
ನವದೆಹಲಿ, ಜನವರಿ 30: ಕಳೆದ ಕೆಲ ವರ್ಷಗಳಿಂದ ಸರ್ಕಾರ ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರಕ್ಕೆ ಮುತುವರ್ಜಿ ತೋರುತ್ತಾ ಬರುತ್ತಿದೆ. ವಸತಿ ಪ್ರಾಜೆಕ್ಟ್ಗಳು, ಕೈಗಾರಿಕಾ ಕಾರಿಡಾರ್ಗಳು ಸಾಕಷ್ಟು ನಿರ್ಮಾಣ ಆಗಿವೆ, ಆಗುತ್ತಿವೆ. ಇನ್ಫ್ರಾಸ್ಟ್ರಕ್ಚರ್ ಉತ್ತಮಗೊಂಡಂತೆ ರಿಯಲ್ ಎಸ್ಟೇಟ್ (Real Estate sector) ಉದ್ಯಮವೂ ಗರಿಗೆದರುತ್ತಾ ಬಂದಿದೆ. ಸರ್ಕಾರದ ಈ ಸುಧಾರಣಾ ಕ್ರಮಗಳು ಸ್ಥಗಿತಗೊಳ್ಳದೆ ಮುಂದುವರಿಯುತ್ತಾ ಹೋಗಲಿ ಎಂಬುದು ಈ ಉದ್ಯಮವು ಬಜೆಟ್ನಿಂದ ಮಾಡುತ್ತಿರುವ ನಿರೀಕ್ಷೆ.
ಉದ್ಯೋಗ ಸೃಷ್ಟಿ, ಯೋಜಿತ ನಗರೀಕರಣ, ದೀರ್ಘಕಾಲೀನ ಆರ್ಥಿಕ ಕ್ಷಮತೆ ಇವುಗಳಿಗೆ ರಿಯಲ್ ಎಸ್ಟೇಟ್ ಸೆಕ್ಟರ್ ಶಕ್ತಿ ತುಂಬಬೇಕಾದರೆ, ಅಭಿವೃದ್ಧಿ ಪೂರಕವಾದ ಮತ್ತು ಸಮತೋಲಿತವಾದ ಬಜೆಟ್ನಿಂದ ಸಾಧ್ಯ ಎಂದು ಬೆಂಗಳೂರಿನ ಮನ ಪ್ರಾಜೆಕ್ಟ್ಸ್ನ (Mana Projects) ಸಿಎಂಡಿ ಡಿ. ಕಿಶೋರ್ ರೆಡ್ಡಿ ಹೇಳುತ್ತಾರೆ.
ಸರ್ಕಾರದ ನೀತಿಗಳು ಮುಂದುವರಿಯಬೇಕು. ವಿವಿಧ ಹೌಸಿಂಗ್ ಸೆಗ್ಮೆಂಟ್ಗಳಲ್ಲಿ ಗ್ರಾಹಕರ ವಿಶ್ವಾಸ ಮೂಡಿಸುವಂತಹ ಮತ್ತು ಭವಿಷ್ಯದ ದೃಷ್ಟಿಯಿಂದ ಮಾಡಲಾಗುವ ಸುಧಾರಣೆಗಳೂ ಬರಬೇಕು. ನಿರ್ಮಾಣ ಹಂತದಲ್ಲಿರುವ ಪ್ರಾಪರ್ಟಿಗಳ ಮೇಲೆ ಜಿಎಸ್ಟಿ ದರ ಇಳಿಸಬೇಕು. ಗೃಹ ಸಾಲದ ಬಡ್ಡಿ ಮೇಲೆ ಡಿಡಕ್ಷನ್ ಮಿತಿಯನ್ನು ಹೆಚ್ಚಿಸಬೇಕು ಎಂದು ಕಿಶೋರ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಈ ಬಾರಿಯ ಬಜೆಟ್ನಿಂದ ಇನ್ನಷ್ಟು ಸೂಕ್ಷ್ಮ ಕ್ರಮ ಎದುರು ನೋಡುತ್ತಿರುವ ಇನ್ಷೂರೆನ್ಸ್ ಸೆಕ್ಟರ್
ಉದಯೋನ್ಮುಖವಾಗಿರುವ ಹಾಗೂ ಎರಡನೇ ಸ್ತರದ ನಗರಗಳಲ್ಲಿ (ಟಯರ್-2 ಸಿಟಿ) ಇನ್ಫ್ರಾಸ್ಟ್ರಕ್ಚರ್ ಮತ್ತು ನಗರ ಸಂಪರ್ಕತೆಯಲ್ಲಿ ಸತತ ಹೂಡಿಕೆ ಮಾಡಬೇಕು. ಇದರಿಂದ ಹೊಸ ವಸತಿ ಕಾರಿಡಾರ್ಗಳು ಹೊರಹೊಮ್ಮಲು ಸಾಧ್ಯ. ಸಮತೋಲಿತವಾದ ನಗರ ಬೆಳವಣಿಗೆ ಸಾಧ್ಯ. ಹಾಗೆಯೇ, ಏಕ ಗವಾಕ್ಷಿ ಸಿಸ್ಟಂ ಮೂಲಕ ವೇಗವಾಗಿ ಪ್ರಾಜೆಕ್ಟ್ಗಳ ಅನುಮೋದನೆ ಆಗಬೇಕು. ಎಫ್ಡಿಐ ನಿಯಮಗಳಲ್ಲಿ ಸ್ಪಷ್ಟತೆ ಬರಬೇಕು ಎಂದೂ ಮನ ಪ್ರಾಜೆಕ್ಟ್ಸ್ನ ಸಿಎಂಡಿ ಸಲಹೆ ನೀಡಿದ್ದಾರೆ.
ವಿಎಸ್ ರಿಯಾಲ್ಟರ್ಸ್ ಸಂಸ್ಥೆಯ ಸಿಇಒ ವಿಜಯ್ ಹರ್ಷ್ ಪ್ರಕಾರ ರಿಯಲ್ ಎಸ್ಟೇಟ್ ಮಾರುಕಟ್ಟೆ ಮಂದಗೊಳ್ಳುತ್ತಿರುವ ಆರಂಭಿಕ ಸುಳಿವು ಇದೆ. ಪ್ರಾಪರ್ಟಿಗಳು ಮಾರಾಟವಾಗುತ್ತಿರುವ ಪ್ರಮಾಣ ಕಡಿಮೆ ಆಗುತ್ತಿದೆ. ಅದರಲ್ಲೂ ಅಧಿಕ ಬೇಡಿಕೆ ಇರುವ 1 ಕೋಟಿ ರೂ ಒಳಗಿನ ಮನೆಗಳ ಮಾರಾಟ ಕುಂಠಿತಗೊಳ್ಳುತ್ತಿದೆ ಎನ್ನುತ್ತಾರೆ ವಿಜಯ್ ಹರ್ಷ್.
ಇದನ್ನೂ ಓದಿ: ಬಜೆಟ್ನಲ್ಲಿ ವಿತ್ತೀಯ ಶಿಸ್ತು ಕಾಯ್ದುಕೊಂಡು ಬಂಡವಾಳ ವೆಚ್ಚ ಹೆಚ್ಚಿಸಬಹುದು: ಜೆಎಂ ಫೈನಾನ್ಷಿಯಲ್ ನಿರೀಕ್ಷೆ
ಲ್ಯಾಂಡ್ ಡೆಲವಪರ್ಗಳಿಗೆ ಕಡಿಮೆ ದರದಲ್ಲಿ ಭೂಮಿ ಸಿಗುವಂತಹ ವ್ಯವಸ್ಥೆ ಮಾಡಬೇಕು. ಮನೆ ಖರೀದಿದಾರರಿಗೆ ಗೃಹ ಸಾಲಗಳಿಗೆ ಡಿಡಕ್ಷನ್ ಇತ್ಯಾದಿ ತೆರಿಗೆ ರಿಯಾಯಿತಿ ಸೌಲಭ್ಯ ಕೊಟ್ಟರೆ ಈ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಚುರುಕು ಮುಟ್ಟಬಹುದು ಎನ್ನುತ್ತಾರೆ ವಿಎಸ್ ರಿಯಾಲ್ಟರ್ಸ್ನ ಸಂಸ್ಥಾಪಕರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ