ನವೆಂಬರ್ 10, ಮಂಗಳವಾರ ಷೇರುಮಾರುಕಟ್ಟೆಗೆ ರಜೆ; ಈ ವರ್ಷ ಇರುವ ಇತರ ರಜಾದಿನಗಳಿವು…

ದೀಪಾವಳಿ ಬಲಿಪಾಡ್ಯಮಿಯ ದಿನವಾದ ನವೆಂಬರ್ 10, ಮಂಗಳವಾರದಂದು ಷೇರು ಮಾರುಕಟ್ಟೆಗೆ ರಜೆ ಇದೆ. ಬಿಎಸ್​ಇ ಮತ್ತು ಎನ್​ಎಸ್​ಇಯಲ್ಲಿ ಯಾವುದೇ ಟ್ರೇಡಿಂಗ್ ನಡೆಯುವುದಿಲ್ಲ. ಈ ನವೆಂಬರ್​ನಲ್ಲಿ ಒಟ್ಟು ಎರಡು ರಜಾದಿನಗಳಿವೆ. ನವೆಂಬರ್ 10, ಮತ್ತು ನವೆಂಬರ್ 24ರಂದು ರಜೆ ಇದೆ. ನವೆಂಬರ್ 24, ಗುರುನಾನಕ್ ಜಯಂತಿ ಪ್ರಯುಕ್ತ ರಜೆ ಇರುತ್ತದೆ.

ನವೆಂಬರ್ 10, ಮಂಗಳವಾರ ಷೇರುಮಾರುಕಟ್ಟೆಗೆ ರಜೆ; ಈ ವರ್ಷ ಇರುವ ಇತರ ರಜಾದಿನಗಳಿವು...
ಷೇರುಪೇಟೆ
Image Credit source: Getty Images

Updated on: Nov 09, 2026 | 7:08 PM

ನವದೆಹಲಿ, ನವೆಂಬರ್ 9: ಮೊನ್ನೆ ದೀಪಾವಳಿ ಧನಲಕ್ಷ್ಮೀ ಪೂಜೆಯ ದಿನದಂದು ಮುಹೂರ್ತ ಟ್ರೇಡಿಂಗ್ ಕಂಡಿದ್ದ ಭಾರತದ ಷೇರು ಮಾರುಕಟ್ಟೆಗೆ ಮಂಗಳವಾರ ರಜಾದಿನ ಇರುತ್ತದೆ. ನವೆಂಬರ್ 10, ದೀಪಾವಳಿ ಬಲಿಪ್ರತಿಪಾದ ದಿನದ ಪ್ರಯುಕ್ತ ಷೇರು ವಿನಿಮಯ ಕೇಂದ್ರಗಳಾದ ಬಿಎಸ್​ಇ ಮತ್ತು ಎನ್​ಎಸ್​ಇ ಬಂದ್ ಆಗಿರುತ್ತವೆ. ನವೆಂಬರ್ 11, ಬುಧವಾರ ಟ್ರೇಡಿಂಗ್ ಪುನಾರಂಭಗೊಳ್ಳುತ್ತದೆ.

ನವೆಂಬರ್​ನಲ್ಲಿ ಷೇರು ಮಾರುಕಟ್ಟೆಗೆ ಇನ್ನೂ ಒಂದು ದಿನ ರಜೆ ಇದೆ. ಡಿಸೆಂಬರ್​ನಲ್ಲಿಯೂ ಒಂದು ದಿನ ರಜೆ ಇದೆ. ನವೆಂಬರ್ 24, ಮಂಗಳವಾರದಂದು ಗುರುನಾನಕ್ ಜಯಂತಿ ಪ್ರಯುಕ್ತ ಶೇರು ಮಾರುಕಟ್ಟೆ ಬಂದ್ ಆಗಿರುತ್ತದೆ. ಡಿಸೆಂಬರ್​ನಲ್ಲಿ ಕ್ರಿಸ್ಮಸ್​ನಂದು ಬಾಗಿಲು ಮುಚ್ಚಿರಲಾಗುತ್ತದೆ.

Loading...

ಇದನ್ನೂ ಓದಿ: ಮುಂದುವರಿದ ಷೇರುಪೇಟೆ ಲಾಭದ ಓಟ; 25,100 ಅಂಕಗಳ ಸಮೀಪಕ್ಕೆ ಹೋದ ನಿಫ್ಟಿ

2026ರ ನವೆಂಬರ್ ಮತ್ತು ಡಿಸೆಂಬರ್​ನಲ್ಲಿ ಷೇರುಪೇಟೆ ರಜಾದಿನಗಳು

  • ನವೆಂಬರ್ 10, ಮಂಗಳವಾರ: ದೀಪಾವಳಿ ಬಲಿಪ್ರತಿಪಾದ ಪ್ರಯುಕ್ತ ರಜೆ
  • ನವೆಂಬರ್ 24, ಮಂಗಳವಾರ: ಗುರುನಾನಕ್ ಜಯಂತಿ ಪ್ರಯುಕ್ತ ರಜೆ
  • ಡಿಸೆಂಬರ್ 25, ಶುಕ್ರವಾರ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರಜೆ

ಒಂದು ವರ್ಷದಲ್ಲಿ ನಿಫ್ಟಿ ಕೊಟ್ಟ ರಿಟರ್ನ್ಸ್ ಎಷ್ಟು?

ಒಂದು ವರ್ಷದ ಹಿಂದಿನ ಸ್ಥಿತಿಗೆ ಹೋಲಿಸಿದರೆ ಮಾರುಕಟ್ಟೆ ಬಿದ್ದಿದೆ. ನಿಫ್ಟಿ ಸೂಚ್ಯಂಕ 530 ಅಂಕಗಳನ್ನು ಕಳೆದುಕೊಂಡಿದೆ. ಶೇ. 2ಕ್ಕಿಂತಲೂ ಹೆಚ್ಚಿನ ಪ್ರಮಾಣ ನಷ್ಟ ಕಂಡಿದೆ. ಈ ವರ್ಷದ 10 ತಿಂಗಳಲ್ಲೇ ನಿಫ್ಟಿ 1,102 ಅಂಕಗಳನ್ನು ಕಳೆದುಕೊಂಡಿದೆ. ಅದರಲ್ಲೂ ಈ ವರ್ಷದ ಆರಂಭದಲ್ಲಿ ಮಾರುಕಟ್ಟೆ ತೀವ್ರವಾಗಿ ಕುಸಿದಿತ್ತು. ಕಳೆದ ಒಂದು ತಿಂಗಳಿಂದ ನಿಫ್ಟಿ, ಸೆನ್ಸೆಕ್ಸ್ ಸೇರಿ ಪ್ರಮುಖ ಸೂಚ್ಯಂಕಗಳು ಚೇತರಿಸಿಕೊಳ್ಳುತ್ತಿವೆ.

ಇದನ್ನೂ ಓದಿ: ಅಮೆರಿಕ ಡಾಲರ್ ಎದುರು ಜಿಗಿಜಿಗಿಯುತ್ತಿರುವ ರುಪಾಯಿ; 7 ತಿಂಗಳ ಗರಿಷ್ಠ ಮೌಲ್ಯ ಮಟ್ಟ ತಲುಪಿದ ಭಾರತದ ಕರೆನ್ಸಿ

ಜನವರಿಯಲ್ಲಿ ನಿಫ್ಟಿ 26,373 ಅಂಕಗಳ ಮಟ್ಟ ಮುಟ್ಟಿತ್ತು. ಈಗ 25,044 ಅಂಕದಲ್ಲಿದೆ. ಮಾರುಕಟ್ಟೆ ಸದ್ಯ ಚೇತರಿಕೆಯ ಹಾದಿಯಲ್ಲಿದ್ದಂತಿದೆ. ಆದರೆ, ಹತ್ತು ತಿಂಗಳ ಹಿಂದಿನ ಗರಿಷ್ಠ ಮಟ್ಟವನ್ನು ದಾಟುವ ಹಾದಿ ಉದ್ದವಿದೆ. ಎಐ ಕುಸಿತದ ಕಾರಣಕ್ಕೆ ಜಾಗತಿಕವಾಗಿ ಹೂಡಿಕೆದಾರರ ಬಂಡವಾಳ ಭಾರತದ ಮಾರುಕಟ್ಟೆಗೆ ಬರುತ್ತಿರುವ ಟ್ರೆಂಡ್ ಇದೆ. ಒಂದೊಮ್ಮೆ ಎಐ ಕ್ಷೇತ್ರ ಚೇತರಿಕೆ ಕಂಡರೆ ಅದು ಭಾರತದ ಮಾರುಕಟ್ಟೆಗೆ ಹಿನ್ನಡೆ ತರುತ್ತಾ ಎನ್ನುವ ಪ್ರಶ್ನೆಯಂತೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us