Bisleri: ಟಾಟಾ ತೆಕ್ಕೆಗೆ ಜನಪ್ರಿಯ ಕುಡಿಯುವ ನೀರಿನ ಬ್ರ್ಯಾಂಡ್ ಬಿಸ್ಲೆರಿ; ವರದಿ

| Updated By: Ganapathi Sharma

Updated on: Nov 24, 2022 | 10:32 AM

ರಿಲಯನ್ಸ್ ರಿಟೇಲ್, ನೆಸ್ಲೆ ಸೇರಿದಂತೆ ಕೆಲವು ಕಂಪನಿಗಳು ಬಿಸ್ಲೆರಿ ಖರೀದಿಗೆ ಆಸಕ್ತಿ ವಹಿಸಿದ್ದವು. ಆದರೆ ಕೊನೆಯಲ್ಲಿ ಟಾಟಾವನ್ನೇ ಆಯ್ದುಕೊಳ್ಳಲಾಯಿತು ಎಂದು ಬಿಸ್ಲೆರಿ ಮಾಲೀಕರು ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

Bisleri: ಟಾಟಾ ತೆಕ್ಕೆಗೆ ಜನಪ್ರಿಯ ಕುಡಿಯುವ ನೀರಿನ ಬ್ರ್ಯಾಂಡ್ ಬಿಸ್ಲೆರಿ; ವರದಿ
ಸಾಂದರ್ಭಿಕ ಚಿತ್ರ
Follow us on

ನವೆದೆಹಲಿ: ಜನಪ್ರಿಯ ಕುಡಿಯುವ ನೀರಿನ ಬ್ರ್ಯಾಂಡ್ ಬಿಸ್ಲೆರಿಯನ್ನು ಬಿಸ್ಲೆರಿ ಇಂಟರ್​ನ್ಯಾಷನಲ್​ನಿಂದ (Bisleri International) ಟಾಟಾ ಕನ್​ಸ್ಯೂಮರ್ ಪ್ರಾಡಕ್ಟ್ ಲಿಮಿಟೆಡ್ (Tata Consumer Products Ltd) ಸುಮಾರು 7,000 ಕೋಟಿ ರೂ.ಗೆ ಖರೀದಿಸಲಿದೆ ಎಂದು ವರದಿಯಾಗಿದೆ. ಸದ್ಯ ಬಿಸ್ಲೆರಿ ಇಂಟರ್​ನ್ಯಾಷನಲ್ ಲಿಮಿಟೆಡ್ ರಮೇಶ್ ಚೌಹಾಣ್ ಒಡೆತನದಲ್ಲಿದೆ. ತಂಪು ಪಾನೀಯ ಬ್ರ್ಯಾಂಡ್​ಗಳಾದ ಥಮ್ಸ್ ಅಪ್, ಗೋಲ್ಡ್ ಸ್ಪಾಟ್ ಹಾಗೂ ಲಿಮ್ಕಾಗಳನ್ನು ಕೋಕಾ ಕೋಲಾಗೆ ಮಾರಾಟ ಮಾಡಿದ ಮೂರು ದಶಕದ ನಂತರ ಅವರು ಬಿಸ್ಲೆರಿಯನ್ನೂ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಟಾಟಾ ಮತ್ತು ಬಿಸ್ಲೆರಿ ಇಂಟರ್​ನ್ಯಾಷನಲ್ ನಡುವೆ ಏರ್ಪಟ್ಟಿರುವ ಒಪ್ಪಂದದ ಪ್ರಕಾರ, ಮುಂದಿನ ಎರಡು ವರ್ಷಗಳವರೆಗೆ ಬಿಸ್ಲೆರಿ ಈಗಿನ ಮಾಲೀಕರ ಬಳಿಯೇ ಇರಲಿದೆ ಎಂದು ವರದಿ ಉಲ್ಲೇಖಿಸಿದೆ.

ಚೌಹಾಣ್ ಅವರಿಗೆ ಈಗ 82 ವರ್ಷ ವಯಸ್ಸು. ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಬಿಸ್ಲೆರಿಯ ಮಾರುಕಟ್ಟೆಯನ್ನು ಮುಂದಿನ ಹಂತಕ್ಕೆ ಒಯ್ಯಬಲ್ಲಂಥ ಸಮರ್ಪಕವಾದ ಉತ್ತರಾಧಿಕಾರಿಯನ್ನು ಹೊಂದಿಲ್ಲ. ಮಗಳು ಜಯಂತಿ ಅವರು ಉದ್ಯಮದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಚೌಹಾಣ್ ತಿಳಿಸಿದ್ದಾರೆ ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಬಿಸ್ಲೆರಿ ಸದ್ಯ ದೇಶದ ಅತಿದೊಡ್ಡ ಕುಡಿಯುವ ನೀರು ಮಾರಾಟ ಕಂಪನಿಯಾಗಿದೆ.

ಟಾಟಾ ಸಮೂಹದ ಬಗ್ಗೆ ಚೌಹಾಣ್ ಭರವಸೆ

ಇದನ್ನೂ ಓದಿ
Google Layoffs: ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್​ನಿಂದ 10,000 ಉದ್ಯೋಗಿಗಳ ವಜಾಕ್ಕೆ ಸಿದ್ಧತೆ; ವರದಿ
ಡೆಬಿಟ್ ಕಾರ್ಡ್ ಇಲ್ಲದೆಯೂ ಫೋನ್​ ಪೇ ಆ್ಯಕ್ಟಿವೇಟ್ ಮಾಡಬಹುದು; ಹೇಗೆಂಬ ವಿವರ ಇಲ್ಲಿದೆ
ಇನ್ನೂ ಆಧಾರ್, ಪ್ಯಾನ್ ಲಿಂಕ್ ಮಾಡಿಲ್ಲವೇ? ಬೇಗ ಮಾಡಿ; ಇಲ್ಲವಾದರೆ ನಿಷ್ಕ್ರಿಯವಾಗಲಿದೆ ಪ್ಯಾನ್ ಕಾರ್ಡ್
Digital Wallets: ಡಿಜಿಟಲ್ ವಾಲೆಟ್​ನಲ್ಲಿ ಹೆಚ್ಚು ಹಣ ಇಡುವುದು ಉತ್ತಮಲ್ಲ; ತಜ್ಞರು ಹೀಗೆನ್ನಲು ಕಾರಣವಿದೆ

ಟಾಟಾ ಸಮೂಹವು ಬಿಸ್ಲೆರಿಯನ್ನು ಇನ್ನೂ ಚೆನ್ನಾಗಿ ನಿರ್ವಹಣೆ ಮಾಡುವುದರ ಜತೆ ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ ಎಂದು ಚೌಹಾಣ್ ಭರವಸೆ ವ್ಯಕ್ತಪಡಿಸಿದ್ದಾರೆ. ಟಾಟಾದ ಸಂಸ್ಕೃತಿ ಮತ್ತು ಸಮಗ್ರತೆಯ ಮೌಲ್ಯಗಳನ್ನು ಇಷ್ಟಪಡುತ್ತೇನೆ. ಇತರ ಖರೀದಿದಾರರು ತೋರಿದ ಅತ್ಯುತ್ಸಾಹದ ಹೊರತಾಗಿಯೂ ನನ್ನ ಮನಸ್ಸು ಟಾಟಾ ಕಡೆಗೆ ಮುಖ ಮಾಡಿದೆ ಎಂದು ಅವರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ರಿಲಯನ್ಸ್ ರಿಟೇಲ್, ನೆಸ್ಲೆ ಸೇರಿದಂತೆ ಕೆಲವು ಕಂಪನಿಗಳು ಬಿಸ್ಲೆರಿ ಖರೀದಿಗೆ ಆಸಕ್ತಿ ವಹಿಸಿದ್ದವು. ಟಾಟಾ ಸಮೂಹದ ಜತೆಗೆ ಎರಡು ವರ್ಷಗಳಿಂದ ಮಾತುಕತೆ ನಡೆಯುತ್ತಿದೆ. ಟಾಟಾ ಸನ್ಸ್ ಅಧ್ಯಕ್ಷ ಎನ್​. ಚಂದ್ರಶೇಖರನ್ ಹಾಗೂ ಟಾಟಾ ಕನ್​ಸ್ಯೂಮರ್ ಸಿಇಒ ಸುನಿಲ್ ಡಿ.ಸೋಜಾ ಅವರ ಜತೆ ಕೆಲವು ತಿಂಗಳ ಹಿಂದೆ ಮಾತುಕತೆ ನಡೆಸಿದ ಬಳಿಕ ನಿರ್ದಾರಕ್ಕೆ ಬಂದಿದ್ದೇನೆ. ಅವರು ಉತ್ತಮ ವ್ಯಕ್ತಿಗಳು ಎಂದು ಚೌಹಾಣ್ ಹೇಳಿರುವುದಾಗಿ ‘ಎಕನಾಮಿಕ್ ಟೈಮ್ಸ್’ ವರದಿ ತಿಳಿಸಿದೆ.

ಸ್ವಲ್ಪ ಷೇರುಗಳನ್ನೂ ಇಟ್ಟುಕೊಳ್ಳಲ್ಲ ಎಂದ ಚೌಹಾಣ್

ಸೆಪ್ಟೆಂಬರ್ 12ರಂದೇ ಬಿಸ್ಲೆರಿಯನ್ನು ಟಾಟಾಗೆ ಮಾರಾಟ ಮಾಡುವ ಬಗ್ಗೆ ಚೌಹಾಣ್ ಪ್ರಸ್ತಾಪ ಇಟ್ಟಿದ್ದರು ಎಂಬುದು ತಿಳಿದುಬಂದಿದೆ. ಅಲ್ಲದೆ, ಮಾರಾಟದ ಬಳಿಕ ಅಲ್ಪ ಪ್ರಮಾಣದ ಷೇರುಗಳನ್ನೂ ತಮ್ಮ ಬಳಿ ಇಟ್ಟುಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ. ನನ್ನಿಂದ ಉದ್ಯಮವನ್ನು ಮುಂದುವರಿಸಲಾಗದೆ ಇದ್ದ ಮೇಲೆ ಸ್ವಲ್ಪ ಷೇರುಗಳನ್ನು ಇಟ್ಟುಕೊಂಡು ಏನು ಮಾಡಲಿ ಎಂದು ಅವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ