AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ ಡಾಲರ್ ಎದುರು ಜಿಗಿಜಿಗಿಯುತ್ತಿರುವ ರುಪಾಯಿ; 7 ತಿಂಗಳ ಗರಿಷ್ಠ ಮೌಲ್ಯ ಮಟ್ಟ ತಲುಪಿದ ಭಾರತದ ಕರೆನ್ಸಿ

ವ್ಯಾಪಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ಭಾರತೀಯ ರೂಪಾಯಿಯು 28 ಪೈಸೆ ಪ್ರಬಲಗೊಂಡು 93.70 ಕ್ಕೆ ತಲುಪಿದೆ. ಇದು ಕಳೆದ 7 ತಿಂಗಳಿನ ಗರಿಷ್ಠ ಮಟ್ಟವಾಗಿದೆ. ಅಮೆರಿಕ ಚುನಾವಣೆಯಲ್ಲಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷಕ್ಕೆ ಸೋಲಾಗಿದ್ದು, ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದು ರುಪಾಯಿ ಬಲವರ್ಧನೆಗೆ ಸಹಾಯವಾಗಿವೆ. ವಿದೇಶಗಳಿಂದ ಭಾರತಕ್ಕೆ ಬಂಡವಾಳ ಹರಿವು ಹೆಚ್ಚಾಗಿದೆ.

ಅಮೆರಿಕ ಡಾಲರ್ ಎದುರು ಜಿಗಿಜಿಗಿಯುತ್ತಿರುವ ರುಪಾಯಿ; 7 ತಿಂಗಳ ಗರಿಷ್ಠ ಮೌಲ್ಯ ಮಟ್ಟ ತಲುಪಿದ ಭಾರತದ ಕರೆನ್ಸಿ
ರುಪಾಯಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 09, 2026 | 2:09 PM

Share

ನವದೆಹಲಿ, ನವೆಂಬರ್ 9: ಡಾಲರ್ ಎದುರು ರುಪಾಯಿ ಮೌಲ್ಯ ಸತತವಾಗಿ ವೃದ್ಧಿಸುತ್ತಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ಆರಂಭಿಕ ವಹಿವಾಟಿನ ವೇಳೆ ಭಾರತೀಯ ರೂಪಾಯಿಯು ಅಮೆರಿಕದ ಡಾಲರ್ ಎದುರು 28 ಪೈಸೆ ಜಿಗಿತವನ್ನು ದಾಖಲಿಸಿದೆ. ಇದರೊಂದಿಗೆ ರೂಪಾಯಿಯ ಮೌಲ್ಯವು 93.70 ಕ್ಕೆ ತಲುಪಿದೆ.

ಹಿಂದಿನ ದಿನ ರುಪಾಯಿ 93.98 ಕ್ಕೆ ಕೊನೆಗೊಂಡಿತ್ತು. ರೂಪಾಯಿಯು ದಾಖಲಿಸಿರುವ ಈ ಚೇತರಿಕೆಯು ಕಳೆದ ಏಳು ತಿಂಗಳ ಅವಧಿಯಲ್ಲಿನ ಅತ್ಯಧಿಕ ಗರಿಷ್ಠ ಮಟ್ಟವಾಗಿದೆ ಎಂದು ವರದಿ ತಿಳಿಸಿದೆ.

ಮಾರುಕಟ್ಟೆ ಪ್ರಭಾವ: ಜಾಗತಿಕ ಆರ್ಥಿಕ ಬೆಳವಣಿಗೆಗಳು, ವಿದೇಶಿ ಬಂಡವಾಳ ಹೂಡಿಕೆ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಯ ಧನಾತ್ಮಕ ಅಂಶಗಳು ರೂಪಾಯಿಯ ಮೌಲ್ಯ ಬಲಗೊಳ್ಳಲು ಕಾರಣವಾಗಿವೆ.

ಇದನ್ನೂ ಓದಿ: ಇದು ಹಾಲಿವುಡ್ ಸ್ಪೈ ಥ್ರಿಲ್ಲರ್​ನಂಥ ಕಥೆ; ಅಮೆರಿಕದ ಕಾರ್ಪೊರೇಟ್ ದಂತಕಥೆಯ ಬೆನ್ನಿಗೆ ಅಂಟಿದ ಚೀನೀ ಗೂಢಚಾರಿಣಿ

ಕಳೆದ ವಾರ ಭಾರತದ ಈಕ್ವಿಟಿ ಮಾರುಕಟ್ಟೆಗೆ ವಿದೇಶೀ ಹೂಡಿಕೆದಾರರಿಂದ 4 ಬಿಲಿಯನ್ ಡಾಲರ್ ಹರಿದುಬಂದಿದೆ. ಅಂದರೆ, ಡಾಲರ್ ಹರಿವು ಸಾಕಷ್ಟು ಬಂದಿದೆ. ಎಐ ಕ್ಷೇತ್ರಕ್ಕೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ಸೌತ್ ಕೊರಿಯಾ ಮತ್ತು ತೈವಾನ್​ನ ಮಾರುಕಟ್ಟೆಗಳಲ್ಲಿ ಎಐ ಕಂಪನಿಗಳ ಮೇಲೆ ಹಣ ಹಾಕಿದ್ದ ಹೂಡಿಕೆದಾರರು ಈಗ ತಮ್ಮ ಹಣವನ್ನು ಭಾರತದತ್ತ ವರ್ಗಾಯಿಸುತ್ತಿದ್ದಾರೆ. ಹೀಗಾಗಿ, ಎಫ್​ಐಐ ಹೂಡಿಕೆಗಳ ಒಳಹರಿವು ಭಾರತದಲ್ಲಿ ಹೆಚ್ಚಾಗಿದೆ.

ಅಮೆರಿಕದ ಮಧ್ಯತರ ಚುನಾವಣೆಯಲ್ಲಿ ಡೆಮಾಕ್ರಾಟಿಕ್ ಪಕ್ಷ ಗೆಲುವು ಸಾಧಿಸಿದ್ದೂ ಕೂಡ ಟೆಕ್ನಾಲಜಿ ಕ್ಷೇತ್ರದ ಕಂಪನಿಗಳ ಷೇರುಗಳಿಂದ ಹೂಡಿಕೆಗಳು ಹೊರಹೋಗುತ್ತಿದ್ದು, ಭಾರತಕ್ಕೆ ಲಾಭವಾಗಿದೆ.

ಇದನ್ನೂ ಓದಿ: ನಿಮ್ಮ ಆಲೋಚನಾ ಶಕ್ತಿಯನ್ನು ಎಐಗೆ ಒಪ್ಪಿಸಬೇಡಿ: ಯುವಜನರಿಗೆ ಮಾಜಿ ಐಎಂಎಫ್ ಅಧಿಕಾರಿ ಗೀತಾ ಗೋಪಿನಾಥ್ ಸಲಹೆ

ಹಾಗೆಯೆ, ಕಚ್ಚಾ ತೈಲ ಬೆಲೆಗಳೂ ಕೂಡ ಕಡಿಮೆ ಆಗಿದ್ದರಿಂದ ಭಾರತದ ಡಾಲರ್ ವೆಚ್ಚ ತಗ್ಗಿದೆ. ಇವೆಲ್ಲವೂ ಕೂಡ ಡಾಲರ್ ಎದುರು ರುಪಾಯಿಯನ್ನು ಬಲಪಡಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು
ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು
ದೀಪಾವಳಿ ಹಬ್ಬದ ಹಿನ್ನೆಲೆ ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ
ದೀಪಾವಳಿ ಹಬ್ಬದ ಹಿನ್ನೆಲೆ ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ