿರಂತರವಾಗಿ ಮಾರಾಟದಲ್ಲಿ ತೊಡಗಿದ್ದರ ಹೊರತಾಗಿಯೂ ಈ ಬೆಳವಣಿಗೆ ಆಗಿದೆ. ಆದರೆ ಒಟ್ಟಾರೆಯಾಗಿ ಕಳೆದ ಕೆಲ ವಾರಗಳಿಂದಲೇ ಮಾರುಕಟ್ಟೆಯು ಇಂತಿಷ್ಟೇ ಪಾಯಿಂಟ್ಸ್​ಗಳ ಮಧ್ಯೆ ಹೊಯ್ದಾಡುತ್ತಿದೆ. ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 702 ಪಾಯಿಂಟ್ಸ್ ಅಥವಾ ಶೇ 1.23ರಷ್ಟು ಹೆಚ್ಚಳವನ್ನು ದಾಖಲಿಸಿದರೆ, ನಿಫ್ಟಿ-50 ಸೂಚ್ಯಂಕವು 207 ಪಾಯಿಂಟ್ಸ್ ಅಥವಾ ಶೇ 1.21ರಷ್ಟು ಮೇಲೇರಿ 17,245 ಪಾಯಿಂಟ್ಸ್​ನಲ್ಲಿ ವ್ಯವಹಾರ ಮುಗಿಸಿತು. ಇಂದಿನ ವ್ಯವಹಾರದಲ್ಲಿ ಎಲ್ಲ ವಲಯಗಳು ಏರಿಕೆ ಕಂಡವು.

ನಿಫ್ಟಿ ಎಫ್​ಎಂಸಿಜಿ ಸೂಚ್ಯಂಕ ಶೇ 2ಕ್ಕೂ ಹೆಚ್ಚೆ ಏರಿಕೆ ದಾಖಲಿಸಿದ್ದು, ಹಿಂದೂಸ್ತಾನ್ ಯುನಿಲಿವರ್ ಮುಂಚೂಣಿಯಲ್ಲಿತ್ತು. ನಿಫ್ಟಿ ಬ್ಯಾಂಕ್, ಹಣಕಾಸು ಸೇವೆಗಳು, ಮಾಹಿತಿ ತಂತ್ರಜ್ಞಾನ, ತೈಲ ಮತ್ತು ಅನಿಲ ಹಾಗೂ ಫಾರ್ಮಾಸ್ಯುಟಿಕಲ್ಸ್ ಸೂಚ್ಯಂಕಗಳು ಹತ್ತಿರ ಹತ್ತಿರ ಶೇಕಡಾ 1ರಷ್ಟು ಗಳಿಕೆ ಕಂಡವು. ವಾಹನ ಸೂಚ್ಯಂಕ ಶೇ 0.3ರಷ್ಟು ಮೇಲೇರಿತು. ಎನ್​ಎಸ್​ಇಯಲ್ಲಿ ಇಂದು 922 ಕಂಪೆನಿ ಷೇರುಗಳು ಹೆಚ್ಚಳವನ್ನು ದಾಖಲಿಸಿದರೆ, 1014 ಕಂಪೆನಿ ಷೇರುಗಳು ಕುಸಿತ ಕಂಡವು.

ನಿಫ್ಟಿಯಲ್ಲಿ ಗಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಎಚ್​ಯುಎಲ್​ ಶೇ 4.51 ಎಚ್​ಡಿಎಫ್​ಸಿ ಲೈಫ್ ಶೇ 4.34 ಎಸ್​ಬಿಐ ಲೈಫ್ ಇನ್ಷೂರೆನ್ಸ್ ಶೇ 3.97 ಯುಪಿಎಲ್ ಶೇ 3.24 ಏಷ್ಯನ್ ಪೇಂಟ್ಸ್ ಶೇ 3.16

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಬಜಾಜ್ ಆಟೋ ಶೇ -1.82 ಹಿಂಡಾಲ್ಕೋ ಶೇ -0.75 ಭಾರ್ತಿ ಏರ್​ಟೆಲ್ ಶೇ -0.68 ಮಹೀಂದ್ರಾ ಅಂಡ್ ಮಹೀಂದ್ರಾ ಶೇ -0.43 ಎಚ್​ಸಿಎಲ್​ ಟೆಕ್ ಶೇ -0.28

ಇದನ್ನೂ ಓದಿ: ಷೇರು ಮಾರುಕಟ್ಟೆ ಬೆಲೆಗಳ ಏರಿಳಿತ ಊಹಿಸುವುದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ

Published On - 6:14 pm, Thu, 28 April 22

Follow Us
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ