Starbucks: ಒಂದು ಟ್ವೀಟ್ ಕಾರಣಕ್ಕೆ ಲಕ್ಷ ಕೋಟಿ ರೂ ನಷ್ಟ ಮಾಡಿಕೊಂಡ ಸ್ಟಾರ್​ಬಕ್ಸ್

|

Updated on: Dec 07, 2023 | 3:10 PM

Starbucks Loses 11 Billion Dollar: ಗಾಜಾದಲ್ಲಿ ಹಮಾಸ್ ವಿರುದ್ಧ ಹೋರಾಡುತ್ತಿರುವ ಇಸ್ರೇಲ್​ಗೆ ಬೆಂಬಲ ನೀಡಿದ ಸ್ಟಾರ್​ಬಕ್ಸ್​ಗೆ ಬಾಯ್ಕಾಟ್ ಸಂಕಷ್ಟ ಎದುರಾಗಿದೆ. ನವೆಂಬರ್ 16ರಿಂದೀಚೆ ಅದರ ಷೇರುಬೆಲೆ ಶೇ. 10ರಷ್ಟು ಕುಸಿದಿದೆ. ಇದರಿಂದ 11 ಬಿಲಿಯನ್ ಡಾಲರ್ ನಷ್ಟವಾಗಿದೆ. ಸ್ಟಾರ್ ಬಕ್ಸ್​ ಮಾತ್ರವಲ್ಲ ಮೆಕ್​ಡೊನಾಲ್ಡ್ ಅಂಗಡಿಗಳಿಗೂ ಬಾಯ್ಕಾಟ್ ಟ್ರೆಂಡ್ ನಡೆದಿದೆ. ಷೇರು ಕುಸಿತ ಮಾತ್ರವಲ್ಲ, ಬಿಸಿನೆಸ್ ಕೂಡ ಕಡಿಮೆ ಆಗಿದೆ.

Starbucks: ಒಂದು ಟ್ವೀಟ್ ಕಾರಣಕ್ಕೆ ಲಕ್ಷ ಕೋಟಿ ರೂ ನಷ್ಟ ಮಾಡಿಕೊಂಡ ಸ್ಟಾರ್​ಬಕ್ಸ್
ಸ್ಟಾರ್​ಬಕ್ಸ್
Follow us on

ವಾಷಿಂಗ್ಟನ್, ಡಿಸೆಂಬರ್ 7: ಇಸ್ರೇಲ್​ಗೆ ಬೆಂಬಲ ನೀಡಿ ಕೆಲಸಗಾರರ ಒಕ್ಕೂಟವೊಂದು ಮಾಡಿದ ಟ್ವೀಟ್ ಪರಿಣಾಮ ಸ್ಟಾರ್​ಬಕ್ಸ್ ಕಾರ್ಪೊರೇಶನ್ (Starbucks Corporation) ಸಂಸ್ಥೆಯ ಷೇರುಮೌಲ್ಯ ದಿನೇ ದಿನೇ ಕುಸಿಯುತ್ತಿದೆ. ಕೆಲವೇ ದಿನಗಳ ಅಂತರದಲ್ಲಿ ಸ್ಟಾರ್​ಬಕ್ಸ್​ನ ಷೇರುಸಂಪತ್ತು ಶೇ. 10ರ ಸಮೀಪದಷ್ಟು ಕರಗಿಹೋಗಿದೆ. ಅದರಿಂದ ಆದ ನಷ್ಟ ಬರೋಬ್ಬರಿ 11 ಬಿಲಿಯನ್ ಡಾಲರ್. ಅಂದರೆ 90,000 ಕೋಟಿ ರೂಗೂ ಹೆಚ್ಚು ಮೊತ್ತದ ಷೇರುಸಂಪತ್ತು ಕುಗ್ಗಿಹೋಗಿದೆ. ಷೇರು ಮಾತ್ರವಲ್ಲ ಹಲವೆಡೆ ಸ್ಟಾರ್​ಬಕ್ಸ್ ಹೋಟೆಲ್​ನ ಬಿಸಿನೆಸ್ ಕೂಡ ಗಣನೀಯವಾಗಿ ಇಳಿದಿದೆ. ಈ ಡಬಲ್ ಹೊಡೆತಕ್ಕೆ ಚೇತರಿಸಿಕೊಳ್ಳುವ ಬಗೆ ಹೇಗೆ ಎಂಬುದು ಸ್ಟಾರ್​ಬಕ್ಸ್​ಗೆ ಮುಖ್ಯ ಪ್ರಶ್ನೆಯಾಗಿದೆ.

ಸ್ಟಾರ್​ಬಕ್ಸ್ ಮಾಡಿದ ಟ್ವೀಟ್ ಏನು?

ಸ್ಟಾರ್​ಬಕ್ಸ್ ವರ್ಕರ್ಸ್ ಯುನೈಟೆಡ್​ನಿಂದ ನವೆಂಬರ್ 16ರಂದು ಟ್ವೀಟ್ ಆಗಿತ್ತು. ಅದು ರೆಡ್ ಕಪ್ ಡೇ ಪ್ರಯುಕ್ತ ಮಾಡಿದ ಟ್ವೀಟ್ ಆಗಿದ್ದರೂ ಅದರಲ್ಲಿ ಇಸ್ರೇಲೀ ಜನರಿಗೆ ಬೆಂಬಲ ವ್ಯಕ್ತಪಡಿಸಲಾಗಿತ್ತು.

ಇದನ್ನೂ ಓದಿ: ನೆಟ್ಟಗಾಗದ ಪೇಟಿಎಂ ಹಣೆಬರಹ; ಗುರುವಾರ ಅದರ ಷೇರುಬೆಲೆ ಶೇ. 20ರಷ್ಟು ಕುಸಿತ; ಈ ಹೊಸ ಹಿನ್ನಡೆಗೆ ಏನು ಕಾರಣ?

ಆಗಿನಿಂದಲೂ ಸ್ಟಾರ್​ಬಕ್ಸ್ ಮೇಲೆ ವಿವಿಧೆಡೆ ಬಹಿಷ್ಕಾರ ಧ್ವನಿ ಆವರಿಸಿವೆ. ಸ್ಟಾರ್​ಬಕ್ಸ್ ಮಾತ್ರವಲ್ಲ ಮ್ಯಾಕ್​ಡೊನಾಲ್ಡ್ ಮೊದಲಾದ ಸಂಸ್ಥೆಗಳೂ ಕೂಡ ಇಸ್ರೇಲ್​ಗೆ ಬೆಂಬಲ ವ್ಯಕ್ತಪಡಿಸಿದ್ದವು. ಇಂಥ ಎಲ್ಲಾ ಕಂಪನಿಗಳ ಮೇಲೂ ಬಾಯ್ಕಾಟ್ ಟ್ರೆಂಡ್ ಇದೆ. ಇಸ್ರೇಲಿಗರು ನಿರ್ವಹಿಸುತ್ತಿರುವ ಎಲ್ಲಾ ಉದ್ದಿಮೆಗಳಿಗೂ ಬಾಯ್ಕಾಟ್ ಭೀತಿ ಎದುರಾಗಿದೆ.

ವಾಷಿಂಗ್ಟನ್​ನಲ್ಲಿ ಮುಖ್ಯ ಕಚೇರಿ ಇರುವ ಸ್ಟಾರ್​ಬಕ್ಸ್ ಕಾರ್ಪೊರೇಶನ್​ನ ಷೇರುಬೆಲೆ ನವೆಂಬರ್ 16ರಿಂದೀಚೆ ಕುಸಿಯುತ್ತಾ ಬಂದಿದೆ. ಅಂದು 107.2 ಡಾಲರ್ ಇದ್ದ ಅದರ ಷೇರುಬೆಲೆ ಡಿಸೆಂಬರ್ 6ರಂದು 95 ಡಾಲರ್​ಗೆ ಕುಸಿದುಹೋಗಿತ್ತು. ಇಂದು ಗುರುವಾರ ಷೇರುಬೆಲೆ 97 ಡಾಲರ್​ಗೆ ಏರಿದೆ.

ಇದನ್ನೂ ಓದಿ: ಭಾರತದ ಮಾರುಕಟ್ಟೆಗಳಿಗೆ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮುಗಿಬೀಳುತ್ತಿರುವುದು ಯಾಕೆ? ಇಲ್ಲಿದೆ ಕೆಲ ಪ್ರಮುಖ ಕಾರಣಗಳು

ಸ್ಟಾರ್​ಬಕ್ಸ್ ಸಂಸ್ಥೆಗೆ ಭಾರತ ಮೂಲದ ಲಕ್ಷ್ಮಣ್ ನರಸಿಂಹನ್ ಸಿಇಒ ಆಗಿದ್ದಾರೆ. ಒಂದು ವರ್ಷದ ಹಿಂದೆ ಹಂಗಾಮಿ ಸಿಇಒ ಆಗಿ ಬಂದಿದ್ದ ಅವರು 2023ರ ಏಪ್ರಿಲ್​ನಲ್ಲಿ ಪೂರ್ಣಪ್ರಮಾಣದ ಸಿಇಒ ಆಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Thu, 7 December 23