ಸ್ವಿಗ್ಗಿ, ಜೊಮಾಟೊಗೆ ಟಾಟಾ ಪೈಪೋಟಿ; ಬೆಂಗಳೂರು, ದಿಲ್ಲಿಯಲ್ಲಿ ಒಎನ್​ಡಿಸಿಯಲ್ಲಿ ಫೂಡ್ ಡೆಲಿವರಿ ಸೇವೆಗೆ ಅಡಿ ಇಟ್ಟ Tata Neu

|

Updated on: Apr 12, 2024 | 2:45 PM

Tata Neu starts food delivery service: ಸ್ವಿಗ್ಗಿ, ಜೊಮಾಟೊ ಪ್ರಾಬಲ್ಯ ಇರುವ ಫೂಡ್ ಡೆಲಿವರಿ ಸೇವೆಗೆ ಟಾಟಾ ಗ್ರೂಪ್​ನ ಕಂಪನಿ ಅಡಿ ಇಟ್ಟಿದೆ. ಬೆಂಗಳೂರು ಮತ್ತು ದೆಹಲಿ ಎನ್​ಸಿಆರ್​ನಲ್ಲಿ ಟಾಟಾ ನ್ಯೂ ಒಎನ್​ಡಿಸಿ ನೆಟ್ವರ್ಕ್​ನಲ್ಲಿ ಆಹಾರ ಸರಬರಾಜು ಸೇವೆ ಆರಂಭಿಸಿದೆ. ಮೇ ತಿಂಗಳೊಳಗೆ ದೇಶಾದ್ಯಂತ ಈ ಸೇವೆ ವಿಸ್ತರಣೆ ಆಗಲಿದೆ. ಟಾಟಾ ನ್ಯೂ ಒಎನ್​ಡಿಸಿ ನೆಟ್ವರ್ಕ್​ಗೆ ಇಂಟಿಗ್ರೇಟ್ ಮಾಡಲು ಟೆಕ್ನಾಲಜಿ ನೆರವನ್ನು ಮ್ಯಾಜಿಕ್ ಪಿನ್ ನೀಡಿದೆ.

ಸ್ವಿಗ್ಗಿ, ಜೊಮಾಟೊಗೆ ಟಾಟಾ ಪೈಪೋಟಿ; ಬೆಂಗಳೂರು, ದಿಲ್ಲಿಯಲ್ಲಿ ಒಎನ್​ಡಿಸಿಯಲ್ಲಿ ಫೂಡ್ ಡೆಲಿವರಿ ಸೇವೆಗೆ ಅಡಿ ಇಟ್ಟ Tata Neu
ಟಾಟಾ ನ್ಯೂ
Follow us on

ನವದೆಹಲಿ, ಏಪ್ರಿಲ್ 12: ಟಾಟಾದ ಡಿಜಿಟಲ್ ಸೂಪರ್ ಆ್ಯಪ್ ಎನಿಸಿದ ಟಾಟಾ ನ್ಯೂನಲ್ಲಿ (Tata Neu) ಫೂಡ್ ಡೆಲಿವರಿ ಸರ್ವಿಸ್ ಆರಂಭಿಸಲಾಗಿದೆ. ಒಎನ್​ಡಿಸಿ ಪ್ಲಾಟ್​ಫಾರ್ಮ್ (ONDC network) ಬಳಸಿ ಟಾಟಾ ನ್ಯೂ ಆಹಾರ ಸರಬರಾಜು ಸೇವೆ ಶುರು ಮಾಡಿದ್ದು, ಮೊದಲಿಗೆ ಬೆಂಗಳೂರು ಮತ್ತು ದೆಹಲಿ ಎನ್​ಸಿಆರ್ ಪ್ರದೇಶಗಳಲ್ಲಿ ಚಾಲನೆಗೊಳಿಸಿದೆ. ಮುಂದಿನ ವಾರದೊಳಗೆ ಇನ್ನೂ ಮೂರ್ನಾಲ್ಕು ಪ್ರಮುಖ ನಗರಗಳಲ್ಲೂ ಫೂಡ್ ಡೆಲಿವರಿ ಸೇವೆ ಶುರುವಾಗಲಿದೆ. ಮೇ ಎರಡು ಅಥವಾ ಮೂರನೇ ವಾರದೊಳಗೆ ಇಡೀ ಭಾರತದಲ್ಲಿ ಟಾಟಾ ನ್ಯೂ ಈ ಸೇವೆ ಶುರು ಮಾಡುವ ಸಾಧ್ಯತೆ ಇದೆ.

ಟಾಟಾ ನ್ಯೂ ಸೂಪರ್​​ ಆ್ಯಪ್ ಅನ್ನು ಡೌನ್​ಲೋಡ್ ಮಾಡಿದರೆ ಸದ್ಯಕ್ಕೆ ಬೆಂಗಳೂರು ಮತ್ತು ದೆಹಲಿ ಎನ್​ಸಿಆರ್ ಪ್ರದೇಶದಲ್ಲಿರುವ ಬಳಕೆದಾರರಿಗೆ ಮಾತ್ರವೇ ಆ್ಯಪ್​ನಲ್ಲಿ ಫೂಡ್ ಡೆಲಿವರಿ ಕೆಟಗರಿ ಕಾಣುತ್ತದೆ.

ಇದನ್ನೂ ಓದಿ: ಭಾರ್ತಿ ಹೆಕ್ಸಾಕಾಮ್ ಭರ್ಜರಿ ಬೆಲೆಗೆ ಷೇರು ಮಾರುಕಟ್ಟೆಗೆ ಸೇರ್ಪಡೆ; ಐಪಿಒ ಬೆಲೆ 570 ರೂ, ಲಿಸ್ಟಿಂಗ್ ಬೆಲೆ 755 ರೂ

ಮ್ಯಾಜಿಕ್​ಪಿನ್ ತಂತ್ರಜ್ಞಾನ ನೆರವು…!

ಟಾಟಾ ನ್ಯೂ ಒಎನ್​ಡಿಸಿ ಪ್ಲಾಟ್​ಫಾರ್ಮ್​ಗೆ ಮಿಳಿತಗೊಳಿಸಲು ಮ್ಯಾಜಿಕ್​ಪಿನ್ ಸಹಾಯ ಮಾಡುತ್ತಿದೆ. ಕುತೂಹಲವೆಂದರೆ, ಫೂಡ್ ಡೆಲಿವರಿ ಆ್ಯಪ್ ಆದ ಜೊಮಾಟೋ ಸಂಸ್ಥೆ ಮ್ಯಾಜಿಕ್​ಪಿನ್ ಮಾಲಕತ್ವ ಹೊಂದಿದೆ. ಪೇಟಿಎಂ, ಓಲಾ ಮೊದಲಾದ ಕೆಲ ಆ್ಯಪ್​ಗಳನ್ನು ಓಎನ್​ಡಿಸಿಗೆ ಇಂಟಿಗ್ರೇಟ್ ಮಾಡಿಸಿದ್ದು ಇದೇ ಮ್ಯಾಜಿಕ್ ಪಿನ್.

ಸರ್ಕಾರದಿಂದ ಅಭಿವೃದ್ಧಿಪಡಿಸಲಾಗಿರುವ ಒಎನ್​ಡಿಸಿಯಲ್ಲಿ ಇಕಾಮರ್ಸ್ ಬಿಸಿನೆಸ್ ನಡೆಸಬಹುದು. ಖರೀದಿದಾರರ ಪ್ಲಾಟ್​ಫಾರ್ಮ್, ಮಾರಾಟಗಾರರ ಪ್ಲಾಟ್​ಫಾರ್ಮ್, ವಹಿವಾಟು ನಡೆಯಲು ಅನುವು ಮಾಡಿಕೊಡುವ ಗೇಟ್​ವೇ, ಹಾಗೂ ತಂತ್ರಜ್ಞಾನ ಸೇವೆ ನೀಡುಗರು ಹೀಗೆ ನಾಲ್ಕು ಪ್ಲಾಟ್​ಫಾರ್ಮ್​ಗಳಿವೆ. ಮ್ಯಾಜಿಕ್​ಪಿನ್ ಟೆಕ್ನಾಲಜಿ ಸರ್ವಿಸ್ ಪ್ರೊವೈಡರ್ ಆಗಿರುವುದರ ಜೊತೆಗೆ ಮಾರಾಟಗಾರರ ಪ್ಲಾಟ್​ಫಾರ್ಮ್ ಕೂಡ ಆಗಿದೆ. ಟಾಟಾ ನ್ಯೂ ಖರೀದಿದಾರರ ಪ್ಲಾಟ್​ಫಾರ್ಮ್ ಆಗಿದೆ.

ಇದನ್ನೂ ಓದಿ: ಇವನಿಂದೇನು ಪ್ರಯೋಜನ ಇಲ್ಲ, ತೊಲಗಿಸಿ ಎಂದಿದ್ದರು ನಂಟರು; ಈ ಹುಟ್ಟಾ ಕುರುಡ ಇವತ್ತು ಸಿಇಒ

ಇಲ್ಲಿ, ಒಎನ್​ಡಿಸಿ ನೆಟ್ವರ್ಕ್​ಗೆ ಮ್ಯಾಜಿಕ್ ಪಿನ್ ವಿವಿಧ ರೆಸ್ಟೋರೆಂಟ್​ಗಳನ್ನು ತರುತ್ತದೆ. ಇಲ್ಲಿಯವರೆಗೆ 50,000ಕ್ಕೂ ಹೆಚ್ಚು ಹೋಟೆಲ್, ರೆಸ್ಟೋರೆಂಟ್​ಗಳನ್ನು ಒಎನ್​ಡಿಸಿ ನೆಟ್ವರ್ಕ್​ಗೆ ಜೋಡಿಸಿದೆ. ಟಾಟಾ ನ್ಯೂ ಖರೀದಿದಾರರ ಪ್ಲಾಟ್​ಫಾರ್ಮ್ ಆಗಿದ್ದು, ಇದು ಗ್ರಾಹಕರು ಸ್ವಿಗ್ಗಿ, ಜೊಮಾಟೋದಲ್ಲಿಯಂತೆ ಆಹಾರವನ್ನು ಬುಕ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ