AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Closing Bell: ಸತತ ಮೂರು ದಿನಗಳ ಏರಿಕೆ ಸರಪಳಿ ಕಡಿದುಕೊಂಡ ಷೇರುಪೇಟೆ; ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕದಲ್ಲಿ ಇಳಿಕೆ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜುಲೈ 11ನೇ ತಾರೀಕಿನ ಸೋಮವಾರದಂದು ಇಳಿಕೆ ದಾಖಲಿಸಿವೆ. ಪ್ರಮುಖವಾಗಿ ಇಳಿಕೆ, ಏರಿಕೆ ದಾಖಲಿಸಿದ ಷೇರುಗಳ ವಿವರ ಇಲ್ಲಿದೆ.

Closing Bell: ಸತತ ಮೂರು ದಿನಗಳ ಏರಿಕೆ ಸರಪಳಿ ಕಡಿದುಕೊಂಡ ಷೇರುಪೇಟೆ; ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕದಲ್ಲಿ ಇಳಿಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 11, 2022 | 4:44 PM

Share

ವಾರದ ಮೊದಲ ದಿನವಾದ ಸೋಮವಾರ (ಜುಲೈ 11, 2022) ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಇಳಿಕೆ ಕಂಡಿದೆ. ಸತತ ಮೂರು ಟ್ರೇಡಿಂಗ್ ಸೆಷನ್​ಗಳಿಂದ ಏರಿಕೆ ಕಾಣುತ್ತಾ ಬಂದಿದ್ದ ಷೇರು ಮಾರುಕಟ್ಟೆ ಸೋಮವಾರದ ವಹಿಟಾಗಿದೆ. ಇಂದಿನ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ದಿನದ ಕನಿಷ್ಠ ಮಟ್ಟದ ವಹಿವಾಟು 54,090.5 ಪಾಯಿಂಟ್ಸ್ ಮುಟ್ಟಿತು. ಇನ್ನು ದಿನಾಂತ್ಯಕ್ಕೆ 87 ಪಾಯಿಂಟ್ಸ್ ಅಥವಾ ಶೇ 0.16ರಷ್ಟು ನೆಲಕಚ್ಚಿತು. ಇನ್ನು ನಿಫ್ಟಿ ಸೂಚ್ಯಂಕವು 5 ಪಾಯಿಂಟ್ಸ್ ಅಥವಾ ಶೇ 0.03 ಇಳಿದು, 16,216 ಪಾಯಿಂಟ್ಸ್ ತಲುಪಿಕೊಂಡಿತು. ಸೂಚ್ಯಂಕವು ದಿನದ ಕನಿಷ್ಠ ಮಟ್ಟವಾದ 16,115.5 ಪಾಯಿಂಟ್ಸ್​ ತಲುಪಿತು.

ಈ ಮಧ್ಯೆ ಬಿಎಸ್​ಇ ಸ್ಮಾಲ್​ಕ್ಯಾಪ್ ಸೂಚ್ಯಂಕ ಶೇ 1ರಷ್ಟು ಏರಿಕೆ ಕಂಡರೆ, ಮಿಡ್​ಕ್ಯಾಪ್ ಶೇ 0.6ರಷ್ಟು ಹೆಚ್ಚಳವಾಯಿತು. ವಲಯವಾರು ಗಮನಿಸಿದಾಗ ನಿಫ್ಟಿ ಮಾಹಿತಿ ತಂತ್ರಜ್ಞಾನ ವಲಯವೊಂದನ್ನು ಹೊರತುಪಡಿಸಿ, ಇತರವು ಗಳಿಕೆ ಕಂಡಿದೆ. ಐಟಿ ಸೂಚ್ಯಂಕ ಶೇ 3ರಷ್ಟು ಇಳಿಕೆ ಆಗಿದೆ. ಪಿಎಸ್​ಯು ಬ್ಯಾಂಕ್ ಸೂಚ್ಯಂಕವು ಶೇ 2ರಷ್ಟು ಏರಿಕೆ ಆಗಿದೆ. ಅಂದಹಾಗೆ ಸೋಮವಾರದ ಇಂಟ್ರಾಡೇ ವಹಿವಾಟಿನಲ್ಲಿ ಬಿಎಸ್​ಇಯಲ್ಲಿ ಅದಾನಿ ಸಮೂಹದ ಷೇರು ಶೇ 12ರಷ್ಟು ಏರಿಕೆ ದಾಖಲಿಸಿದೆ. ಅದಾನಿ ಸಮೂಹವು ಟೆಲಿಕಾಂ ಉದ್ಯಮಕ್ಕೆ ಪ್ರವೇಶಿಸುತ್ತದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಐಷರ್ ಮೋಟಾರ್ಸ್ ಶೇ 3.93

ಒಎನ್​ಜಿಸಿ ಶೇ 3.29

ಟಾಟಾ ಸ್ಟೀಲ್ ಶೇ 3.03

ಮಹೀಂದ್ರಾ ಅಂಡ್ ಮಹೀಂದ್ರಾ ಶೇ 2.77

ಡಾ ರೆಡ್ಡೀಸ್ ಲ್ಯಾಬ್ಸ್ ಶೇ 2.15

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಭಾರ್ತಿ ಏರ್​ಟೆಲ್ ಶೇ -4.98

ಟಿಸಿಎಸ್ ಶೇ -4.64

ಎಚ್​ಸಿಎಲ್ ಟೆಕ್ ಶೇ -4.07

ಬಿಪಿಸಿಎಲ್​ ಶೇ -2.89

ಇನ್ಫೋಸಿಸ್ ಶೇ -2.73

ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?