2022 Tata Tigor EV: ವಿಸ್ತರಿತ ಬ್ಯಾಟರಿ ಪ್ಯಾಕ್ ಪ್ರೇರಿತ ಹೊಸ ಟಾಟಾ ಟಿಗೋರ್ ಇವಿ ಬಿಡುಗಡೆ
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಟಿಗೋರ್ ಎಲೆಕ್ಟ್ರಿಕ್ 2022ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಹಲವಾರು ಹೊಸ ಬದಲಾವಣೆಗಳೊಂದಿಗೆ ವಿಸ್ತರಿತ ಬ್ಯಾಟರಿ ಪ್ಯಾಕ್ ಪಡೆದುಕೊಂಡಿದೆ.
ಎಲೆಕ್ಟ್ರಿಕ್ ಕಾರುಗಳ(Electric Car) ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ಟಿಗೋರ್ ಇವಿ(Tigor Electric) ಹೊಸ ಆವೃತ್ತಿ ಬಿಡುಗಡೆ ಮಾಡಿದೆ. ಹೊಸ ಇವಿ ಕಂಪ್ಯಾಕ್ಟ್ ಸೆಡಾನ್ ಲಾಂಗ್ ರೇಂಜ್ ಬ್ಯಾಟರಿ ಸೌಲಭ್ಯದೊಂದಿಗೆ ಹಲವಾರು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಕಾರು ಎಕ್ಸ್ ಇ, ಎಕ್ಸ್ ಟಿ, ಎಕ್ಸ್ ಜೆಡ್ ಪ್ಲಸ್ ಮತ್ತು ಎಕ್ಸ್ ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್ ಹೊಂದಿದೆ. ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.75 ಲಕ್ಷ ಬೆಲೆ ಹೊಂದಿದ್ದು, ಹೊಸ ಮಾದರಿಯಲ್ಲಿ ನೆಕ್ಸಾನ್ ಇವಿ ಕಾರಿನಿಂದಲೂ ಹಲವಾರು ಫೀಚರ್ಸ್ ಎರವಲು ಪಡೆಯಲಾಗಿದೆ.
ಬ್ಯಾಟರಿ ಮತ್ತು ಮೈಲೇಜ್
2017ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದ್ದ ಟಿಗೋರ್ ಇವಿ ಮಾದರಿಯಲ್ಲಿ ನಿರಂತರವಾಗಿ ಬದಲಾವಣೆ ತರುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ವಿಸ್ತರಿತ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದೆ. ಹೊಸ ಟಿಗೋರ್ ಇವಿ ಮಾದರಿಯು 26kWh ಲೀಥಿಯಂ ಅಯಾನ್ ಬ್ಯಾಟರಿ ಹೊಂದಿದ್ದು, ಇದರಲ್ಲಿ ಜಿಪ್ ಟ್ರಾನ್ ಹೈ-ವೊಲ್ಟೆಜ್ ಆರ್ಕಿಟೆಕ್ಚರ್ ಪ್ರೇರಿತ ಎಲೆಕ್ಟ್ರಿಕ್ ಮೋಟಾರ್ ಜೋಡಿಸಲಾಗಿದೆ. ಇದು ಅತ್ಯುತ್ತಮ ಪರ್ಫಾಮೆನ್ಸ್ ನೊಂದಿಗೆ ಉತ್ತಮ ಮೈಲೇಜ್ ನೀಡಲಿದ್ದು, ಹೊಸ ಮಾದರಿಯು ಹಳೆಯ ಆವೃತ್ತಿಗಿಂತ 9 ಕಿ.ಮೀ ಹೆಚ್ಚುವರಿ ಮೈಲೇಜ್ ನೀಡಲಿದೆ.
ಹೊಸ ಟಿಗೋರ್ ಇವಿ ಮಾದರಿಯ ಸದ್ಯ ಪ್ರತಿ ಚಾರ್ಜ್ ಗೆ ಗರಿಷ್ಠ 315 ಕಿ.ಮೀ ಮೈಲೇಜ್ ನೀಡಲಿದ್ದು, ಹೊಸ ಕಾರಿನಲ್ಲಿರುವ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಡಸ್ಟ್ ಪ್ರೂಫ್, ವಾಟರ್ ಪ್ರೂಫ್ ವೈಶಿಷ್ಟ್ಯತೆ ಹೊಂದಿದೆ. ಹಾಗೆಯೇ ಹೊಸ ಕಾರು 75 ಹಾರ್ಸ್ ಪವರ್ ಮತ್ತು 170 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಈ ಮೂಲಕ ಹೊಸ ಕಾರು 5.7 ಸೆಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮೀ ವೇಗ ಪಡೆದುಕೊಳ್ಳುತ್ತದೆ. ಇದರೊಂದಿಗೆ ಹೊಸ ಕಾರು ಉತ್ತಮ ಮೈಲೇಜ್ ಜೊತೆಗೆ ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದ್ದು, XZ Plus ಲಕ್ಸ್ ವೆರಿಯೆಂಟ್ ನಲ್ಲಿ ಹೆಚ್ಚಿನ ಮಟ್ಟದ ಫೀಚರ್ಸ್ ಗಳನ್ನ ನೀಡಲಾಗಿದೆ.
ಡಿಸೈನ್ ಮತ್ತು ಫೀಚರ್ಸ್
ಹೊಸ ಟಿಗೋರ್ ಇವಿ ಆವೃತ್ತಿಯು ಈ ಹಿಂದಿನ ವಿನ್ಯಾಸವನ್ನೇ ಹೊಂದಿದ್ದರೂ ಫೀಚರ್ಸ್ ಜೋಡಣೆಯಲ್ಲಿ ಗಮನಸೆಳಲಿದೆ. ಹೊಸ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 7 ಇಂಚಿನ ಟಚ್ ಸ್ಕ್ರೀನ್ ಸೌಲಭ್ಯದೊಂದಿಗೆ ಸ್ಟ್ರೀರಿಂಗ್ ಮೌಂಟೆಡ್ ಜೋಡಿಸಿದೆ.
ಹಾಗೆಯೇ XZ Plus ವೆರಿಯೆಂಟ್ ನಲ್ಲಿ ಕ್ರೂಸ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್, ಕಾಂಟ್ರಾಸ್ಟ್ ಬ್ಲ್ಯಾಕ್ ರೂಫ್, ಲೆದರ್ ವ್ಯಾರ್ಪ್ ಹೊಂದಿರುವ ಸ್ಟ್ರೀರಿಂಗ್ ವ್ಹೀಲ್ ನೀಡಲಾಗಿದೆ. ಜೊತೆಗೆ ಹೊಸ ಕಾರಿನಲ್ಲಿ ಮಲ್ಟಿ ಮೋಡ್ ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಸೇರಿದಂತೆ ಹಲವಾರು ಸೇಫ್ಟಿ ಫೀಚರ್ಸ್ ನೀಡಲಿದೆ. ಹೊಸ ಕಾರಿನಲ್ಲಿ ಹಲವಾರು ಸೇಫ್ಟಿ ಫೀಚರ್ಸ್ ಗಳಿದ್ದು, ಇದು ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಗರಿಷ್ಠ 4 ಸ್ಟಾರ್ ರೇಟಿಂಗ್ಸ್ ನೊಂದಿಗೆ ಗ್ರಾಹಕರ ನೆಚ್ಚಿನ ಮಾದರಿಯಾಗಿದೆ.
Published On - 6:19 pm, Wed, 23 November 22