ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರದಂದು 2022-23ರ ಸವರನ್ ಗೋಲ್ಡ್ ಬಾಂಡ್ ಸ್ಕೀಮ್‌ನ (SGB) ಮೊದಲ ಕಂತಿಗೆ ಪ್ರತಿ ಗ್ರಾಂ ಚಿನ್ನಕ್ಕೆ 5,091 ನೀಡಿಕೆ ಬೆಲೆಯನ್ನು ಪ್ರಕಟಿಸಿದ್ದು, ಇದು ಚಂದಾದಾರಿಕೆಗಾಗಿ ಜೂನ್ 20ರಂದು ತೆರೆಯಲು ಸಿದ್ಧವಾಗಿದೆ. ಮೊದಲ ಭಾಗವು ಜೂನ್ 24, 2022 ರವರೆಗೆ ಚಂದಾದಾರಿಕೆಗೆ ಲಭ್ಯ ಇರುತ್ತದೆ. ಜೂನ್ 17ರಂದು ನೀಡಿದ ಹೇಳಿಕೆಯಲ್ಲಿ, ಆರ್‌ಬಿಐ “ವಾರದ ಕೊನೆಯ ಮೂರು ವ್ಯವಹಾರ ದಿನಗಳಲ್ಲಿ 999 ಶುದ್ಧತೆಯ ಚಿನ್ನಕ್ಕಾಗಿ ಸರಳ ಸರಾಸರಿ ಮುಕ್ತಾಯದ ಬೆಲೆಯನ್ನು ಆಧರಿಸಿ ಬಾಂಡ್‌ನ ನಾಮಿನಲ್ ಮೌಲ್ಯವನ್ನು (ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ಲಿಮಿಟೆಡ್ (IBJA) ಪ್ರಕಟಿಸಲಾಗಿದೆ) ಚಂದಾದಾರಿಕೆ ಅವಧಿಗೆ ಮುಂಚಿನ, ಅಂದರೆ ಜೂನ್ 15, ಜೂನ್ 16 ಮತ್ತು ಜೂನ್ 17, 2022 ರಂದು ಪ್ರತಿ ಗ್ರಾಂ ಚಿನ್ನಕ್ಕೆ ರೂ. 5,091ರಂತೆ ಆಗುತ್ತದೆ.”
ಆದರೆ, ಆರ್‌ಬಿಐನೊಂದಿಗೆ ಸಮಾಲೋಚಿಸಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ಹಾಗೂ ಡಿಜಿಟಲ್ ಮೋಡ್ನಲ್ಲಿ ಪಾವತಿ ಮಾಡುವವರಿಗೆ ನಾಮಿನಲ್ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ, ಪ್ರತಿ ಗ್ರಾಮ್ಗೆ ರೂ.50 ರಿಯಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಸರ್ಕಾರದ ಪರವಾಗಿ 2022-23ರ ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 1ರ ಸರಣಿಯನ್ನು ಆರ್‌ಬಿಐ ನೀಡಲಿದೆ. SGBಗಳನ್ನು ನಿವಾಸಿ ವ್ಯಕ್ತಿಗಳು, ಹಿಂದೂ ಅವಿಭಕ್ತ ಕುಟುಂಬಗಳು, ಟ್ರಸ್ಟ್‌ಗಳು, ವಿಶ್ವವಿದ್ಯಾನಿಲಯಗಳು ಮತ್ತು ಚಾರಿಟಬಲ್ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಬಿಡ್ಡಿಂಗ್ ಅವಧಿಯ ನಂತರ, ಆರ್‌ಬಿಐ ಮೊದಲ ಕಂತಿನಲ್ಲಿ ಜೂನ್ 28ರಂದು ಬಾಂಡ್‌ಗಳ ವಿತರಣೆಯ ದಿನಾಂಕವನ್ನು ನಿಗದಿಪಡಿಸಿದೆ.
ಇದಕ್ಕಾಗಿ ಹೂಡಿಕೆದಾರರಿಗೆ ಹೋಲ್ಡಿಂಗ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ. SGBಗಳು ಡಿಮ್ಯಾಟ್ ಫಾರ್ಮ್‌ಗೆ ಪರಿವರ್ತಿಸಲು ಅರ್ಹವಾಗಿರುತ್ತವೆ. ಗಮನಾರ್ಹವಾಗಿ, SGBಗಳನ್ನು ಸಾಲಗಳಿಗೆ ಅಡಮಾನವಾಗಿ ಬಳಸಬಹುದು. ಸಾಲ-ಮೌಲ್ಯ (LTV) ಅನುಪಾತವನ್ನು ಕಾಲಕಾಲಕ್ಕೆ ರಿಸರ್ವ್ ಬ್ಯಾಂಕ್ ಕಡ್ಡಾಯಗೊಳಿಸಿದ ಸಾಮಾನ್ಯ ಚಿನ್ನದ ಸಾಲಕ್ಕೆ ಸಮನಾಗಿ ಹೊಂದಿಸಬೇಕು. ಅಲ್ಲದೆ, SGBಗಳು ವಹಿವಾಟಿಗೂ ಅರ್ಹವಾಗಿರುತ್ತವೆ. ಇದಲ್ಲದೆ, SGB ವಿತರಣೆಗಾಗಿ ಕಮಿಷನ್ ಸ್ವೀಕರಿಸುವ ಆಫೀಸ್ಗಳು ಸ್ವೀಕರಿಸಿದ ಒಟ್ಟು ಚಂದಾದಾರಿಕೆಯ ಶೇ 1 ದರದಲ್ಲಿ ಪಾವತಿಸಲಾಗುವುದು ಎಂದು ಆರ್‌ಬಿಐ ಹೇಳಿದೆ ಮತ್ತು ಸ್ವೀಕರಿಸುವ ಆಫೀಸ್ಗಳು ಕನಿಷ್ಠ ಶೇ 50 ಕಮಿಷನ್ ಅನ್ನು ವ್ಯವಹಾರ ತಂದುಕೊಟ್ದ ಏಜೆಂಟ್ ಅಥವಾ ಉಪ- ಏಜೆಂಟ್ ಜತೆ ಹಂಚಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Taxation On Paper Gold: ಕಾಗದ ಸ್ವರೂಪದ ಚಿನ್ನದ ಮೇಲೆ ತೆರಿಗೆ ಲೆಕ್ಕಾಚಾರ ಹೇಗೆ? ಇಲ್ಲಿದೆ ವಿವರಣೆ