ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಅಕ್ಟೋಬರ್ 21ನೇ ತಾರೀಕಿನ ಗುರುವಾರದಂದು ಸತತ ಮೂರನೇ ಸೆಷನ್ ಕುಸಿತ ಕಂಡಿದೆ. ಮಾಹಿತಿ ತಂತ್ರಜ್ಞಾನ ಮತ್ತು ಲೋಹದ ಷೇರುಗಳು ಮಾರುಕಟ್ಟೆ ಇಳಿಕೆಗೆ ಕಾರಣವಾಗಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 336.46 ಪಾಯಿಂಟ್ಸ್ ಅಥವಾ ಶೇ 0.55ರಷ್ಟು ಕುಸಿತ ಕಂಡು, 60,923.50 ಪಾಯಿಂಟ್ಸ್ನೊಂದಿಗೆ ವ್ಯವಹಾರವನ್ನು ಮುಗಿಸಿದೆ. ಇನ್ನು ನಿಫ್ಟಿ 88.50 ಪಾಯಿಂಟ್ಸ್ ಅಥವಾ ಶೇ 0.48ರಷ್ಟು ಇಳಿಕೆಯಾಗಿ 18,178.10 ಪಾಯಿಂಟ್ಸ್ನೊಂದಿಗೆ ವಹಿವಾಟು ಚುಕ್ತಾಗೊಳಿಸಿದೆ. ವಲಯಗಳಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳು, ವಾಹನ, ತೈಲ ಮತ್ತು ಅನಿಲ ಹಾಗೂ ವಿದ್ಯುತ್ ಸೂಚ್ಯಂಕಗಳು ಏರಿಕೆಯಲ್ಲೇ ಮುಕ್ತಾಯಗೊಂಡಿದೆ. ಇನ್ನು ಲೋಹ, ಮಾಹಿತಿ ತಂತ್ರಜ್ಞಾನ, ಎನರ್ಜಿ ಹಾಗೂ ಎಫ್ಎಂಸಿಜಿ ಸೂಚ್ಯಂಕಗಳು ಇಳಿಕೆ ಕಂಡಿವೆ.
ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ನೆಗೆಟಿವ್ ಆಗಿಯೇ ದಿನ ಮುಗಿಸಿವೆ. ಇಂದಿ ವಹಿವಾಟಿನಲ್ಲಿ 1580 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 1627 ಕಂಪೆನಿಯ ಷೇರುಗಳು ಇಳಿಕೆ ಕಂಡವು. ಇನ್ನು 130 ಕಂಪೆನಿಯ ಷೇರುಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಿಫ್ಟಿಯಲ್ಲಿ ಏರಿಕೆ ಹಾಗೂ ಇಳಿಕೆ ಕಂಡ ಪ್ರಮುಖ ಕಂಪೆನಿಗಳ ವಿವರ ಇಲ್ಲಿದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಕೊಟಕ್ ಮಹೀಂದ್ರಾ ಶೇ 6.37
ಟಾಟಾ ಮೋಟಾರ್ಸ್ ಶೇ 4.33
ಗ್ರಾಸಿಮ್ ಶೇ 3.15
ಬಿಪಿಸಿಎಲ್ ಶೇ 2.26
ಎಚ್ಡಿಎಫ್ಸಿ ಶೇ 1.75
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಏಷ್ಯನ್ ಪೇಂಟ್ಸ್ ಶೇ -5.29
ಹಿಂಡಾಲ್ಕೋ ಶೇ -3.74
ರಿಲಯನ್ಸ್ ಶೇ -2.88
ಇನ್ಫೋಸಿಸ್ ಶೇ -2.70
ಡಾ.ರೆಡ್ಡೀಸ್ ಲ್ಯಾಬ್ಸ್ ಶೇ -2.15
ಇದನ್ನೂ ಓದಿ: Do’s And Don’ts In Share Market: ಷೇರು ಮಾರ್ಕೆಟ್ನಲ್ಲಿ ಮಾಡುವ ಹಾಗೂ ಮಾಡಬಾರದು ಕೆಲಸಗಳಿವು