Tata Steel Recruitment: ತೃತೀಯ ಲಿಂಗಿಗಳಿಗಾಗಿ ಉದ್ಯೋಗ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಟಾಟಾ ಸ್ಟೀಲ್

| Updated By: Srinivas Mata

Updated on: Sep 02, 2021 | 2:48 PM

ದೇಶದ ಅತಿ ದೊಡ್ಡ ಉಕ್ಕು ತಯಾರಿಕೆ ಸಂಸ್ಥೆಯಾದ ಟಾಟಾ ಸ್ಟೀಲ್​ನಿಂದ ಎಲ್​ಜಿಬಿಟಿಕ್ಯೂ+ ಸಮುದಾಯದಿಂದ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

Tata Steel Recruitment: ತೃತೀಯ ಲಿಂಗಿಗಳಿಗಾಗಿ ಉದ್ಯೋಗ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಟಾಟಾ ಸ್ಟೀಲ್
ಟಾಟಾ ಸ್ಟೀಲ್​ (ಸಾಂದರ್ಭಿಕ ಚಿತ್ರ)
Follow us on

ಭಾರತೀಯ ಉಕ್ಕು ದೈತ್ಯ ಕಂಪೆನಿಯಾದ ಟಾಟಾ ಸ್ಟೀಲ್​ನಿಂದ ತೃತೀಯ ಲಿಂಗಿಗಳಿಗಾಗಿ ಉದ್ಯೋಗಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪಶ್ಚಿಮ ಬೊಕಾರೋ ವಿಭಾಗದಲ್ಲಿ ಹೆವಿ ಅರ್ಥ್ ಮೂವಿಂಗ್ ಮಶೀನರಿ (HEMM) ಆಪರೇಟರ್ಸ್ (ಟ್ರೇನಿ) ಹುದ್ದೆಗಾಗಿ ಈ ಅರ್ಜಿಗಳನ್ನು ಕರೆಯಲಾಗಿದೆ. ಡಂಪರ್, ಡ್ರಿಲ್ ಡೋಜರ್, ಎಕ್ಸ್​ಕವೇಟರ್, ಪೇ ಲೋಡರ್, ಕಾರ್ನೆ ಮುಂತಾದ ಸ್ಥಾನಗಳಿಗೆ ಪಶ್ಚಿಮ ಬೊಕಾರೊ, ರಾಮಗಢ, ಜಾರ್ಖಂಡ್​ನಲ್ಲಿ ಇರುವ ಅದರ ಕಲ್ಲಿದ್ದಲು ವಿಭಾಗಕ್ಕೆ LGBTQ+ ತೆಗೆದುಕೊಳ್ಳಲಾಗುವುದು ಎಂದು ಕಂಪೆನಿಯ ಉದ್ಯೋಗ ಪೋಸ್ಟಿಂಗ್​ನಲ್ಲಿ ಮಾಹಿತಿ ನೀಡಲಾಗಿದೆ. LGBTQ+ ಅಂದರೆ ಲೆಸ್ಬಿಯನ್, ಗೇ, ಬೈಸೆಕ್ಷುಯಲ್, ಟ್ರಾನ್ಸ್​ಜೆಂಡರ್​, ಕ್ವೆಶ್ಚನಿಂಗ್ ಮತ್ತು ಸಂಬಂಧಿತ ಸಮುದಾಯಗಳು ಎಂದರ್ಥ. ಈ ಉದ್ಯೋಗಕ್ಕೆ ಅರ್ಜಿ ಹಾಕುವುದಕ್ಕೆ ಮೆಟ್ರಿಕ್ಯುಲೇಷನ್ ಉತ್ತೀರ್ಣರಾಗಿರಬೇಕು ಮತ್ತು ಸೆಪ್ಟೆಂಬರ್ 1, 1981ರಿಂದ ಸೆಪ್ಟೆಂಬರ್ 1, 2003ರ ಮಧ್ಯೆ ಜನಿಸಿರಬೇಕು. ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವೈದ್ಯಕೀಯ ಪರೀಕ್ಷೆ ಇರುತ್ತದೆ ಎನ್ನಲಾಗಿದೆ.

LGBTQ ಸಮುದಾಯದವರನ್ನು ನೇಮಿಸಿಕೊಳ್ಳುವುದರ ಮೂಲಕ ಟಾಟಾ ಸ್ಟೀಲ್ ಮತ್ತೂ ಹೆಸರಾಗಿದೆ. 2020ರಲ್ಲಿ ಭಾರತ ಉದ್ಯೋಗ ಸ್ಥಳ ಸಮಾನತೆ ಸೂಚ್ಯಂಕದಲ್ಲಿ (IWEI) LGBT+ ಸಮುದಾಯಕ್ಕೆ ಟಾಪ್ ಉದ್ಯೋಗದಾತ ಸಂಸ್ಥೆ ಎನಿಸಿಕೊಂಡಿತ್ತು ಟಾಟಾ ಸ್ಟೀಲ್. LGBT+ ಒಳಗೊಳ್ಳುವಂತೆ ಮಾಡಿರುವ ಪ್ರಯತ್ನಕ್ಕೆ ಸಂಬಂಧಿಸಿದ ಹಾಗೆ ದೇಶದ ಮೊದಲ ಸಮಗ್ರ ಬೆಂಚ್​ಮಾರ್ಕ್​ ಅಧ್ಯಯನದಲ್ಲಿ ಇದು ಗೊತ್ತಾಗಿತ್ತು. “IWEI ಎಂಬುದು ಸಲಿಂಗಕಾಮಿ, ಗೇ, ದ್ವಿ, ಟ್ರಾನ್ಸ್ ಉದ್ಯೋಗಿಗಳಿಗಾಗಿ ಭಾರತದ ಅತ್ಯುತ್ತಮ ಉದ್ಯೋಗದಾತರನ್ನು ಗುರುತಿಸುವ ಖಚಿತ ಪಟ್ಟಿ ಇದಾಗಿದೆ. ಟಾಟಾ ಸ್ಟೀಲ್‌ನ ಉನ್ನತ ಉದ್ಯೋಗದಾತ ಸ್ಥಾನವು LGBT+ ಸಮುದಾಯಕ್ಕೆ ಸಮಾನತೆಯನ್ನು ಮುಂದುವರಿಸುವ ಕಂಪೆನಿ ಬದ್ಧತೆಯನ್ನು ಗುರುತಿಸುತ್ತದೆ. 18 ಸಂಸ್ಥೆಗಳಲ್ಲಿ ಟಾಟಾ ಸ್ಟೀಲ್ ಸಹ ಬೆಳ್ಳಿ ವಿಭಾಗದಲ್ಲಿ ಕಾಣಿಸಿಕೊಂಡಿದೆ,” ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದು IWEI ಟಾಪ್ ಉದ್ಯೋಗದಾತರ ಮೊದಲ ಪಟ್ಟಿಯಾಗಿದ್ದು, ಅವರ ಅಂತಿಮ ಸ್ಕೋರ್‌ಗೆ ಅನುಗುಣವಾಗಿ ‘ಕಂಚು’, ‘ಬೆಳ್ಳಿ’ ಅಥವಾ ‘ಚಿನ್ನ’ ಎಂದು ಗುರುತಿಸಲಾದ 52 ಸಂಸ್ಥೆಗಳನ್ನು ಒಳಗೊಂಡಿದೆ. ಈ ಸೂಚಿಯಲ್ಲಿ ಭಾಗವಹಿಸುವ ಸಂಸ್ಥೆಗಳು ಎಲ್‌ಜಿಬಿಟಿ+ ಸಮುದಾಯಕ್ಕೆ ಉದ್ಯೋಗ ಸ್ಥಳದಲ್ಲಿ ಸಮಾನತೆಯನ್ನು ಬೆಂಬಲಿಸುತ್ತವೆ ಎಂದು ಸ್ಪಷ್ಟಪಡಿಸುತ್ತವೆ.

ಇದನ್ನೂ ಓದಿ: ಕೊವಿಡ್​ 19ನಿಂದ ಮೃತಪಡುವ ಉದ್ಯೋಗಿಗಳ ವೇತನ ಪ್ರತಿ ತಿಂಗಳೂ ಅವರ ಕುಟುಂಬಕ್ಕೆ ತಲುಪಲಿದೆ: ಟಾಟಾ ಸ್ಟೀಲ್​ ಕಂಪನಿಯ ಮಹತ್ವದ ನಿರ್ಧಾರ

(Tata Steel Call For Recruitment Of Job Positions With LGBT Community Here Is The Details)

Published On - 2:41 pm, Thu, 2 September 21