Sensex: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 900 ಪಾಯಿಂಟ್ಸ್, ನಿಫ್ಟಿ 270 ಪಾಯಿಂಟ್ಸ್ ಗರಿಷ್ಠ ಕುಸಿತ ದಾಖಲು

Sensex News: ಭಾರತದ ಷೇರು ,ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮೇ 9ನೇ ತಾರೀಕಿನ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರೀ ಪ್ರಮಾಣದಲ್ಲಿ ನೆಲ ಕಚ್ಚಿದೆ.

Sensex: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 900 ಪಾಯಿಂಟ್ಸ್, ನಿಫ್ಟಿ 270 ಪಾಯಿಂಟ್ಸ್ ಗರಿಷ್ಠ ಕುಸಿತ ದಾಖಲು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:May 09, 2022 | 11:09 PM

ಭಾರತೀಯ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮೇ 9ನೇ ತಾರೀಕಿನ ಸೋಮವಾರದಂದು ಬೆಳಗ್ಗೆ ವಹಿವಾಟಿನಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡು, ಆತಂಕ ಮೂಡಿಸಿದವು. ಒಂದು ಹಂತದಲ್ಲಿ ಸೆನ್ಸೆಕ್ಸ್ ಸೂಚ್ಯಂಕ 900 ಪಾಯಿಂಟ್ಸ್​ಗೂ ಹೆಚ್ಚು ನೆಲ ಕಚ್ಚಿತು. ಈ ಹಿಂದಿನ ವಹಿವಾಟಿನ ಕೊನೆಗೆ ಸೆನ್ಸೆಕ್ಸ್ 54,835.58 ಪಾಯಿಂಟ್ಸ್​ನೊಂದಿಗೆ ಮುಕ್ತಾಯ ಆಗಿತ್ತು. ಇನ್ನು ಈ ದಿನದ ಆರಂಭವನ್ನು 54,188.21 ಪಾಯಿಂಟ್ಸ್​ನಲ್ಲಿ ಶುರು ಮಾಡಿತು. ಕನಿಷ್ಠ ಮಟ್ಟವಾದ 53,918.02 ಪಾಯಿಂಟ್ಸ್​​ ತಲುಪುವುದರೊಂದಿಗೆ 900ಕ್ಕೂ ಹೆಚ್ಚು ಪಾಯಿಂಟ್ಸ್​​ಗಳ ಇಳಿಕೆಯನ್ನು ಕಾಣುವಂತಾಯಿತು. ಅಂದ ಹಾಗೆ ಗರಿಷ್ಠ ಮಟ್ಟ 54,365.83 ಪಾಯಿಂಟ್ಸ್​ ಇದೆ.

ನಿಫ್ಟಿಯನ್ನು ಗಮನಿಸುವುದಾದರೆ, ಈ ಹಿಂದಿನ ವಹಿವಾಟನ್ನು 16,411.25 ಪಾಯಿಂಟ್ಸ್​​ನೊಂದಿಗೆ ಮುಗಿಸಿತ್ತು. ದಿನದ ಆರಂಭವನ್ನು 16,277.70 ಪಾಯಿಂಟ್ಸ್​​ನಲ್ಲಿ ಮಾಡಿದರೆ, ಕನಿಷ್ಠ ಮಟ್ಟ 16,142.10 ಪಾಯಿಂಟ್ಸ್​ ಮುಟ್ಟಿತ್ತು. ಆ ಹಂತದಲ್ಲಿ ಸೂಚ್ಯಂಕವು 270 ಪಾಯಿಂಟ್ಸ್ ನೆಲ ಕಚ್ಚಿತ್ತು.

ಬಿಎಸ್​ಇ ಲೋಹದ ಸೂಚ್ಯಂಕವು ಶೇ 2ರಷ್ಟು ಕುಸಿತ ಕಂಡಿತು. ಈ ವರದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 665.51 ಪಾಯಿಂಟ್ಸ್​ ಕೆಳಗೆ ಇಳಿದು 54,170.04 ಪಾಯಿಂಟ್ಸ್​ನಲ್ಲಿ, ನಿಫ್ಟಿ 188.70 ಪಾಯಿಂಟ್ಸ್ ಕುಸಿದು, 16,222.55 ಪಾಯಿಂಟ್ಸ್​ನಲ್ಲಿ ವ್ಯವಹರಿಸುತ್ತಿತ್ತು.

ನಿಫ್ಟಿಯಲ್ಲಿ ಪ್ರಮುಖ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಎಚ್​ಸಿಎಲ್​ ಟೆಕ್ ಶೇ 1.28 ಎಸ್​ಬಿಐ ಲೈಫ್ ಇನ್ಷೂರೆನ್ಸ್ ಶೇ 1.23 ಬಜಾಜ್ ಆಟೊ ಶೇ 1.18 ಬಜಾಜ್ ಫಿನ್​ಸರ್ವ್ ಶೇ 1.11 ಇನ್ಫೋಸಿಸ್ ಶೇ 0.99

ನಿಫ್ಟಿಯಲ್ಲಿ ಪ್ರಮುಖ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಟೆಕ್ ಮಹೀಂದ್ರಾ ಶೇ -4.19 ರಿಲಯನ್ಸ್ ಶೇ -3.60 ಇಂಡಸ್​ಇಂಡ್ ಬ್ಯಾಂಕ್ ಶೇ -3.32 ಜೆಎಸ್​ಡಬ್ಲ್ಯು ಸ್ಟೀಲ್ ಶೇ -2.65 ಟಾಟಾ ಸ್ಟೀಲ್ ಶೇ -2.36

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್

Published On - 11:17 am, Mon, 9 May 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ