ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿರುವುದು ಈಗ ಸಾಮಾನ್ಯದ ವಿಷಯ. ಕಾರಣಾಂತರಗಳಿಂದ ಹಲವು ಕ್ರೆಡಿಟ್ ಕಾರ್ಡ್ಗಳನ್ನು ಪಡೆದಿರುತ್ತೇವೆ. ಒಂದೋ ಎರಡೋ ಕಾರ್ಡ್ಗಳು ಮಾತ್ರ ಬಳಕೆಯಲ್ಲಿರುತ್ತವೆ. ಉಳಿದವು ನಿರುಪಯುಕ್ತವಾಗಿ ಉಳಿಯಬಹುದು. ಇಂಥ ಕಾರ್ಡ್ಗಳನ್ನು ಮರಳಿಸುವುದು ಕಷ್ಟವಲ್ಲ. ಬಹಳ ಸುಲಭ ಪ್ರಕ್ರಿಯೆಗಳ ಮೂಲಕ ಕ್ರೆಡಿಟ್ ಕಾರ್ಡ್ ಕ್ಲೋಸ್ (credit card closure) ಮಾಡಬಹುದು. ಇಂಥ ಕೆಲ ವಿಧಾನಗಳ ಪರಿಚಯ ಇಲ್ಲಿದೆ…
ಕ್ರೆಡಿಟ್ ಕಾರ್ಡ್ ಒದಗಿಸಿ ಸಂಸ್ಥೆಯ ಕಸ್ಟಮರ್ ಸರ್ವಿಸ್ ನಂಬರ್ ಅಥವಾ ಹೆಲ್ಪ್ಲೈನ್ ನಂಬರ್ ಡಯಲ್ ಮಾಡಿ. ಈ ನಂಬರ್ ನಿಮ್ಮಲ್ಲಿಲ್ಲದಿದ್ದರೆ ಗೂಗಲ್ ಮಾಡಿದರೆ ಸಿಗಬಹುದು. ಆ ನಂಬರ್ಗೆ ಕರೆ ಮಾಡಿ ಕ್ರೆಡಿಟ್ ಕಾರ್ಡ್ ಮುಚ್ಚಲು ಮನವಿ ಮಾಡಬಹುದು.
ಕ್ರೆಡಿಟ್ ಕಾರ್ಡ್ ಕಂಪನಿಯ ಕಚೇರಿ ಬಳಿ ಹೋಗಿ, ಅರ್ಜಿ ಸಲ್ಲಿಸಬೇಕು. ನಿಮ್ಮ ಕ್ರೆಡಿಟ್ ಕಾರ್ಡ್ನ ವಿವರಗಳನ್ನು ಇದರಲ್ಲಿ ತುಂಬಿಸಿರಬೇಕು.
ಇದನ್ನೂ ಓದಿ: ಸಂಕ್ರಾಂತಿ, ಗಣರಾಜ್ಯೋತ್ಸವ ಇತ್ಯಾದಿ… 2024ರ ಜನವರಿ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳೆಷ್ಟು? ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ?
ಕ್ರೆಡಿಟ್ ಕಾರ್ಡ್ ಕಂಪನಿಗಳು ಸಾರ್ವಜನಿಕವಾಗಿ ದೂರುಗಳನ್ನು ಪಡೆಯಲು ಇಮೇಲ್ ಐಡಿ ಹೊಂದಿರುತ್ತವೆ. ಇಮೇಲ್ ಮುಖಾಂತರ ಕ್ರೆಡಿಟ್ ಕಾರ್ಡ್ ರದ್ದುಗೊಳಿಸಲು ಮನವಿ ಕಳುಹಿಸಬಹುದು.
ಕ್ರೆಡಿಟ್ ಕಾರ್ಡ್ ಕಂಪನಿಯ ವೆಬ್ ಅಥವಾ ಆ್ಯಪ್ಗೆ ಹೋಗಿ ಅಲ್ಲಿ ಲಭ್ಯ ಇರುವ ಫಾರ್ಮ್ ಭರ್ತಿ ಮಾಡಿ, ಕಾರ್ಡ್ ಮುಚ್ಚಲು ಮನವಿ ಮಾಡಬಹುದು. ನೀವು ಅರ್ಜಿ ಸಲ್ಲಿಸಿದ ಬಳಿಕ ಬ್ಯಾಂಕ್ನವರು ನಿಮ್ಮ ದೃಢೀಕರಣ ಪಡೆಯಲು ಕರೆ ಮಾಡಬಹುದು.
ಇದನ್ನೂ ಓದಿ: ನಾಲ್ಕು ಬ್ಯಾಂಕುಗಳಿಂದ ಎಫ್ಡಿ ದರ ಹೆಚ್ಚಳ; ಠೇವಣಿಗಳಿಗೆ ಶೇ. 8.60ರವರೆಗೆ ಬಡ್ಡಿ; ಡೆಪಾಸಿಟ್ ಇಡಲು ಸುವರ್ಣಾವಕಾಶ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ