AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಸೂಪರ್ 30” ಖ್ಯಾತಿಯ ಆನಂದ್​ ಕುಮಾರ್​ ಈಗ ಜಪಾನೀಸ್​ ಆನ್​ಲೈನ್ ಶಿಕ್ಷಣ ಕಂಪೆನಿ ಜತೆ ಸಹಯೋಗ

ಜಪಾನ್ ಮೂಲದ ಆನ್​ಲೈನ್ ಶಿಕ್ಷಣ ನೀಡುವ ಕಂಪೆನಿ ಜತೆಗೆ ಸೂಪರ್ 30 ಖ್ಯಾತಿಯ ಆನಂದ್ ಕುಮಾರ್ ಕೈ ಜೋಡಿಸಿದ್ದಾರೆ. ಯಾರು ಈ ಆನಂದ್ ಕುಮಾರ್ ಹಾಗೂ ಏನಿವರ ಖ್ಯಾತಿ ಮತ್ತಿತರ ವಿವರಗಳು ಈ ಲೇಖನದಲ್ಲಿವೆ.

ಸೂಪರ್ 30 ಖ್ಯಾತಿಯ ಆನಂದ್​ ಕುಮಾರ್​ ಈಗ ಜಪಾನೀಸ್​ ಆನ್​ಲೈನ್ ಶಿಕ್ಷಣ ಕಂಪೆನಿ ಜತೆ ಸಹಯೋಗ
ಆನಂದ್ ಕುಮಾರ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Oct 11, 2021 | 4:02 PM

Share

“ಸೂಪರ್ 30” ಸಂಸ್ಥಾಪಕ ಮತ್ತು ಗಣಿತಜ್ಞ ಆನಂದ್ ಕುಮಾರ್ ಅವರು ಜಪಾನೀಸ್ ಆನ್‌ಲೈನ್ Initiative ಜತೆ ಕೈಜೋಡಿಸಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದ ತರಗತಿಗಳೊಂದಿಗೆ ಶಾಲಾ ಶಿಕ್ಷಣವನ್ನು ಮರು ವ್ಯಾಖ್ಯಾನಿಸುವ ಗುರಿಯನ್ನು ಹೊಂದಿದೆ. ಕಳೆದ ವರ್ಷ ಸ್ಥಾಪನೆಯಾದ ಜಪಾನಿನ ಕಂಪೆನಿಯಾದ ‘I’m beside you’ ಹೇಳಿದೆ. ಜಪಾನ್‌ನಲ್ಲಿ ಜನಪ್ರಿಯತೆ ಪಡೆದ ನಂತರ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆನಂದ್ ಕುಮಾರ್ ಅವರ ಬೋಧನಾ ಕೌಶಲವನ್ನು ತಲುಪಿಸುವ ಗುರಿಯನ್ನು ಈ ಕಂಪೆನಿಯು ಹೊಂದಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಅನುಗುಣವಾಗಿ ಆನ್‌ಲೈನ್ ಸಂವಹನವನ್ನು ಕಂಪೆನಿಯು ಸಕ್ರಿಯಗೊಳಿಸುತ್ತದೆ ಮತ್ತು ಇಡೀ ಸಮಾಜವನ್ನು ಗಡಿರಹಿತ ಶಾಲೆಯನ್ನಾಗಿ ಮಾಡುವ ಉದ್ದೇಶದಿಂದ ಪ್ರಪಂಚದಾದ್ಯಂತದ ಅತ್ಯುತ್ತಮ ಶಿಕ್ಷಕರನ್ನು ಸೆಳೆಯಲಾಗುತ್ತಿದೆ. ಆ ಮೂಲಕ ಪ್ರತಿ ವ್ಯಕ್ತಿಯನ್ನು ವಿಶಿಷ್ಟ ಮತ್ತು ಬದಲಿಯೇ ಇಲ್ಲದ ವ್ಯಕ್ತಿಯಾಗಿ ರೂಪಿಸಲಾಗುತ್ತದೆ ಎಂದು ಅದು ಹೇಳಿದೆ.

“ಲಕ್ಷಾಂತರ ವಿದ್ಯಾರ್ಥಿಗಳನ್ನು ತಲುಪುವ ವಿಶಿಷ್ಟವಾದ ಈ ಪ್ರಯತ್ನದಲ್ಲಿ ಆನಂದ್​ ಕುಮಾರ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಇದು ಕೊರೊನಾ ಯುಗದಲ್ಲಿ ಜಪಾನ್-ಭಾರತ ಸಹಯೋಗವನ್ನು ಸಂಕೇತಿಸುವ ಯೋಜನೆಯಾಗಿದೆ. ಇದರಲ್ಲಿ ಎರಡು ಜಪಾನೀಸ್ ಸ್ಟಾರ್ಟ್ಅಪ್​ಗಳು ವಿಶ್ವಪ್ರಸಿದ್ಧ ಶಿಕ್ಷಣತಜ್ಞ ಆನಂದ್ ಕುಮಾರ್ ಜೊತೆ ಸಹಯೋಗ ಹೊಂದಿವೆ,” ಎಂದು I’m beside you’ ಅಧ್ಯಕ್ಷ ವಾಟಾರು ಕಾಮಿಯಾ ಹೇಳಿದ್ದಾರೆ.

“ಹೆಚ್ಚುವರಿಯಾಗಿ, ನಾವು ಜಾಗತಿಕ ಸೇವಾ ಅಭಿವೃದ್ಧಿಗೆ ಭಾರತವನ್ನು ಅತ್ಯಂತ ಪ್ರಮುಖ ನೆಲೆಯೆಂದು ಪರಿಗಣಿಸಿದ್ದೇವೆ ಮತ್ತು ಭಾರತದಲ್ಲಿ 1.4 ಬಿಲಿಯನ್ ಜನರಿಗೆ ಸೇವೆಗಳನ್ನು ಒದಗಿಸುವ ಸವಾಲನ್ನು ಮುಂದುವರಿಸುತ್ತೇವೆ. ಇದು ಆನಂದ್ ಕುಮಾರ್ ಅವರೊಂದಿಗಿನ ಮಹತ್ವದ ಸಹಯೋಗವಾಗಿದೆ,” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

I’m beside you’ ಉದ್ದೇಶ ಏನೆಂದರೆ, “ಸಮಾಜವನ್ನು ಒಂದು ಶಾಲೆಯಾಗಿ ಮಾಡುವುದು” ಎಂದು ಅವರು ಹೇಳಿದ್ದಾರೆ. ಕುಮಾರ್ ಅವರ ”ಸೂಪರ್ 30” ಪ್ರಯತ್ನಕ್ಕಾಗಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿದ್ದು, ಇದು ಭಾರತದ ಅತ್ಯಂತ ಸ್ಪರ್ಧಾತ್ಮಕ ಐಐಟಿ ಪ್ರವೇಶ ಪರೀಕ್ಷೆಗಳಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ಸಜ್ಜುಗೊಳಿಸುತ್ತಿದೆ. “ಸೂಪರ್ 30” ಎಂಬ ಹೆಸರಿನಲ್ಲೇ ಆನಂದ್​ ಕುಮಾರ್ ಜೀವನಾಧಾರಿತ ಚಿತ್ರ ಹಿಂದಿಯಲ್ಲಿ ಬಂದಿದೆ. ಅದರಲ್ಲಿ ಖ್ಯಾತ ನಟ ಹೃತಿಕ್ ರೋಷನ್ ಅವರು ಆನಂದ್ ಕುಮಾರ್ ಪಾತ್ರ ನಿರ್ವಹಿಸಿದ್ದರು. (ಮೂಲ: ಪಿಟಿಐ ಸುದ್ದಿ ಸಂಸ್ಥೆ)

ಇದನ್ನೂ ಓದಿ: DIMHANS report: ಧಾರವಾಡ ಜಿಲ್ಲೆಯಲ್ಲಿ ಯಶಸ್ವೀ ಆನ್‌ಲೈನ್ ಶಿಕ್ಷಣ -ಖ್ಯಾತ ಮನಶಾಸ್ತ್ರಜ್ಞರ ತಂಡದಿಂದ ಅಧ್ಯಯನ ವರದಿ ಸಲ್ಲಿಕೆ

ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ