Pratip Chaudhuri Arrest: ಎಸ್‌ಬಿಐ ಮಾಜಿ ಅಧ್ಯಕ್ಷ ಪ್ರತಿಪ್ ಚೌಧುರಿ ಬಂಧನ ಉದ್ದೇಶಪೂರ್ವಕ ಎಂದ ರಜನೀಶ್ ಕುಮಾರ್
ಪ್ರತಿಪ್ ಚೌಧುರಿ ಅವರನ್ನು ಜೈಸಲ್ಮೇರ್ ಪೊಲೀಸರು ಬಂಧಿಸಿರುವುದು ಉದ್ದೇಶಪೂರಿತ ಕಾರ್ಯ ಎಂದು ಎಸ್‌ಬಿಐ ಮಾಜಿ ಅಧ್ಯಕ್ಷ ರಜನೀಶ್ ಆರೋಪಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಮಾಜಿ ಅಧ್ಯಕ್ಷ ರಜನೀಶ್ ಕುಮಾರ್ ಅವರು ನವೆಂಬರ್ 1ರಂದು ಆಗಿರುವ ಪ್ರತಿಪ್ ಚೌಧುರಿ ಬಂಧನವನ್ನು ಉದ್ದೇಶಪೂರ್ವಕ ಕ್ರಮ ಎಂದು ಕರೆದಿದ್ದಾರೆ. “ಇದು ದೊಡ್ಡ ಮಟ್ಟದ ಉದ್ದೇಶಪೂರ್ವಕ, ಉನ್ನತ ಮಟ್ಟದ ಕೈನ ಕಾರ್ಯ. ಇದು ತೀರ್ಪಿನ ದೋಷ ಎಂದು ತೋರುತ್ತದೆ. ARCಗಳಿಗೆ ಆಸ್ತಿಗಳನ್ನು ಮಾರಾಟ ಮಾಡಲು ಆರ್‌ಬಿಐ ರೂಪಿಸಿದ ಪ್ರಕ್ರಿಯೆ ಮತ್ತು ನಿಯಮಾವಳಿಗಳಿವೆ. ಇಲ್ಲಿ ಭ್ರಷ್ಟಾಚಾರ ಎಲ್ಲಿದೆ?,” ಎಂದು ಕುಮಾರ್ ಪ್ರಶ್ನಿಸಿದ್ದಾರೆ. ನವೆಂಬರ್ 1, 2021ರಂದು ಜೈಸಲ್ಮೇರ್ ಪೊಲೀಸರು ಸಾಲದ ಹಗರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮಾಜಿ ಅಧ್ಯಕ್ಷ ಪ್ರತಿಪ್ ಚೌಧುರಿ ಅವರನ್ನು ಬಂಧಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 2008ರಲ್ಲಿ ಹೋಟೆಲ್ ನಿರ್ಮಾಣಕ್ಕೆ ಎಸ್‌ಬಿಐನಿಂದ 24 ಕೋಟಿ ರೂಪಾಯಿ ಸಾಲ ಪಡೆದಿರುವ ಗೋದಾವನ್ ಸಮೂಹ ಒಡೆತನದ ಆಸ್ತಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ವರದಿಯ ಪ್ರಕಾರ, ಚೌಧುರಿ ವಿರುದ್ಧದ ಆರೋಪಗಳಲ್ಲಿ 200 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬ್ಯಾಂಕ್ ಸಾಲ ಮರುಪಾವತಿಗಾಗಿ ವಶಪಡಿಸಿಕೊಂಡ ನಂತರ 25 ಕೋಟಿಗೆ ಮಾರಾಟ ಮಾಡಲಾಗಿದೆ ಎಂಬುದು ಸಹ ಸೇರಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಪಷ್ಟೀಕರಣದಲ್ಲಿ ನೀಡಲಾದ ದಿನಾಂಕಗಳ ಪ್ರಕಾರ, ಚೌಧುರಿ ಬಂಧನದ ನಂತರ, ಆಲ್ಕೆಮಿಸ್ಟ್ ಅಸೆಟ್ ರೀಕನ್‌ಸ್ಟ್ರಕ್ಷನ್ ಕಂಪೆನಿಗೆ (ARC) ಗೋದಾವನ್ ಆಸ್ತಿಗಳನ್ನು ಮಾರಾಟ ಮಾಡಲು 2014ರ ಜನವರಿಯಲ್ಲಿ ಅನುಮೋದನೆ ತೆಗೆದುಕೊಳ್ಳಲಾಗಿದೆ. ARCಗೆ ನಿಯೋಜನೆಯನ್ನು 2014ರ ಮಾರ್ಚ್‌ನಲ್ಲಿ ಪೂರ್ಣಗೊಳಿಸಲಾಗಿದೆ. ಚೌಧುರಿ ಅವರು 2013ರಲ್ಲಿ ಬ್ಯಾಂಕ್ನ ಸೇವೆಯಿಂದ ನಿವೃತ್ತರಾಗಿದ್ದರು. 2014ರ ಅಕ್ಟೋಬರ್ನಲ್ಲಿ ARC ಮಂಡಳಿಗೆ ಸೇರಿದ್ದರು. ಈ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು 2017ರಲ್ಲಿ 160 ಕೋಟಿ ರೂಪಾಯಿ ಎಂಬುದಾಗಿ ಅಂದಾಜಿಸಲಾಗಿದೆ ಎಂದು ಪತ್ರಿಕೆ ವರದಿ ತಿಳಿಸಿದೆ. ಕಡಿಮೆ ಮೌಲ್ಯಕ್ಕೆ ಆಸ್ತಿಗಳನ್ನು ಮಾರಾಟ ಮಾಡಿದ ನಂತರ ಗೋದಾವನ್ ಸಮೂಹ ನ್ಯಾಯಾಲಯದ ಮೊರೆ ಹೋಗಿತ್ತು.
ಅಭಿವೃದ್ಧಿ ಕಾರ್ಯ ಹೇಗೆ ಮಾಡುತ್ತಾರೆ? ಸ್ಪರ್ಧೆಯಲ್ಲಿರುವ ಮತ್ತೊಬ್ಬ ಉನ್ನತ ಬ್ಯಾಂಕರ್ ಕೂಡ ಬಂಧನದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. “ಒಂದು ಆಸ್ತಿಯನ್ನು ARCಗೆ ಮಾರಾಟ ಮಾಡಿದರೆ, ನಿಯಮಗಳ ಒಂದು ಗೊಂಚಲನ್ನು ಅನುಸರಿಸಲಾಗುತ್ತದೆ. ಈಗಿನ ಕ್ರಮಗಳು ಭಯಾನಕವಾಗಿವೆ. ಹೀಗಾದರೆ ಬ್ಯಾಂಕರ್‌ಗಳು ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಮಾಡುತ್ತಾರೆ?” ಎಂದು ಹೆಸರು ಹೇಳಲು ನಿರಾಕರಿಸಿದ ಬ್ಯಾಂಕರ್ ಪ್ರಶ್ನಿಸಿದ್ದಾರೆ. ಸುದ್ದಿಗೆ ಪ್ರತಿಕ್ರಿಯಿಸಿದ ಎಸ್‌ಬಿಐ ಮಾಜಿ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಟ್ವೀಟ್‌ನಲ್ಲಿ ಹೀಗೆ ಹೇಳಿದ್ದಾರೆ: “ಮೋದಿ ಸರ್ಕಾರದ ಎಲ್ಲ ಪ್ರಯತ್ನಗಳ ಹೊರತಾಗಿಯೂ ವ್ಯವಸ್ಥೆಯು ಸಂಪೂರ್ಣವಾಗಿ ಕರುಣಾಜನಕವಾಗಿದೆ. ನ್ಯಾಯಾಂಗ ಪ್ರಕ್ರಿಯೆಗಳ ಕೂಲಂಕಷ ಪರೀಕ್ಷೆಯ ಸಮಯ ಇದಾಗಿದೆ. ಪಾರದರ್ಶಕತೆಯನ್ನು ಸುಧಾರಿಸಲು ಮತ್ತು ಹೊಣೆಗಾರಿಕೆಯನ್ನು ಪರಿಚಯಿಸಬೇಕಿದೆ @PMOIndia.”
ಅವರು ಚೌಧುರಿಯ ಬಂಧನವನ್ನು ಪ್ರಶ್ನಿಸಿದ್ದು, “ನೋಟಿಸ್ ಇಲ್ಲದೆ ಮತ್ತು ಸಮನ್ಸ್ ಇಲ್ಲದೆ, ಬೇರೆ ರಾಜ್ಯದ ಪೊಲೀಸರು ದೆಹಲಿಯಲ್ಲಿ ಯಾರನ್ನಾದರೂ ಹೇಗೆ ಬಂಧಿಸಬಹುದು? ಕಾನೂನು ಪ್ರಕ್ರಿಯೆ ಎಲ್ಲಿದೆ,” ಎಂದಿದ್ದಾರೆ. ಎಸ್‌ಬಿಐ ತನ್ನ ಹೇಳಿಕೆಯಲ್ಲಿ, ಎಆರ್‌ಸಿಗೆ ಈ ಮೇಲ್ಕಂಡ ಮಾರಾಟವನ್ನು ಮಾಡುವಾಗ ಎಲ್ಲ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಬ್ಯಾಂಕ್ ಈಗಾಗಲೇ ಕಾನೂನು ಜಾರಿ ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ತನ್ನ ಸಹಕಾರವನ್ನು ನೀಡಿದೆ. ಅವರ ಕಡೆಯಿಂದ ಕೇಳಬಹುದಾದ ಯಾವುದೇ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ ಎಂದಿದೆ. “ಈಗ ನಮಗೆ ದೊರೆತಿರುವ ಕಲಾಪಕ್ಕೆ ಸಂಬಂಧಿಸಿದ ಪ್ರತಿಗಳ ಪ್ರಕಾರವಾಗಿ ಗೌರವಾನ್ವಿತ ನ್ಯಾಯಾಲಯಕ್ಕೆ ಘಟನೆಗಳ ಅನುಕ್ರಮದ ಬಗ್ಗೆ ಸರಿಯಾಗಿ ವಿವರಿಸಿರುವಂತೆ ತೋರುತ್ತಿಲ್ಲ. ಈ ಪ್ರಕರಣದಲ್ಲಿ ಎಸ್‌ಬಿಐ ಪಕ್ಷವಾಗಿ ಇರಲಿಲ್ಲವಾದ್ದರಿಂದ, ಈ ಪ್ರಕ್ರಿಯೆಯ ಭಾಗವಾಗಿ ಎಸ್‌ಬಿಐನ ಅಭಿಪ್ರಾಯಗಳನ್ನು ಕೇಳಲು ಯಾವುದೇ ಸಂದರ್ಭವಿಲ್ಲ,” ಎಂದು ಬ್ಯಾಂಕ್ ಹೇಳಿದೆ.
ಸಾಲ 2007ರಲ್ಲಿ ಬ್ಯಾಂಕ್‌ನಿಂದ ಹಣಕಾಸು ಒದಗಿಸಿದ್ದು ಜೈಸಲ್ಮೇರ್‌ನಲ್ಲಿರುವ ಹೋಟೆಲ್ ಯೋಜನೆಗಾಗಿದೆ ಎಂದು SBI ಸ್ಪಷ್ಟಪಡಿಸಿದೆ. ಮೂರು ವರ್ಷಗಳ ಕಾಲ ಯೋಜನೆಯು ಅಪೂರ್ಣವಾಗಿತ್ತು ಮತ್ತು ಪ್ರಮುಖ ಪ್ರವರ್ತಕರು ಏಪ್ರಿಲ್ 2010ರಲ್ಲಿ ನಿಧನರಾದರು. ಖಾತೆಯು ಜೂನ್ 2010ರಲ್ಲಿ NPA ಆಯಿತು ಎಂದು ಬ್ಯಾಂಕ್ ಹೇಳಿದೆ. “ಯೋಜನೆಯನ್ನು ಪೂರ್ಣಗೊಳಿಸಲು ಬ್ಯಾಂಕ್ ತೆಗೆದುಕೊಂಡ ವಿವಿಧ ಕ್ರಮಗಳು ಮತ್ತು ಬ್ಯಾಂಕ್ನ ಬಾಕಿಗಳ ಮರುಪಡೆಯುವಿಕೆ ಅಪೇಕ್ಷಿತ ಫಲಿತಾಂಶಗಳನ್ನು ನೀಡಲಿಲ್ಲ. ಆದ್ದರಿಂದ ಬ್ಯಾಂಕ್ನ ವಸೂಲಾತಿಯ ಪ್ರಯತ್ನಗಳ ಭಾಗವಾಗಿ, ಬಾಕಿಗಳನ್ನು ಮಾರ್ಚ್ 204ರಲ್ಲಿ ವಸೂಲಾತಿಗಾಗಿ ARCಗೆ ವಹಿಸಲಾಗಿದೆ,” ಎಂದು ಎಸ್‌ಬಿಐ ಹೇಳಿದೆ.
ಇದಲ್ಲದೆ, ಬ್ಯಾಂಕ್‌ನಿಂದ ಈ ಮಾರಾಟವನ್ನು ARCಗೆ ಬ್ಯಾಂಕ್ನ ನೀತಿಯ ಪ್ರಕಾರ ನಿಗದಿತ ಪ್ರಕ್ರಿಯೆಯ ಮೂಲಕ ಮಾಡಲಾಗಿದೆ. “ಸಾಲಗಾರರು IBC ಪ್ರಕ್ರಿಯೆಗೆ ಹೇಳಲಾದ ARCಯಿಂದ ಒಳಪಟ್ಟಿದ್ದಾರೆ ಮತ್ತು ಡಿಸೆಂಬರ್ 2017ರಲ್ಲಿ NBFCನಿಂದ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದೆ. NCLT, ದೆಹಲಿಯ ಆದೇಶದ ಅಡಿಯಲ್ಲಿ ಮತ್ತೆ ಪ್ರಕ್ರಿಯೆಯ ಮೂಲಕ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದೆ,” ಎಂದು ಬ್ಯಾಂಕ್ನ ಹೇಳಿಕೆಯು ತಿಳಿಸಿದೆ.
“ಮರುವಸೂಲಾತಿ ಪ್ರಯತ್ನಗಳು ವಿಫಲವಾದ ಕಾರಣ ಜನವರಿ 2014ರಲ್ಲಿ ARCಗೆ ಮಾರಾಟಕ್ಕೆ ಅನುಮೋದನೆಗಳನ್ನು ತೆಗೆದುಕೊಳ್ಳಲಾಯಿತು. ARCಗೆ ನಿಯೋಜನೆಯು ಮಾರ್ಚ್ 2014ರಲ್ಲಿ ಪೂರ್ಣಗೊಂಡಿತು. ಸಾಲಗಾರರು ARCಗೆ ಆಸ್ತಿಯನ್ನು ಮಾರಾಟ ಮಾಡುವುದರ ವಿರುದ್ಧ ಆರಂಭದಲ್ಲಿ ರಾಜ್ಯ ಪೊಲೀಸ್‌ನಲ್ಲಿ FIR ಅನ್ನು ದಾಖಲಿಸಿದ್ದರು. ಪೊಲೀಸ್ ಅಧಿಕಾರಿಗಳು ಸಲ್ಲಿಸಿದ ನೆಗೆಟಿವ್ ಕ್ಲೋಷರ್ ವರದಿಯ ವಿರುದ್ಧ ಅಸಮಾಧಾನಗೊಂಡ ಸಾಲಗಾರರು, CJM ನ್ಯಾಯಾಲಯದ ಮುಂದೆ ‘ಪ್ರತಿಭಟನೆ ಅರ್ಜಿ’ ಸಲ್ಲಿಸಿದ್ದರು,” ಎಂದು ಬ್ಯಾಂಕ್ ಹೇಳಿದೆ. “ಪ್ರಾಸಂಗಿಕವಾಗಿ ಎಸ್‌ಬಿಐ ಅನ್ನು ಈ ಪ್ರಕರಣದಲ್ಲಿ ಪಾರ್ಟಿಯನ್ನಾಗಿ ಮಾಡಲಾಗಿಲ್ಲ. ಅಕ್ಟೋಬರ್ 2014ರಲ್ಲಿ ತಮ್ಮ ಮಂಡಳಿಗೆ ಸೇರಿದ ಚೌಧುರಿ ಸೇರಿದಂತೆ ಆ ಎಆರ್‌ಸಿಯ ಎಲ್ಲ ನಿರ್ದೇಶಕರನ್ನು ಈ ಪ್ರಕರಣದಲ್ಲಿ ಹೆಸರಿಸಲಾಗಿದೆ,” ಎಂದು ಬ್ಯಾಂಕ್ ಹೇಳಿದೆ.
ಇದನ್ನೂ ಓದಿ: SBI Pensioners Facility: ಪೆನ್ಷನ್ದಾರರಿಗೆ ಎಸ್‌ಬಿಐನಿಂದ ವಿಶೇಷ ವ್ಯವಸ್ಥೆ; ಈಗ ಸಲ್ಲಿಸಬಹುದು ವಿಡಿಯೋ ಜೀವಿತ ಪ್ರಮಾಣಪತ್ರ