ದಿವಾಳಿ ಎದ್ದ ಗೋಫಸ್ಟ್ ಏರ್ಲೈನ್ ಸಂಸ್ಥೆಯ ಖರೀದಿಗೆ ಮುಂದಾದ ಸ್ಪೈಸ್ ಜೆಟ್; ಸ್ಕೈ ಒನ್, ಸಾಫ್ರಿಕ್​ನಿಂದಲೂ ಆಸಕ್ತಿ

|

Updated on: Dec 19, 2023 | 2:23 PM

Spice Jet to buy Go First: ಮೇ ತಿಂಗಳಿಂದ ವೈಮಾನಿಕ ಸೇವೆ ನಿಲ್ಲಿಸಿರುವ ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆಯನ್ನು ಖರೀದಿಸಲು ಸ್ಪೈಸ್ ಜೆಟ್ ಆಸಕ್ತಿ ತೋರಿದೆ. ಎಂಜಿನ್ ಸಮಸ್ಯೆಯಿಂದಾಗಿ ವಿಮಾನಗಳು ಸರಿಯಾಗಿ ಸಂಚರಿಸದ ಪರಿಣಾಮ ತೀವ್ರ ನಷ್ಟಗೊಂಡು ಬ್ಯಾಂಕ್ರಪ್ಸಿ ತಡೆಗೆ ಗೋಫಸ್ಟ್ ಅರ್ಜಿ ಸಲ್ಲಿಸಿತ್ತು. ಇದೀಗ ಸ್ಪೈಸ್ ಜೆಟ್ ಮಾತ್ರವಲ್ಲದೆ, ಶಾರ್ಜಾ ಮೂಲದ ಸ್ಕೈ ನ್ ಮತ್ತು ಆಫ್ರಿಕಾದ ಸಾಫ್ರಿಕ್ ಇನ್ವೆಸ್ಟ್​ಮೆಂಟ್ಸ್ ಸಂಸ್ಥೆಗಳೂ ಗೋಫಸ್ಟ್ ಪಡೆಯಲು ಆಸಕ್ತಿ ಸಲ್ಲಿಸಿವೆ.

ದಿವಾಳಿ ಎದ್ದ ಗೋಫಸ್ಟ್ ಏರ್ಲೈನ್ ಸಂಸ್ಥೆಯ ಖರೀದಿಗೆ ಮುಂದಾದ ಸ್ಪೈಸ್ ಜೆಟ್; ಸ್ಕೈ ಒನ್, ಸಾಫ್ರಿಕ್​ನಿಂದಲೂ ಆಸಕ್ತಿ
ಗೋ ಫಸ್ಟ್ ಏರ್ಲೈನ್
Follow us on

ನವದೆಹಲಿ, ಡಿಸೆಂಬರ್ 19: ದಿವಾಳಿ ಎದ್ದಿರುವ ಗೋ ಫಸ್ಟ್ ಏರ್ಲೈನ್ ಸಂಸ್ಥೆಯನ್ನು ಖರೀದಿಸಲು ಸ್ಪೈಸ್ ಜೆಟ್ ಸಂಸ್ಥೆ ಆಸಕ್ತಿ ತೋರಿಸಿದೆ. ಫಂಡಿಂಗ್ ಕೊರತೆ ಎದುರಿಸುತ್ತಿರುವ ಸ್ಪೈಸ್ ಜೆಟ್​ನ (cash-strapped Spice Jet) ಈ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಷೇರು ವಿನಿಮಯ ಕೇಂದ್ರಗಳಿಗೆ (filing in exchanges) ಸಲ್ಲಿಸಿದ ಫೈಲಿಂಗ್​ನಲ್ಲಿ ಸ್ಪೈಸ್​ಜೆಟ್ ತನ್ನ ಪ್ರತಿಸ್ಪರ್ಧಿ ಸಂಸ್ಥೆಯ ಖರೀದಿಗೆ ಮುಂದಾಗಿರುವ ವಿಚಾರ ತಿಳಿಸಿದೆ.

‘ಗೋ ಫಸ್ಟ್ ಸಂಸ್ಥೆಯ ರೆಸಲ್ಯೂಶನ್ ಪ್ರೊಫೆನಲ್ (Resolution Professional) ಅವರಲ್ಲಿ ಆಸಕ್ತಿ ಸಲ್ಲಿಸಿದ್ದೇವೆ. ಖರೀದಿ ಆಫರ್ ಅನ್ನು ಸಲ್ಲಿಸಲು ಸಿದ್ಧ ಇದ್ದೇವೆ. ಗೋ ಫಸ್ಟ್ ಮತ್ತು ಸ್ಪೈಸ್​ಜೆಟ್​ನ ಸಂಭಾವ್ಯ ಸಂಯೋಜನೆಯಲ್ಲಿ ಒಂದು ಬಲಿಷ್ಠ ಮತ್ತು ಸಮರ್ಪಕ ಏರ್ಲೈನ್ ಅನ್ನು ಸೃಷ್ಟಿಸುವ ಉದ್ದೇಶ ಹೊಂದಿದ್ದೇವೆ,’ ಎಂದು ತನ್ನ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ಸ್ಪೈಸ್ ಜೆಟ್ ತಿಳಿಸಿದೆ.

ಇದನ್ನೂ ಓದಿ: Indian Economy: ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಕೊಡುಗೆ ಶೇ. 16ಕ್ಕಿಂತಲೂ ಹೆಚ್ಚಿರಲಿದೆ: ಐಎಂಎಫ್ ಅನಿಸಿಕೆ

ಇನ್ನು, ಗೋ ಫಸ್ಟ್ ಏರ್ಲೈನ್ ಸಂಸ್ಥೆಯನ್ನು ಕೊಳ್ಳಲು ಜಿಂದಾಲ್ ಪವರ್ ಈ ಹಿಂದೆ ಪ್ರಯತ್ನಿಸಿತ್ತು. ಆದರೆ, ಒಪ್ಪಂದ ಸಾಕಾರಗೊಳ್ಳಲಿಲ್ಲ. ಯುಎಇಯ ಶಾರ್ಜಾ ಮೂಲಕ ಸ್ಕೈ ಒನ್, ಆಫ್ರಿಕಾದ ಸಾಫ್ರಿಕ್ ಇನ್ವೆಸ್ಟ್​ಮೆಂಟ್ಸ್ ಸಂಸ್ಥೆಗಳೂ ಕೂಡ ಗೋ ಫಸ್ಟ್ ಖರೀದಿಗೆ ಆಸಕ್ತಿ ತೋರಿವೆ.

ವಾಡಿಯಾ ಗ್ರೂಪ್​ಗೆ ಸೇರಿದ ಗೋ ಫಸ್ಟ್ ಏರ್ಲೈನ್ ಸಂಸ್ಥೆ ಮೇ ತಿಂಗಳಿಂದಲೂ ಬಂದ್ ಆಗಿದೆ. ಅದರ 54 ಏರ್​ಬಸ್ ಎಸ್​ಇ ಎ320 ನಿಯೋ ವಿಮಾನಗಳು ಸಂಚಾರ ನಿಲ್ಲಿಸಿವೆ. ಪ್ರಾಟ್ ಅಂಡ್ ವಿಟ್ನೀ ಎಂಜಿನ್ ಸಮಸ್ಯೆಯಿಂದ ವಿಮಾನ ನಿಲ್ಲಿಸಬೇಕಿದೆ. ಇದರಿಂದ ದಿವಾಳಿ ಸ್ಥಿತಿ ತಲುಪಿದ್ದೇವೆ ಎಂಬುದು ಗೋಫಸ್ಟ್ ಸಂಸ್ಥೆಯ ಆರೋಪ. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಎಂಜಿನ್ ತಯಾರಕ ಸಂಸ್ಥೆಯೊಂದಿಗಿನ ವ್ಯಾಜ್ಯದಲ್ಲಿ ಗೋಫಸ್ಟ್ ಸಂಸ್ಥೆ ಪರವಾಗಿ ತೀರ್ಪು ಬಂದಿರುವುದು ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ