ಆಧಾರ್ ಕಾರ್ಡ್, ಪಾನ್ ಕಾರ್ಡ್ ಲಿಂಕ್ ಮಾಡಲು(pan Aadhaar link) ಇದೇ ಮಾರ್ಚ್ 31ರಂದು ಕೊನೇ ದಿನವಾಗಿದೆ. ಆಧಾರ್ ನಂಬರ್ ಮತ್ತು ಪಾನ್ ಕಾರ್ಡ್ ಜೋಡಣೆಗೆ ಇನ್ನು 4 ದಿನಗಳು ಮಾತ್ರ ಬಾಕಿ ಇದ್ದು, ಈ ಅವಧಿಯೊಳಗೆ ಜೋಡಣೆಯಾಗದಿದ್ದರೆ ಪಾನ್ ಕಾರ್ಡ್ ಅಮಾನ್ಯವಾಗಲಿದೆ. ಜೊತೆಗೆ ಬ್ಯಾಂಕ್ ವ್ಯವಹಾರಗಳು ಕೂಡಾ ಸಾಧ್ಯವಾಗದು. ಅಲ್ಲದೇ ತೆರಿಗೆ ಪಾವತಿಸುವಾಗ ಹೆಚ್ಚುವರಿಯಾಗಿ ಶೇ.10 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಾಗಿ ಆಧಾರ್, ಪಾನ್ ಕಾರ್ಡ್ ಲಿಂಕ್ ಮಾಡಿಸಲು ಸೈಬರ್ ಸೆಂಟರ್ಗಳಲ್ಲಿ ಜನ ಮುಗಿಬಿದ್ದಿದ್ದಾರೆ. ಫೈನ್ ಕಟ್ಟುವ ಭೀತಿಯಲ್ಲಿ ಕ್ಯೂನಲ್ಲಿ ನಿಂತು ಲಿಂಕ್ ಮಾಡಿಸುತ್ತಿದ್ದಾರೆ, ಇದನ್ನೇ ಕೆಲ ಸೈಬರ್ ಸೆಂಟರ್ಗಳು ಬಂಡವಾಳ ಮಾಡಿಕೊಂಡಿವೆ. ಬೇರೆ ಬೇರೆ ವೆಬ್ಸೈಟ್ಗಳಲ್ಲಿ ಪಾನ್ ಹಾಗೂ ಆಧಾರ್ ಲಿಂಕ್ ಮಾಡುತ್ತಿದ್ದಾರೆ. 1 ಸಾವಿರ ಶುಲ್ಕದ ಜೊತೆಗೆ ಸೈಬರ್ ಸೆಂಟರ್ ಮಾಲೀಕರು ಜೊತೆಗೆ ಪ್ರೊಸೆಸಿಂಗ್ ಶುಲ್ಕ ಎಂದು 500 ರೂಪಾಯಿ ಹೆಚ್ಚುವರಿ ವಸೂಲಿ ಮಾಡಲಾಗುತ್ತಿದೆ. ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸಲು ಇಲಾಖೆಯು ತೆರಿಗೆದಾರರಿಗೆ ತನ್ನ ವೆಬ್‌ಸೈಟ್‌ನಲ್ಲಿ ಲಿಂಕ್‌ಗಳನ್ನು ನೀಡಿದೆ. ಹಾಗಾದ್ರೆ, ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಪರಿಶೀಲಿಸುವುದು ಹೇಗೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಆಧಾರ್ ಲಿಂಕ್ ಸ್ಟೇಟಸ್ ತಿಳಿಯಲು ಇನ್ನೊಂದು ವಿಧಾನ ನೀವು ಎಸ್‌ಎಂಎಸ್ ಮೂಲಕವೂ ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಎಂದು ತಿಳಿದುಕೊಳ್ಳಬಹುದು. ಎಸ್‌ಎಂಎಸ್ ಮೂಲಕ ತಿಳಿಯಲು ನೀವು 567678 ಅಥವಾ 56161ಗೆ ಎಸ್‌ಎಂಎಸ್ ಮಾಡಬೇಕಾಗುತ್ತದೆ. UIDPAN ಎಂದು ಟೈಪ್ ಮಾಡಿ ಒಂದು ಸ್ಪೇಸ್ ನೀಡಿ ಬಳಿಕ 12 ಡಿಜಿಟ್‌ನ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ, ಒಂದು ಸ್ಪೇಸ್ ನೀಡಬೇಕು. ಅದಾದ ಬಳಿಕ ಪ್ಯಾನ್ ಸಂಖ್ಯೆಯನ್ನು ನಮೂದಿಸಿ 567678 ಅಥವಾ 56161ಗೆ ಎಸ್‌ಎಂಎಸ್ ಕಳುಹಿಸಬೇಕು.
ಇನ್ನಷ್ಟು ಬ್ಯುಸಿನೆಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 11:24 am, Tue, 28 March 23