Closing Bell: ಸೆನ್ಸೆಕ್ಸ್ 831 ಪಾಯಿಂಟ್ಸ್, ನಿಫ್ಟಿ 258 ಪಾಯಿಂಟ್ಸ್ ಏರಿಕೆ; ಇಂಡಸ್​ಇಂಡ್​ ಬ್ಯಾಂಕ್ ಶೇ 8ರಷ್ಟು ಗಳಿಕೆ

Closing Bell: ಸೆನ್ಸೆಕ್ಸ್ 831 ಪಾಯಿಂಟ್ಸ್, ನಿಫ್ಟಿ 258 ಪಾಯಿಂಟ್ಸ್ ಏರಿಕೆ; ಇಂಡಸ್​ಇಂಡ್​ ಬ್ಯಾಂಕ್ ಶೇ 8ರಷ್ಟು ಗಳಿಕೆ
ಸಾಂದರ್ಭಿಕ ಚಿತ್ರ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ನವೆಂಬರ್ 1ನೇ ತಾರೀಕಿನ ಸೋಮವಾರ ಭರ್ಜರಿ ಏರಿಕೆ ದಾಖಲಿಸಿದೆ. ಪ್ರಮುಖವಾಗಿ ಏರಿಕೆ ಹಾಗೂ ಇಳಿಕೆ ದಾಖಲಿಸಿದ ಷೇರುಗಳು ಮತ್ತು ಶೇಕಡಾವಾರು ಪ್ರಮಾಣದ ವಿವರ ಇಲ್ಲಿದೆ.

TV9kannada Web Team

| Edited By: Srinivas Mata

Nov 01, 2021 | 5:58 PM

ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ನವೆಂಬರ್ ತಿಂಗಳ ಮೊದಲನೇ ದಿನವಾದ ಸೋಮವಾರದಂದು ಭರ್ಜರಿ ಗಳಿಕೆ ಪಡೆದುಕೊಂಡಿದೆ. ಬಿಎಸ್​ಇ ಸೆನ್ಸೆಕ್ಸ್ 831.53 ಪಾಯಿಂಟ್ಸ್ ಅಥವಾ ಶೇ 1.40ರಷ್ಟು ಮೇಲೇರಿ 60,138.46 ಪಾಯಿಂಟ್ಸ್​ನೊಂದಿಗೆ ದಿನದ ವ್ಯವಹಾರವನ್ನು ಮುಗಿಸಿದರೆ, ನಿಫ್ಟಿ 258 ಪಾಯಿಂಟ್ಸ್ ಅಥವಾ ಶೇ 1.46ರಷ್ಟು ಹೆಚ್ಚಳವಾಗಿ 17,929.65 ಪಾಯಿಂಟ್ಸ್​ನೊಂದಿಗೆ ವಹಿವಾಟು ಚುಕ್ತಾಗೊಳಿಸಿತು. ಹೀಗೆ ಮೇಲ್ಮುಖದಲ್ಲಿ ಸಾಗಲು ಪ್ರಮುಖ ಕಾರಣವಾದ 5 ಅಂಶಗಳನ್ನು ವಿಶ್ಲೇಷಕರು ಗುರುತಿಸಿದ್ದಾರೆ.

1. ಜಾಗತಿಕ ಪ್ರಭಾವ ಅಕ್ಟೋಬರ್​ ತಿಂಗಳಲ್ಲಿ ಚೀನಾದ ಉತ್ಪಾದನೆ ಚಿತ್ರಣ ಮಿಶ್ರವಾಗಿರುವ ಹೊರತಾಗಿಯೂ ಜಾಗತಿಕ ಮಟ್ಟದಲ್ಲಿ ಬಹುತೇಕ ಸೂಚ್ಯಂಕಗಳು ಗಳಿಕೆ ಕಂಡಿವೆ. ಫಾನ್ಸ್​ನ ಸಿಎಸಿ, ಜರ್ಮನಿಯ ಡಿಎಎಕ್ಸ್, ಬ್ರಿಟನ್​ನ ಎಫ್​ಟಿಎಸ್​ಇ ಸೂಚ್ಯಂಕಗಳು ಶೇ 0.4ರಿಂದ ಶೇ 0.9ರ ತನಕ ಏರಿಕೆ ಕಂಡಿದ್ದವು. ಏಷ್ಯಾದಲ್ಲಿ ಜಪಾನ್​ನ ನಿಕೈ ಶೇ 2.6ರಷ್ಟು, ದಕ್ಷಿಣ ಕೊರಿಯಾದ ಕೊಸ್ಪಿ ಶೇ 0.75ರಷ್ಟು ಮೇಲೇರಿತ್ತು. ಆದರೆ ಚೀನಾದ ಶಾಂಘೈ ಕಾಂಪೋಸಿಟ್ ಸೂಚ್ಯಂಕವು ಹೆಚ್ಚಿನ ಏರಿಕೆ ದಾಖಲಿಸಿರಲಿಲ್ಲ. ಉತ್ಪಾದನಾ ಚಟುವಟಿಕೆಯ ಡೇಟಾ ಬಂದ ನಂತರದ ನಕಾರಾತ್ಮಕ ಅಂಶದಿಂದ ಇಂಥ ಬೆಳವಣಿಗೆ ಆಗಿದೆ. ಚೀನಾದ ಉತ್ಪಾದನೆ ಉತ್ಪಾದನೆ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (PMI) ಅಕ್ಟೋಬರ್​ನಲ್ಲಿ 50ಕ್ಕಿಂತ ಕೆಳಗೆ ಇಳಿದು 49.2 ತಲುಪಿದೆ. ಸತತ ಎರಡನೇ ತಿಂಗಳು ದುರ್ಬಲವಾಗಿಯೇ ಮುಂದುವರಿದಿದೆ. ಸೆಪ್ಟೆಂಬರ್​ನಲ್ಲಿ 49.6 ಇತ್ತು.

2 ವಾಹನ ಮಾರಾಟ ಹೆಚ್ಚಿನ ಕಂಪೆನಿಗಳು ತಿಂಗಳ ಮಾರಾಟದ ಸಂಖ್ಯೆಯನ್ನು ವರದಿ ಮಾಡಿದ ನಂತರ ಬಿಎಸ್​ಇ ವಾಹನ (ಆಟೋ) ಸೂಚ್ಯಂಕವು ಶೇ 1ರಷ್ಟು ಗಳಿಕೆ ಕಂಡಿತು. ಸೆಮಿ ಕಂಡಕ್ಟರ್​ ಕೊರತೆಯು ಈ ಸಂಖ್ಯೆಯಲ್ಲಿ ಪ್ರತಿಫಲಿಸುತ್ತದೆಯಾದರೂ ವಿಶ್ಲೇಷಕರ ನಿರೀಕ್ಷೆಗಳನ್ನು ಉತ್ತಮಗೊಳಿಸಿದೆ. ಮಾರುತಿ ಸುಜುಕಿ, ಬಜಾಜ್ ಆಟೋ, ಅಶೋಕ್ ಲೇಲ್ಯಾಂಡ್ ಮತ್ತು ಟಾಟಾ ಮೋಟಾರ್ಸ್ ಮುನ್ನಡೆ ಸಾಧಿಸಿದರೆ, ಮಹೀಂದ್ರಾ ಆಂಡ್ ಮಹೀಂದ್ರಾ ಕುಸಿತ ಕಂಡಿದೆ. ಮಹೀಂದ್ರಾ ಮತ್ತು ಮಹೀಂದ್ರಾ ಅಕ್ಟೋಬರ್‌ನಲ್ಲಿ 47,017 ಟ್ರ್ಯಾಕ್ಟರ್‌ಗಳು ಮತ್ತು 41,908 ಇತರ ವಾಹನಗಳನ್ನು ಮಾರಾಟ ಮಾಡಿದೆ. CNBC-TV18 ಸಮೀಕ್ಷೆಯು ಕ್ರಮವಾಗಿ 43,300 ಘಟಕಗಳು ಮತ್ತು 31,800 ಘಟಕಗಳನ್ನು ಅಂದಾಜು ಮಾಡಿತ್ತು. ದೇಶದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ ಅಕ್ಟೋಬರ್‌ನಲ್ಲಿ 1.38 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಿದೆ. CNBC-TV18 ಸಮೀಕ್ಷೆಯ ಅಂದಾಜು 1.18 ಲಕ್ಷ ಯೂನಿಟ್‌ ಇತ್ತು. ಟಾಟಾ ಮೋಟಾರ್ಸ್ ಕಳೆದ ತಿಂಗಳು 67,829 ವಾಹನಗಳನ್ನು ಮಾರಾಟ ಮಾಡಿದೆ. ಇದು CNBC-TV18 ಸಮೀಕ್ಷೆಯ ಅಂದಾಜು 62,700 ಯೂನಿಟ್‌ಗಳಿಗಿಂತ ಹೆಚ್ಚಾಗಿದೆ.

3 PMI ಡೇಟಾ, GST ಸಂಗ್ರಹ ಭಾರತದ ಉತ್ಪಾದನಾ PMI ಸತತ ನಾಲ್ಕನೇ ತಿಂಗಳಿಗೆ ವಿಸ್ತರಣೆಯನ್ನು ಮುಂದುವರೆಸಿದೆ. ಸೆಪ್ಟೆಂಬರ್‌ನಲ್ಲಿ 53.7 ರಿಂದ ಅಕ್ಟೋಬರ್‌ನಲ್ಲಿ 55.9ಕ್ಕೆ ಏರಿದೆ ಎಂದು ಸಮೀಕ್ಷೆ ತೋರಿಸಿದೆ. ಆದರೂ ಉದ್ಯೋಗದ ಪರಿಸ್ಥಿತಿ ದುರ್ಬಲವಾಗಿಯೇ ಇದ್ದವು. “ಭಾರತದ ಉತ್ಪಾದನಾ PMI ನಾಲ್ಕನೇ ಸತತ ತಿಂಗಳು ವಿಸ್ತರಣೆಯಲ್ಲೇ ಉಳಿದುಕೊಂಡಿದೆ. PMI ವಿಸ್ತರಣೆಯಲ್ಲಿನ ಶಕ್ತಿಯು ಉತ್ಪಾದನೆಯಲ್ಲಿ ಸುಧಾರಣೆ ಮತ್ತು ಹೊಸ ಆರ್ಡರ್​ಗಳನ್ನು ಸಂಕೇತವಾಗಿ ತೋರಿಸುತ್ತದೆ. ಆದರೆ ಹಣದುಬ್ಬರವು ಸ್ಪಷ್ಟವಾಗಿ ಮುಂದಕ್ಕೆ ಹೋಗುವ ಮಾರ್ಗಸೂಚಿ ಆಗಿರುತ್ತದೆ. 2021ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ GDPಯ ಶೇ 9.9 ಬೆಳೆಯುವ ಟ್ರ್ಯಾಕಿಂಗ್ ಅಂದಾಜನ್ನು ನಾವು ಉಳಿಸಿಕೊಂಡಿದ್ದೇವೆ,” ಎಂದು ವಿಶ್ಲೇಷಕರೊಬ್ಬರು ಹೇಳಿದ್ದಾರೆ. ಸರಕು ಮತ್ತು ಸೇವಾ ತೆರಿಗೆ ಸಂಗ್ರಹದ ಮಾಹಿತಿಯು ಮಾರುಕಟ್ಟೆಯ ಬಗೆಗಿನ ಭಾವನೆ ಹೆಚ್ಚಿಸಿದೆ. ಅಕ್ಟೋಬರ್‌ನಲ್ಲಿ ರೂ 1,30,127 ಕೋಟಿ ಸಂಗ್ರಹವು ಇದುವರೆಗೆ ಎರಡನೇ ಅತಿ ಹೆಚ್ಚು ಮತ್ತು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ಮೊತ್ತ ರೂ. 1,05,155 ಕೋಟಿಗಿಂತ ಶೇ 24ರಷ್ಟು ಹೆಚ್ಚಳವಾಗಿದೆ.

4 ಎಲ್ಲ ವಲಯಗಳಿಂದಲೂ ಖರೀದಿ ಎಲ್ಲ ವಲಯದ ಸೂಚ್ಯಂಕಗಳು ಲೋಹ (ಶೇ 3.3), ಮಾಹಿತಿ ತಂತ್ರಜ್ಞಾನ (ಶೇ 2.3 ಶೇಕಡಾ) ಏರಿಕೆಯಲ್ಲೇ ವಹಿವಾಟು ನಡೆಸಿದವು. ಬ್ಯಾಂಕ್ ಮತ್ತು ಫಾರ್ಮಾ ಸೂಚ್ಯಂಕಗಳು ಶೇಕಡಾ 1 ರಷ್ಟು ಲಾಭದೊಂದಿಗೆ ವಹಿವಾಟು ನಡೆಸಿದವು. ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ಸ್ಮಾಲ್‌ಕ್ಯಾಪ್ 100 ಸೂಚ್ಯಂಕಗಳು ಕ್ರಮವಾಗಿ ಶೇಕಡಾ 1.8 ಮತ್ತು 0.9ರಷ್ಟು ಏರಿದವು. ದಾಖಲೆಯ ಗರಿಷ್ಠ ಮಟ್ಟದಿಂದ ಶೇ 5ಕ್ಕೂ ಹೆಚ್ಚು ಕುಸಿದ ನಂತರ ಮತ್ತು ಸುಮಾರು ಎಂಟು ತಿಂಗಳಲ್ಲಿ ಅತಿದೊಡ್ಡ ಸಾಪ್ತಾಹಿಕ ಕುಸಿತದ ನಂತರ, ತಜ್ಞರು ಹೇಳುವಂತೆ, ಅದಾಗಲೇ ಕೆಳಗೆ ಇಳಿದ ಗುಣಮಟ್ಟದ ಹಲವಾರು ಷೇರುಗಳು ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಪ್ರಬಲವಾಗಿ ಉಳಿದಿರುವ ಕಾರಣ ಶಾರ್ಟ್ ಕವರ್ ಮತ್ತು ಮೌಲ್ಯದ ಖರೀದಿಯನ್ನು (Value Pick) ನೋಡಲಾರಂಭಿಸಿದವು.

ಒಂದು ಬ್ಯಾರೆಲ್‌ಗೆ 86 ಡಾಲರ್ ಅನ್ನು ಮುಟ್ಟಿದ ನಂತರ ಕಚ್ಚಾ ತೈಲದ ಬೆಲೆಗಳು ಸೀಮಿತ ವ್ಯಾಪ್ತಿಯಲ್ಲಿ ಮುಂದುವರೆದವು, ಈ ಸುದ್ದಿ ಪ್ರಕಟಣೆಯ ಸಮಯದಲ್ಲಿ ಬ್ಯಾರೆಲ್‌ಗೆ ಸುಮಾರು 84 ಡಾಲರ್​ಗೆ ವಹಿವಾಟು ಆಗುತ್ತಿತ್ತು.

5 ತಾಂತ್ರಿಕ ನೋಟ (Technical View) ಸದ್ಯದ ಬೆಲೆಯು ಆರಂಭಿಕ ಬೆಲೆಗಿಂತ ಹೆಚ್ಚಿರುವುದರಿಂದ ನಿಫ್ಟಿ 50 ದೈನಂದಿನ ಚಾರ್ಟ್‌ಗಳಲ್ಲಿ ಬುಲಿಶ್ ಕ್ಯಾಂಡಲ್ ರೂಪಿಸಿದೆ. ಸೂಚ್ಯಂಕವು ನಿರ್ಣಾಯಕವಾಗಿ 18,000 ಅಡಚಣೆಯನ್ನು ದಾಟಿದರೆ ಮತ್ತಷ್ಟು ಏರಿಕೆಯಾಗಬಹುದು ಎಂದು ತಜ್ಞರು ಹೇಳಿದ್ದಾರೆ. “ಮಾರುಕಟ್ಟೆಯು ಸ್ವಲ್ಪ ಹೆಚ್ಚು ಮಾರಾಟವಾಗಿರುವುದರಿಂದ (Over Sold), ನಡುವೆ ಕೆಲವು ಪರಿಹಾರ ಕ್ರಮಗಳನ್ನು ನೋಡಬಹುದು. ಆದರೆ ಟ್ರೇಡರ್ಸ್ ಅಂತಹದ್ದು ಮರುಕಳಿಸುವುದರಿಂದ ದೂರ ಹೋಗಬಾರದು. ಹೆಚ್ಚಿನ ಭಾಗದಲ್ಲಿ 18,000-18,100 ಅನ್ನು ಈಗ ತಕ್ಷಣದ ಅಡಚಣೆಗಳಾಗಿ ನೋಡಲಾಗುತ್ತಿದೆ. ಅದರ ಕಡೆಗೆ ಯಾವುದೇ ಪುಟಿಯುವುದನ್ನು ದೀರ್ಘಾವಧಿಯಲ್ಲಿ ಹಗುರಗೊಳಿಸಲು ಬಳಸಬೇಕು, ವಿಶ್ಲೇಷಕರು ಹೇಳಿದ್ದಾರೆ.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಇಂಡಸ್​ಇಂಡ್​ ಬ್ಯಾಂಕ್ ಶೇ 7.80 ಹಿಂಡಾಲ್ಕೋ ಶೇ 3.99 ಎಚ್​ಸಿಎಲ್​ ಟೆಕ್ ಶೇ 3.97 ಭಾರ್ತಿ ಏರ್​ಟೆಲ್ ಶೇ 3.96 ಗ್ರಾಸಿಮ್ ಶೇ 3.95

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಯುಪಿಎಲ್​ ಶೇ -2.72 ಮಹೀಂದ್ರಾ ಅಂಡ್ ಮಹೀಂದ್ರಾ ಶೇ -1.57 ಬಜಾಜ್​ ಫಿನ್​ಸರ್ವ್ ಶೇ -1.43 ನೆಸ್ಟ್ಲೆ ಶೇ -0.32

ಇದನ್ನೂ ಓದಿ: Muhurat trading 2021: ನವೆಂಬರ್​ 4ಕ್ಕೆ ಷೇರುಪೇಟೆಯಲ್ಲಿ ಮುಹೂರ್ತ ವಹಿವಾಟು; ಅವಧಿ, ಮಹತ್ವ, ವಿಶೇಷ ಮತ್ತಿತರ ವಿವರ

Follow us on

Related Stories

Most Read Stories

Click on your DTH Provider to Add TV9 Kannada