Gold Price Today: ಮತ್ತೆ ಇಳಿಕೆಯಾಯ್ತು ಚಿನ್ನ, ಬೆಳ್ಳಿ ದರ; ಇಲ್ಲಿದೆ ನೋಡಿ ವಿವರ
Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.
Gold Silver Price on 24th November 2022 | ಬೆಂಗಳೂರು: ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿನ (Bullion Market) ಅಸ್ಥಿರತೆ ಮುಂದುವರಿದಿದ್ದು, ಚಿನ್ನದ ದರ (Gold Price) ಮತ್ತೆ ಇಳಿಕೆಯಾಗಿದೆ. ಇದರೊಂದಿಗೆ ಸತತ ಮೂರನೇ ದಿನವೂ ಚಿನ್ನದ ಬೆಲೆ ಕುಸಿತವಾದಂತಾಗಿದೆ. ಬೆಳ್ಳಿ ದರ (Silver Price) ಕೂಡ ತುಸು ಇಳಿಕೆಯಾಗಿದೆ. ಚಿನ್ನ, ಬೆಳ್ಳಿ ಬೆಲೆ ಇಳಿಕೆಯಾಗಿರುವುದು ಹೂಡಿಕೆದಾರರು ಬಂಗಾರದತ್ತ ಮತ್ತೆ ದೃಷ್ಟಿಹಾಯಿಸುವಂತೆ ಮಾಡಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯದಲ್ಲಿ ಚಿನ್ನದ ದರ ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆ ಹೆಚ್ಚಾಗಿತ್ತು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ 100 ರೂ. ಇಳಿಕೆಯಾಗಿ 48,250 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 110 ರೂ. ಇಳಿಕೆಯಾಗಿ 52,640 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂ. ಇಳಿಕೆಯಾಗಿ 61,000 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಚಿನ್ನದ ದರ ಇಂದೂ ಇಳಿಕೆ, ಬೆಳ್ಳಿ ಬೆಲೆ ಏರಿಕೆ; ಇಲ್ಲಿದೆ ಪ್ರಮುಖ ನಗರಗಳ ದರ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,850 ರೂ. ಮುಂಬೈ- 48,250 ರೂ, ದೆಹಲಿ- 48,400 ರೂ, ಕೊಲ್ಕತ್ತಾ- 48,250 ರೂ, ಬೆಂಗಳೂರು- 48,300 ರೂ, ಹೈದರಾಬಾದ್- 48,250 ರೂ, ಕೇರಳ- 48,250 ರೂ, ಪುಣೆ- 48,250 ರೂ, ಮಂಗಳೂರು- 48,300 ರೂ, ಮೈಸೂರು- 48,300 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 53,290 ರೂ, ಮುಂಬೈ- 52,640 ರೂ, ದೆಹಲಿ- 52,800 ರೂ, ಕೊಲ್ಕತ್ತಾ- 52,640 ರೂ, ಬೆಂಗಳೂರು- 52,700 ರೂ, ಹೈದರಾಬಾದ್- 52,640 ರೂ, ಕೇರಳ- 52,640 ರೂ, ಪುಣೆ- 52,640 ರೂ, ಮಂಗಳೂರು- 52,700 ರೂ, ಮೈಸೂರು- 52,700 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 67,000 ರೂ, ಮೈಸೂರು- 67,000 ರೂ., ಮಂಗಳೂರು- 67,000 ರೂ., ಮುಂಬೈ- 61,000 ರೂ, ಚೆನ್ನೈ- 67,000 ರೂ, ದೆಹಲಿ- 61,000 ರೂ, ಹೈದರಾಬಾದ್- 67,000 ರೂ, ಕೊಲ್ಕತ್ತಾ- 61,000 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ