ನವದೆಹಲಿ, ಜೂನ್ 11: ಜೂನ್ ತಿಂಗಳ ತೆರಿಗೆ ಆದಾಯದಲ್ಲಿ ರಾಜ್ಯಗಳಿಗೆ ಅವುಗಳ ಪಾಲನ್ನು ಕೇಂದ್ರ ಸರ್ಕಾರ ನಿನ್ನೆ ಹಂಚಿಕೆ (tax devolution) ಮಾಡಿದೆ. ಈ ಒಂದು ತಿಂಗಳಲ್ಲಿ ರಾಜ್ಯ ಸರ್ಕಾರಗಳಿಗೆ ಒಟ್ಟು 1.39 ಲಕ್ಷ ಕೋಟಿ ರು ಹಣವನ್ನು ಹಣಕಾಸು ಸಚಿವಾಲಯ (Finance ministry) ಬಿಡುಗಡೆ ಮಾಡಿದೆ. ಮಾಮೂಲಿಯಂತೆ ಈ ಬಾರಿಯೂ ಉತ್ತರಪ್ರದೇಶಕ್ಕೆ ಅತಿಹೆಚ್ಚು ಪಾಲು ಸಿಕ್ಕಿದೆ. ಆ ಅತಿದೊಡ್ಡ ರಾಜ್ಯಕ್ಕೆ 25 ಸಾವಿರ ಕೋಟಿ ರೂಗೂ ಹೆಚ್ಚು ತೆರಿಗೆ ಹಣ ಸಿಕ್ಕಿದೆ. ಮಹಾರಾಷ್ಟ್ರ ಬಳಿಕ ಅತಿಹೆಚ್ಚು ತೆರಿಗೆ ಸಂಗ್ರಹಿಸಿಕೊಡುವ ಕರ್ನಾಟಕ ರಾಜ್ಯಕ್ಕೆ ಜೂನ್ ತಿಂಗಳಲ್ಲಿ ಸಿಕ್ಕಿರುವುದು 5,096 ಕೋಟಿ ರೂ ಮಾತ್ರವೇ.
ವಿವಿಧ ರಾಜ್ಯಗಳಿಂದ ಸಂಗ್ರಹವಾಗುವ ಜಿಎಸ್ಟಿ ತೆರಿಗೆ ಹಣವನ್ನು ಮಾಸಿಕವಾಗಿ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಒಟ್ಟು ತೆರಿಗೆ ಸಂಗ್ರಹದಲ್ಲಿ ರಾಜ್ಯಗಳಿಗೆ ಶೇ. 41ರಷ್ಟು ಪಾಲು ನೀಡಲಾಗುತ್ತದೆ. ಜೂನ್ ತಿಂಗಳಲ್ಲಿ ಮಾಸಿಕ ಬಾಬ್ತಿನ ಜೊತೆಗೆ ಒದು ಹೆಚ್ಚುವರಿ ಕಂತನ್ನೂ ಸೇರಿಸಲಾಗಿದೆ. ಎಲ್ಲವೂ ಸೇರಿ ಒಟ್ಟು 1,39,750 ಕೋಟಿ ರೂ ಆಗಿದೆ.
ಫೆಬ್ರುವರಿಯಲ್ಲಿ ನಡೆದ ಮಧ್ಯಂತರ ಬಜೆಟ್ನಲ್ಲಿ 2024-25ರ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ 12.19 ಲಕ್ಷ ಕೋಟಿ ರೂ ತೆರಿಗೆ ಹಂಚಿಕೆ ಮಾಡಲು ಯೋಜಿಸಲಾಗಿದೆ. ಇಲ್ಲಿಯವರೆಗೆ 2.8 ಲಕ್ಷ ಕೋಟಿ ರೂ ಹಂಚಿಕೆ ಮಾಡಲಾಗಿದೆ. ಅಂದರೆ ಏಪ್ರಿಲ್ 1ರಿಂದ ಆರಂಭವಾಗಿ ಜೂನ್ 10ರವರೆಗೆ 2.8 ಲಕ್ಷ ಕೋಟಿ ರೂ ತೆರಿಗೆ ಹಣವನ್ನು ರಾಜ್ಯಗಳಿಗೆ ಕೊಡಲಾಗಿದೆ.
ಇದನ್ನೂ ಓದಿ: ಪಿಎಂ ಕಿಸಾನ್ 17ನೇ ಕಂತು ಬಂತು; 20,000 ಕೋಟಿ ರೂ ಹಣ ಬಿಡುಗಡೆ
ಒಟ್ಟು ತೆರಿಗೆ: 1,39,750.92 ಕೋಟಿ ರೂ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ