ಫ್ಲಿಪ್ಕಾರ್ಟ್ನಿಂದ ಗುರುವಾರ Shopsy ಆ್ಯಪ್ ಅನಾವರಣಗೊಳಿಸಲಾಗಿದೆ. ಈ ಆ್ಯಪ್ ಮೂಲಕವಾಗಿ ಭಾರತೀಯ ಉದ್ಯಮ ಸಂಸ್ಥೆಗಳವರು ಆರಂಭ ಹೂಡಿಕೆ ಇಲ್ಲದೆ ಸ್ವಂತವಾಗಿ ಆನ್ಲೈನ್ ಉದ್ಯಮ ಮಾಡಬಹುದು. Shopsy ಆ್ಯಪ್ 15 ಕೋಟಿ ಉತ್ಪನ್ನಗಳನ್ನು ಆಫರ್ ಮಾಡುತ್ತದೆ. ಅದರಲ್ಲಿ ಫ್ಯಾಷನ್, ಬ್ಯೂಟಿ. ಮೊಬೈಲ್ಗಳು, ಮನೆಗೆ ಬೇಕಾದ ಪರಿಕರಗಳು ಹೀಗೆ ನಾನಾ ಉತ್ಪನ್ನಗಳನ್ನು ವೈಯಕ್ತಿಕ ಉದ್ಯಮಿಗಳಿಗೆ ಒದಗಿಸುತ್ತದೆ. Shopsy ಆ್ಯಪ್ ಮೂಲಕವಾಗಿ 2023ರ ಹೊತ್ತಿಗೆ 2.50 ಕೋಟಿಗೂ ಹೆಚ್ಚು ಆನ್ಲೈನ್ ಉದ್ಯಮದಾರರಿಗೆ ವೇದಿಕೆ ಒದಗಿಸುವುದಕ್ಕೆ ಗುರಿ ಹಾಕಿಕೊಂಡಿದೆ. “ಈಗ, ಯಾರು ಬೇಕಾದರೂ ಎಲ್ಲಿಂದಲಾದರೂ ತಮ್ಮ ಸ್ವಂತ ಆನ್ಲೈನ್ ಉದ್ಯಮ ಆರಂಭಿಸಬಹುದು. ಅದಕ್ಕೆ ಯಾವ ಬಂಡವಾಳವೂ ಬೇಡ. ಇದರ ಜತೆಗೆ ನಾವು ಫ್ಲಿಪ್ಕಾರ್ಟ್ನಿಂದ ಭಾರತೀಯ ಉದ್ಯಮಿಗಳಿಗಾಗಿ ಇ-ಕಾಮರ್ಸ್ ಪರಿಣತ ವರ್ಷ ಆರಂಭಿಸುತ್ತಿದ್ದೇವೆ,” ಫ್ಲಿಪ್ಕಾರ್ಟ್ ಗ್ರೋಥ್ ಅಂಡ್ ಮಾನಟೈಸೇಷನ್ ಹಿರಿಯ ಉಪಾಧ್ಯಕ್ಷ ಪ್ರಕಾಶ್ ಸಿಕಾರಿಯಾ ಹೇಳಿದ್ದಾರೆ.
“ಉದ್ಯಮಿಗಳು ಈಗ ಫ್ಲಿಪ್ಕಾರ್ಟ್ನ ಕ್ಯಾಟಲಾಗ್ ಬಳಸಿಕೊಳ್ಳಲಿದ್ದಾರೆ. ವಿಶ್ವಾಸಾರ್ಹತೆ ಹಾಗೂ ವೇಗಕ್ಕಾಗಿ ಡೆಲಿವರಿ ನೆಟ್ವರ್ಕ್ಗಳು ಮತ್ತು ಮೂಲಸೌಕರ್ಯ ಮಾಡಲಾಗಿದೆ. ಈ ಅನುಕೂಲವು ಅಂತಿಮ ಬಳಕೆದಾರರ ಅನುಭವವನ್ನು ಹೆಚ್ಚು ಮಾಡುವುದಕ್ಕೆ ಸಹಾಯ ಆಗುತ್ತದೆ. ಇದರ ಬದಲಿಗೆ ಅವರ ಉದ್ಯಮ ಬೆಳೆಯಲು ಸಹಾಯ ಆಗುತ್ತದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬಳಕೆದಾರರು ಸರಳವಾಗಿ Shopsy ಆ್ಯಪ್ನಲ್ಲಿ ತಮ್ಮ ಫೋನ್ ನಂಬರ್ ನೋಂದಣಿ ಮಾಡಿಕೊಂಡರೆ ಸಾಕು. ತಮ್ಮ ಆನ್ಲೈನ್ ಉದ್ಯಮ ಪಯಣ ಆರಂಭಿಸಬಹುದು.
ಹೆಸರಾಂತ ಸೋಷಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಆ್ಯಪ್ಗಳ ಮೂಲಕವಾಗಿ ಖರೀದಿಗೆ ಆಸಕ್ತಿ ಇರುವ ಗ್ರಾಹಕರ ಜತೆಗೆ ಬಳಕೆದಾರರು ಕ್ಯಾಟಲಾಗ್ ಹಂಚಿಕೊಳ್ಳಬಹುದು. ಅವರ ಬದಲಿಗೆ ಆರ್ಡರ್ ಮಾಡಿ, ಆ ವಹಿವಾಟಿನ ಮೇಲೆ ಕಮಿಷನ್ ಸಂಪಾದಿಸಬಹುದು. ಆರ್ಡರ್ ಮಾಡಿದ ಉತ್ಪನ್ನ ಯಾವುದು ಎಂಬುದರ ಆಧಾರದಲ್ಲಿ ಕಮಿಷನ್ ಪರ್ಸೆಂಟೇಜ್ ನಿರ್ಧಾರ ಆಗುತ್ತದೆ ಎಂದು ಫ್ಲಿಪ್ಕಾರ್ಟ್ ಹೇಳಿದೆ. ”ಯಾರಿಗೆ ಉತ್ತಮ ನೆಟ್ವರ್ಕ್ ಇದ್ದು, ಜನರು ಅವರನ್ನು ನಂಬುತ್ತಾರೋ ಅಂತವರು ಉದ್ಯಮಮ ಶುರು ಮಾಡಬಹುದು. ಹೂಡಿಕೆ, ದಾಸ್ತಾನು ಅಥವಾ ಸರಕು ಸಾಗಣೆಯ ನಿರ್ವಹಣೆ ಇಂಥ ಯಾವ ಸಮಸ್ಯೆಯೂ ಇಲ್ಲ,” ಎಂದು ಕಂಪೆನಿ ಹೇಳಿದೆ.
ಇದನ್ನೂ ಓದಿ: Samsung Galaxy F22: ಸ್ಯಾಮ್ಸಂಗ್ ಗ್ಯಾಲಕ್ಸಿ ಜುಲೈ 6ಕ್ಕೆ ಅನಾವರಣ; ಬೆಲೆ, ದರ ಮತ್ತಿತರ ವಿವರ ಇಲ್ಲಿದೆ
(Flipkart launched Shopsy app for Indian entrepreneurs online business)
Published On - 6:23 pm, Thu, 1 July 21