AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mutual Fund: ಸಾಲುಸಾಲು ಎನ್​ಎಫ್​ಒ ಘೋಷಿಸಿದ ಫಂಡ್​ಹೌಸ್​ಗಳು; ಕೋಟಕ್​ ಸಿಲ್ವರ್, ಎಚ್​ಡಿಎಫ್​ಸಿ ಬ್ಯುಸಿನೆಸ್ ಸೈಕಲ್ ಪ್ರಮುಖ ಆಕರ್ಷಣೆ

ಸಾಂಪ್ರದಾಯಿಕ ಲಾರ್ಜ್, ಮಿಡ್, ಸ್ಮಾಲ್​ ಕ್ಯಾಪ್​ಗಳಲ್ಲಿ ಫಂಡ್​ ಮ್ಯಾನೇಜರ್​ಗಳಿಗೆ ಸಿಗದ ಹಲವು ಸ್ವಾತಂತ್ರ್ಯ ಬ್ಯುಸಿನೆಸ್ ಸೈಕಲ್ ಫಂಡ್​ಗಳಲ್ಲಿ ಸಿಗುತ್ತದೆ.

Mutual Fund: ಸಾಲುಸಾಲು ಎನ್​ಎಫ್​ಒ ಘೋಷಿಸಿದ ಫಂಡ್​ಹೌಸ್​ಗಳು; ಕೋಟಕ್​ ಸಿಲ್ವರ್, ಎಚ್​ಡಿಎಫ್​ಸಿ ಬ್ಯುಸಿನೆಸ್ ಸೈಕಲ್ ಪ್ರಮುಖ ಆಕರ್ಷಣೆ
ಮ್ಯೂಚುವಲ್ ಫಂಡ್ (ಪ್ರಾತಿನಿಧಿಕ ಚಿತ್ರ)
Ghanashyam D M | ಡಿ.ಎಂ.ಘನಶ್ಯಾಮ
|

Updated on:Nov 23, 2022 | 4:27 PM

Share

ಬೆಂಗಳೂರು: ಮ್ಯೂಚುವಲ್ ಫಂಡ್​ಗಳನ್ನು (Mutual Funds) ನಿರ್ವಹಿಸುವ ಎಎಂಸಿಗಳು (Asset Management Company – AMC) ಹೂಡಿಕೆದಾರರನ್ನು ಆಕರ್ಷಿಸಲು ಹಲವು ಹೊಸ ಫಂಡ್​ಗಳನ್ನು ಘೋಷಿಸಿವೆ. ಈ ಪೈಕಿ ಕೋಟಕ್ ಸಿಲ್ವರ್ ಫಂಡ್, ಎಚ್​ಡಿಎಫ್​ಸಿ ಬ್ಯುಸಿನೆಸ್ ಸೈಕಲ್ ಫಂಡ್, ಈಡೆಲ್​ವೈಸ್ ಕಂಪನಿಯ ಪ್ಯಾಸಿವ್ ಫಂಡ್​ಗಳು ಹೂಡಿಕೆದಾರರ ಗಮನ ಸೆಳೆದಿವೆ. ಬಹುತೇಕ ಹೂಡಿಕೆದಾರರು ತಮ್ಮ ಪೋರ್ಟ್​ಫೋಲಿಯೊಗಳಲ್ಲಿ ಸ್ಮಾಲ್, ಮಿಡ್ ಮತ್ತು ಲಾರ್ಜ್​ ಕ್ಯಾಪ್​ ಫಂಡ್​ಗಳನ್ನು ಹೊಂದಲು ಬಯಸುತ್ತಾರೆ. ಈ ಮೂರೂ ವಿಭಾಗಗಳಿಗೆ ಸೂಕ್ತವಾಗುವಂತೆ ಮಹಿಂದ್ರ ಮನುಲೈಫ್ ಸ್ಮಾಲ್​ ಕ್ಯಾಪ್ ಫಂಡ್, ಕೆನರಾ ರೊಬೆಕೊ ಮಿಡ್​ಕ್ಯಾಪ್ ಫಂಡ್ ಮತ್ತು ವೈಟ್ ಓಕ್ ಕ್ಯಾಪಿಟಲ್ ಲಾರ್ಜ್​ ಕ್ಯಾಪ್ ಫಂಡ್​ಗಳಿಗೆ ಎನ್​ಎಫ್​ಒ ಘೋಷಿಸಲಾಗಿದೆ. ಅಮೆರಿಕ, ಬ್ರಿಟನ್ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಆರ್ಥಿಕ ಹಿಂಜರಿತದ ಭೀತಿ ಆವರಿಸಿಕೊಂಡಿದ್ದು ಷೇರುಪೇಟೆ ಕುಸಿಯುತ್ತಿದೆ. ಆದರೆ ಭಾರತದ ಆರ್ಥಿಕತೆಯು ಸ್ಥಿರತೆ ಪ್ರದರ್ಶಿಸುತ್ತಿದ್ದು ಹೂಡಿಕೆದಾರರು ಉತ್ಸಾಹ ಕಳೆದುಕೊಂಡಿಲ್ಲ. ದಿನದಿಂದ ದಿನಕ್ಕೆ ಘೋಷಣೆಯಾಗುತ್ತಿರುವ ಹೊಸ ಎನ್​ಎಫ್​ಒಗಳು ಹೂಡಿಕೆದಾರರ ಈ ಮನಸ್ಥಿತಿಯ ಪ್ರತೀಕವಾಗಿದೆ.

ಇನ್ನೆರೆಡು ದಿನಗಳಿಗೆ (ನ 25) ಎನ್​ಎಫ್​ಒ ಅವಧಿಯು ಅಂತ್ಯಗೊಳ್ಳಲಿರುವ ಎಚ್​ಡಿಎಫ್​ಸಿ ಬ್ಯುಸಿನೆಸ್ ಸೈಕಲ್ ಫಂಡ್ ಬಗ್ಗೆ ಮ್ಯೂಚುವಲ್ ಫಂಡ್ ವಿತರಕರ ವಲಯದಲ್ಲಿ ಆಸಕ್ತಿ ಮೂಡಿದೆ. ಹಲವರು ತಮ್ಮ ಗ್ರಾಹಕರಿಗೆ ಈ ಫಂಡ್ ಶಿಫಾರಸು ಮಾಡುತ್ತಿದ್ದಾರೆ. ಎಚ್​ಡಿಎಫ್​ಸಿಯ ಜನಪ್ರಿಯ ಫಂಡ್​ ಆಗಿರುವ ‘ಎಚ್​ಡಿಎಫ್​ಸಿ ಟಾಪ್ 100 ಫಂಡ್’ ನಿರ್ವಹಿಸುತ್ತಿರುವ ಫಂಡ್ ಮ್ಯಾನೇಜರ್ ರಾಹುಲ್ ಬೈಜಲ್ ಅವರೇ ಮುಂದಿನ ದಿನಗಳಲ್ಲಿ ಬ್ಯುಸಿನೆಸ್ ಸೈಕಲ್ ಫಂಡ್ ಮ್ಯಾನೇಜರ್ ಅಗಿ ಕಾರ್ಯನಿರ್ವಹಸಲಿದ್ದಾರೆ.

ಸಾಂಪ್ರದಾಯಿಕ ಲಾರ್ಜ್, ಮಿಡ್, ಸ್ಮಾಲ್​ ಕ್ಯಾಪ್​ಗಳಲ್ಲಿ ಫಂಡ್​ ಮ್ಯಾನೇಜರ್​ಗಳಿಗೆ ಸಿಗದ ಹಲವು ಸ್ವಾತಂತ್ರ್ಯ ಬ್ಯುಸಿನೆಸ್ ಸೈಕಲ್ ಫಂಡ್​ಗಳಲ್ಲಿ ಸಿಗುತ್ತದೆ. ಸಾಮಾನ್ಯವಾಗಿ ಇಂಥ ಫಂಡ್​ಗಳು ಕುಸಿಯುತ್ತಿರುವ ಮತ್ತು ಮೇಲೇರುತ್ತಿರುವ ವಾಣಿಜ್ಯ ಕ್ಷೇತ್ರಗಳನ್ನೇ ದೃಷ್ಟಿಯಲ್ಲಿರಿಸಿಕೊಂಡು ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಹೀಗಾಗಿ ಇತರ ಫಂಡ್​ಗಳಿಗಿಂತಲೂ ಇಂಥ ಫಂಡ್​ಗಳಲ್ಲಿ ಲಾಭ ಗಳಿಕೆಯ ಸಾಧ್ಯತೆ ಹೆಚ್ಚು. ಆದರೆ ಫಂಡ್​ ಮ್ಯಾನೇಜರ್ ಮತ್ತು ಅವರ ತಂಡದ ಲೆಕ್ಕಾಚಾರ ಫಲಿಸದಿದ್ದರೆ ಲಾಭ ಇಳಿದು, ನಷ್ಟವೂ ಆಗಬಹುದು.

ಟಾಟಾ, ಎಬಿಎಸ್​ಎಲ್, ಐಸಿಐಸಿಐ ಎಎಂಸಿಗಳು ಈಗಾಗಲೇ ಬ್ಯುಸಿನೆಸ್ ಸೈಕಲ್ ಫಂಡ್​ಗಳನ್ನು ಪರಿಚಯಿಸಿವೆ. ‘ಮುಂದಿನ ದಿನಗಳಲ್ಲಿ ಉತ್ತಮ ಲಾಭ ಗಳಿಕೆಯ ಸಾಧ್ಯತೆಯಿರುವ ಕಂಪನಿಗಳನ್ನೇ ಗುರುತಿಸಿ ಹೂಡಿಕೆ ಮಾಡುವುದು ಬ್ಯುಸಿನೆಸ್ ಸೈಕಲ್ ಫಂಡ್​ಗಳ ವೈಶಿಷ್ಟ್ಯ. ಷೇರುಪೇಟೆಯನ್ನು ನಿಯಮಿತವಾಗಿ ಗಮನಿಸಬಲ್ಲ, ಹೂಡಿಕೆ ಮತ್ತು ನಿರ್ಗಮನಕ್ಕೆ ಸಂಬಂಧಿಸಿದಂತೆ ಕಾಲಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇರುವವರು ಸ್ವಲ್ಪಮಟ್ಟಿಗೆ ಇಂಥ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು’ ಎಂದು ಮೈ ವೆಲ್ತ್​ ಗ್ರೋತ್​ನ ಹರ್ಷದ್​ ಚೆತನ್​ವಾಲಾ ಹೇಳುತ್ತಾರೆ.

ಚಿನ್ನದ ಜೊತೆಗೆ ಬೆಳ್ಳಿಯೂ ಇರಲಿ

ರಷ್ಯಾ-ಉಕ್ರೇನ್ ಯುದ್ಧವು ಆರಂಭವಾದ ನಂತರ ಹೂಡಿಕೆದಾರರನ್ನು ಆರ್ಥಿಕ ಅಸ್ಥಿರತೆಯ ಭೀತಿ ಕಾಡುತ್ತಿದೆ. ಆರ್ಥಿಕ ಅಸ್ಥಿರತೆ, ಹಿಂಜರಿಕೆಯ ಭೀತಿ ವ್ಯಕ್ತವಾದಾಗಲೆಲ್ಲಾ ಸುರಕ್ಷಿತ ಹೂಡಿಕೆ ಆಯ್ಕೆಗಳನ್ನು ಜನರು ಹುಡುಕುತ್ತಾರೆ. ಸಹಜವಾಗಿಯೇ ಚಿನ್ನ ಮತ್ತು ಬೆಳ್ಳಿ ಇಂಥವರ ಆಯ್ಕೆಯಾಗುತ್ತವೆ. ಭಾರತದಲ್ಲಿ ಬಹುಕಾಲದಿಂದ ಚಿನ್ನದ ಫಂಡ್​ಗಳು ವಹಿವಾಟು ನಡೆಸುತ್ತಿವೆ. ಆದರೆ ಬೆಳ್ಳಿ ಈ ಸಾಲಿಗೆ ಹೊಸದು. ಹೂಡಿಕೆದಾರರಲ್ಲಿ ವ್ಯಕ್ತವಾಗುತ್ತಿರುವ ಈ ಆಸಕ್ತಿಯನ್ನು ಆಧರಿಸಿ ಕೋಟಕ್ ಫಂಡ್​ ಹೌಸ್​ ಸಹ ಸಿಲ್ವರ್ ಫಂಡ್​ನ ಎನ್​ಎಫ್​ಒ ಘೋಷಿಸಿದೆ.

‘ಭಾರತದಲ್ಲಿ ಈಗಾಗಲಲೇ ಆಕ್ಸಿಸ್, ಎಚ್​ಡಿಎಫ್​ಸಿ, ಆದಿತ್ಯ ಬಿರ್ಲಾ, ನಿಪ್ಪಾನ್ ಇಂಡಿಯಾ ಸೇರಿದಂತೆ ಹಲವು ಫಂಡ್ ಹೌಸ್​ಗಳು ಸಿಲ್ವರ್​ ಫಂಡ್​ಗಳಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಿದೆ. ಹೂಡಿಕೆದಾರರ ಪೋರ್ಟ್​ಫೋಲಿಯೊದಲ್ಲಿ ಚಿನ್ನ ಮತ್ತು ಬೆಳ್ಳಿ ಫಂಡ್​ಗಳು ಗರಿಷ್ಠ ಶೇ 10ರಷ್ಟು ಇದ್ದರೆ ಸಾಕು. ಕೆಲ ಫಂಡ್​ಹೌಸ್​ಗಳು ಒಂದೇ ಫಂಡ್​ನಲ್ಲಿ ಎರಡೂ ಲೋಹಗಳಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸುತ್ತಿವೆ. ಇಂಥ ಫಂಡ್​ಗಳನ್ನೂ ಹೂಡಿಕೆದಾರರು ಪರಿಗಣಿಸಬಹುದು’ ಎಂದು ಬೆಂಗಳೂರಿನ ಆರ್​ಎಸ್​ಪಿ ಸರ್ವಿಸಸ್​ನ ಹಣಕಾಸು ಸಲಹೆಗಾರರಾದ ರಾಘವೇಂದ್ರ ಭಟ್ ಅಭಿಪ್ರಾಯಪಡುತ್ತಾರೆ.

ಇದನ್ನೂ ಓದಿ: Penny Stock: 1 ಲಕ್ಷ ರೂ. ಹೂಡಿಕೆಗೆ 67 ಲಕ್ಷ ರೂ. ಗಳಿಸಿಕೊಟ್ಟಿದೆ ಈ ಪೆನ್ನಿ ಸ್ಟಾಕ್!

Published On - 4:22 pm, Wed, 23 November 22

Follow Us
Ghanashyam D M | ಡಿ.ಎಂ.ಘನಶ್ಯಾಮ
Ghanashyam D M | ಡಿ.ಎಂ.ಘನಶ್ಯಾಮ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಕೇಂದ್ರ ತಂಡ
ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಕೇಂದ್ರ ತಂಡ