Nifty: ಇದೇ ಮೊದಲ ಬಾರಿಗೆ 18,000 ಪಾಯಿಂಟ್ಸ್​ ಮೀರಿದ ಷೇರುಪೇಟೆ ಸೂಚ್ಯಂಕ ನಿಫ್ಟಿ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ನಿಫ್ಟಿ ಅಕ್ಟೋಬರ್ 11ನೇ ತಾರೀಕಿನ ಸೋಮವಾರದಂದು ಸಾರ್ವಕಾಲಿಕ ದಾಖಲೆಯ ಎತ್ತರವಾದ 18,000 ಪಾಯಿಂಟ್ಸ್​ ದಾಟಿದೆ. ಇಂದಿನ ವಹಿವಾಟಿನಲ್ಲಿ ಪ್ರಮುಖವಾಗಿ ಗಳಿಕೆ ಮತ್ತು ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.

Nifty: ಇದೇ ಮೊದಲ ಬಾರಿಗೆ 18,000 ಪಾಯಿಂಟ್ಸ್​ ಮೀರಿದ ಷೇರುಪೇಟೆ ಸೂಚ್ಯಂಕ ನಿಫ್ಟಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 11, 2021 | 12:01 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ನಿಫ್ಟಿ ಅಕ್ಟೋಬರ್ 11ನೇ ತಾರೀಕಿನ ಸೋಮವಾರದಂದು 18,000 ಪಾಯಿಂಟ್ಸ್ ಗಡಿ ದಾಟಿ, ಹೊಸ ದಾಖಲೆ ಬರೆಯಿತು. ಇದೇ ಮೊದಲ ಬಾರಿಗೆ ನಿಫ್ಟಿ 18 ಸಾವಿರ ಪಾಯಿಂಟ್ಸ್ ಗಡಿ ದಾಟಿದೆ. ರಿಲಯನ್ಸ್​ ಇಂಡಸ್ಟ್ರೀಸ್ ಮತ್ತು ಬ್ಯಾಂಕಿಂಗ್​ ವಲಯದ ಸ್ಟಾಕ್​ಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಟಿಸಿಎಸ್​ನಂಥ ಸ್ಟಾಕ್​ಗಳಲ್ಲಿ ಕಂಡುಬಂದ ದುರ್ಬಲತೆಯನ್ನೂ ಮೀರಿ ನಿಂತವು. ಈ ವರದಿ ಪ್ರಕಟ ಆಗುವ ಹೊತ್ತಿಗೆ ನಿಫ್ಟಿ 112.80 ಪಾಯಿಂಟ್ಸ್ ಅಥವಾ ಶೇ 0.63ರಷ್ಟು ಮೇಲೇರಿ 18,008 ಪಾಯಿಂಟ್ಸ್​ನೊಂದಿಗೆ ವ್ಯವಹರಿಸುತ್ತಿತ್ತು. ಇನ್ನು ಸೆನ್ಸೆಕ್ಸ್ 310.04 ಪಾಯಿಂಟ್ಸ್ ಅಥವಾ ಶೇ 0.52ರಷ್ಟು ಹೆಚ್ಚಳವಾಗಿ, 60,369.10 ಪಾಯಿಂಟ್ಸ್​​ನೊಂದಿಗೆ ವ್ಯವಹರಿಸುತ್ತಿತ್ತು. ನಿಫ್ಟಿ ಬ್ಯಾಂಕ್​ ಸೂಚ್ಯಂಕವು 441.40 ಅಥವಾ ಶೇ 1.17ರಷ್ಟು ಮೇಲೇರಿ 38,216.70 ಪಾಯಿಂಟ್ಸ್​ನಲ್ಲಿತ್ತು.

ಭಾರತದ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ವಿರುದ್ಧ 17 ಪೈಸೆಯಷ್ಟು ಕುಸಿತ ಕಂಡು, ದಿನದ ಕನಿಷ್ಠ ಮಟ್ಟವಾದ 75.16 ತಲುಪಿತ್ತು. ಹೆಚ್ಚುತ್ತಿರುವ ಕಚ್ಚಾ ತೈಲ ದರದಗಳು ಮತ್ತು ವಿದೇಶೀ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಅಮೆರಿಕನ್ ಡಾಲರ್​ನಲ್ಲಿ ಹೂಡಿಕೆ ಮಾಡುವುದಕ್ಕೆ ಉತ್ಸಾಹ ತೋರುತ್ತಿರುವುದು ಬಲ ತಂದಿದೆ. ಶುಕ್ರವಾರದಂದು ಡಾಲರ್ ವಿರುದ್ಧ ರೂಪಾಯಿ ಮೌಲ್ಯ 74.99ಕ್ಕೆ ಸ್ಥಿರವಾಗಿತ್ತು. ವಿದೇಶೀ ಸಾಂಸ್ಥಿಕ ಹೂಡಿಕೆದಾರರು (ಎಫ್​ಐಐ) ಶುಕ್ರವಾರ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದರು. ವಿನಿಮಯದ ದತ್ತಾಂಶದ ಪ್ರಕಾರ, ಶುಕ್ರವಾರದಂದು 64.01 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಜಾಗತಿಕ ತೈಲ ಬೆಂಚ್​ಮಾರ್ಕ್ ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಶೇ 1.43ರಷ್ಟು ಮೇಲೇರಿ ಪ್ರತಿ ಬ್ಯಾರೆಲ್​ಗೆ (1 ಬ್ಯಾರೆಲ್​ಗೆ 158.987 ಲೀಟರ್) 83.57 ಅಮೆರಿಕನ್ ಡಾಲರ್ ಆಗಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಟಾಟಾ ಮೋಟಾರ್ಸ್ ಶೇ 9.04 ಕೋಲ್ ಇಂಡಿಯಾ ಶೇ 4.43 ಮಾರುತಿ ಸುಜುಕಿ ಶೇ 3.37 ಎನ್​ಟಿಪಿಸಿ ಶೇ 3.26 ಕೊಟಕ್ ಮಹೀಂದ್ರಾ ಶೇ 3.18

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಟಿಸಿಎಸ್​ ಶೇ -5.25 ಟೆಕ್ ಮಹೀಂದ್ರಾ ಶೇ -1.54 ಭಾರ್ತಿ ಏರ್​ಟೆಲ್​ ಶೇ -0.65 ಎಚ್​ಡಿಎಫ್​ಸಿ ಲೈಫ್ ಶೇ -0.62 ಬ್ರಿಟಾನಿಯಾ ಶೇ -0.52

ಇದನ್ನೂ ಓದಿ: Tata Consultancy Services: ಕೆಲವೇ ನಿಮಿಷದಲ್ಲಿ ಟಿಸಿಎಸ್ ಕಂಪೆನಿ ಷೇರುದಾರರ ಸಾವಿರಾರು ಕೋಟಿ ರೂಪಾಯಿ ಉಡೀಸ್

ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ