Galaxy S23 Series: ಬಹುನಿರೀಕ್ಷಿತ ಗ್ಯಾಲಕ್ಸಿ S23 ಸರಣಿಯ ಬೆಲೆ ಸೋರಿಕೆ: ಭಾರತದಲ್ಲಿ ಈ ಫೋನ್​ಗೆ ಎಷ್ಟು ರೂ. ನೋಡಿ?

ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಗ್ಯಾಲಕ್ಸಿ S23 ಆರಂಭಿಕ ಬೆಲೆ $799 ಅಂದರೆ ಭಾರತದಲ್ಲಿ ಸುಮಾರು 64,950 ರೂ. ಎನ್ನಬಹುದು. ಅಂತೆಯೆ ಗ್ಯಾಲಕ್ಸಿ S23+ ಬೆಲೆ $999 (ಸುಮಾರು 80,000 ರೂ.) ಗ್ಯಾಲಕ್ಸಿ S23 ಆಲ್ಟ್ರಾ ಫೋನಿನ ಡಿಸೈನ್ ಕೂಡ ಸೋರಿಕೆ ಆಗಿದ್ದು ಇದು ಥೇಟ್ ಗ್ಯಾಲಕ್ಸಿ S22 ಆಲ್ಟ್ರಾ ರೀತಿಯಲ್ಲೇ ಇದೆ. ಇದರಲ್ಲಿರುವ ಕ್ವಾಡ್ ಕ್ಯಾಮೆರಾ ಒಂದೇ ಮಾದರಿಯಲ್ಲಿದೆ. ಗ್ಯಾಲಕ್ಸಿ S23 ಮತ್ತು ಗ್ಯಾಲಕ್ಸಿ S23+ ಡಿಸೈನ್​ನಲ್ಲಿ ಕೊಂಚ ಬದಲಾವಣೆ ತರಲಾಗಿದೆ.

Galaxy S23 Series: ಬಹುನಿರೀಕ್ಷಿತ ಗ್ಯಾಲಕ್ಸಿ S23 ಸರಣಿಯ ಬೆಲೆ ಸೋರಿಕೆ: ಭಾರತದಲ್ಲಿ ಈ ಫೋನ್​ಗೆ ಎಷ್ಟು ರೂ. ನೋಡಿ?
Samsung Galaxy S23 Ultra
Edited By:

Updated on: Oct 07, 2026 | 7:05 PM

ಸ್ಯಾಮ್​ಸಂಗ್ ಕಂಪನಿ ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಭರ್ಜರಿ ತಯಾರಿ ನಡೆಸುತ್ತಿದೆ. ಸ್ಯಾಮ್​ಸಂಗ್ ತನ್ನ ಬಹುನಿರೀಕ್ಷಿತ ಗ್ಯಾಲಕ್ಸಿ S23 (Samsung Galaxy S23 Series) ಸರಣಿಯ ಸ್ಮಾರ್ಟ್​​ಫೋನ್ ಅನ್ನು ತಯಾರಿ ಮಾಡುವ ಕಾರ್ಯದಲ್ಲಿರುವ ತೊಡಗಿಕೊಂಡಿದ್ದು ಈ ಬಗ್ಗೆ ಒಂದೊಂದೆ ವಿಚಾರ ಬಹಿರಂಗವಾಗುತ್ತಿದೆ. ಇದು ಕಳೆದ ವರ್ಷ ಫೆಬ್ರವರಿಯಲ್ಲಿ ಅನಾವರಣಗೊಂಡ ಸ್ಯಾಮ್​ಸಂಗ್ ಗ್ಯಾಲಕ್ಸಿ S22 ಸರಣಿಯ ಮುಂದಿನ ಆವೃತ್ತಿಯಾಗಿದೆ. ಗ್ಯಾಲಕ್ಸಿ S22 ಸರಣಿಯಲ್ಲಿ S22 ಆಲ್ಟ್ರಾ ಸ್ಮಾರ್ಟ್​​ಫೋನ್ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಗೊತ್ತೇ ಇದೆ. ಇದರಲ್ಲಿರುವ ಫೀಚರ್ಸ್, ಅದರಲ್ಲೂ 108 ಮೆಗಾಫಿಕ್ಸೆಲ್ ಕ್ಯಾಮೆರಾಕ್ಕೆ ಎಲ್ಲರೂ ಫಿದಾ ಆಗಿದ್ದರು. ಇದೀಗ ಗ್ಯಾಲಕ್ಸಿ S23 ಸರಣಿಯ (Galaxy S23 Ultra) ಬೆಲೆ ಆನ್​ಲೈನ್​ನಲ್ಲಿ ಸೋರಿಕೆ ಆಗಿದೆ.

ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಗ್ಯಾಲಕ್ಸಿ S23 ಆರಂಭಿಕ ಬೆಲೆ $799 ಅಂದರೆ ಭಾರತದಲ್ಲಿ ಸುಮಾರು 64,950 ರೂ. ಎನ್ನಬಹುದು. ಅಂತೆಯೆ ಗ್ಯಾಲಕ್ಸಿ S23+ ಬೆಲೆ $999 (ಸುಮಾರು 80,000 ರೂ.), ಗ್ಯಾಲಕ್ಸಿ S23 ಆಲ್ಟ್ರಾ ಬೆಲೆ $1,199 ಇರಬಹುದು ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಗ್ಯಾಲಕ್ಸಿ S22 ಸರಣಿಗೂ ಹೊಸ ಗ್ಯಾಲಕ್ಸಿ S23 ಸರಣಿಯ ಬೆಲೆಗೂ ಹೆಚ್ಚಿನ ಬದಲಾವಣೆ ಇಲ್ಲವಂತೆ. ಗ್ಯಾಲಕ್ಸಿ S22 ಭಾರತದಲ್ಲಿ 72,999 ರೂ. ಗೆ ಲಾಂಚ್ ಆಗಿತ್ತು.

ಗ್ಯಾಲಕ್ಸಿ S23 ಆಲ್ಟ್ರಾ ಫೋನಿನ ಡಿಸೈನ್ ಕೂಡ ಸೋರಿಕೆ ಆಗಿದ್ದು ಇದು ಥೇಟ್ ಗ್ಯಾಲಕ್ಸಿ S22 ಆಲ್ಟ್ರಾ ರೀತಿಯಲ್ಲೇ ಇದೆ. ಇದರಲ್ಲಿರುವ ಕ್ವಾಡ್ ಕ್ಯಾಮೆರಾ ಒಂದೇ ಮಾದರಿಯಲ್ಲಿದೆ. ಗ್ಯಾಲಕ್ಸಿ S23 ಮತ್ತು ಗ್ಯಾಲಕ್ಸಿ S23+ ಡಿಸೈನ್​ನಲ್ಲಿ ಕೊಂಚ ಬದಲಾವಣೆ ತರಲಾಗಿದೆ. ಇನ್ನು ಗ್ಯಾಲಕ್ಸಿ S23 ಆಲ್ಟ್ರಾದಲ್ಲಿ ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 2 ಪ್ರೊಸೆಸರ್ ಇರಲಿದೆ ಎಂದು ಹೇಳಲಾಗಿದೆ. ಇದು ಅತ್ಯಂತ ಬಲಿಷ್ಠ ಪ್ರೊಸೆಸರ್ ಆಗಿದ್ದು ವೇಗವಾಗಿ ಕಾರ್ಯನಿರ್ವಹಿಸಲಿದೆಯಂತೆ. ಇದರ ಜೊತೆಗೆ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದೊಂದಿಗೆ ಲಾಂಚ್ ಆಗಲಿದೆ ಎನ್ನಲಾಗಿದೆ.

JIO 5G: ಈ 5G ಸ್ಮಾರ್ಟ್​ಫೋನ್​ಗಳಲ್ಲಿ ಜಿಯೋ 5G ಸಪೋರ್ಟ್ ಆಗುವುದಿಲ್ಲ: ನಿಮ್ಮ ಫೋನ್ ಇದೆಯೇ ನೋಡಿ

ಕೊರಿಯಾ ಐಟ ನ್ಯೂಸ್ ಮಾಡಿರುವ ವರದಿ ಪ್ರಕಾರ, ಗ್ಯಾಲಕ್ಸಿ S23 ಆಲ್ಟ್ರಾ 200 ಮೆಗಾಫಿಕ್ಸೆಲ್ ಕ್ಯಾಮೆರಾದಿಂದ ಆವೃತ್ತವಾಗಿದೆ ಎಂದು ಹೇಳಿದೆ. ಈ ಫೋನ್ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಆಗಲಿದೆ. ಇನ್ನೊಂದು ಶಾಕಿಂಗ್ ವಿಚಾರ ಎಂದರೆ S23 ಆಲ್ಟ್ರಾದಲ್ಲಿ ಕ್ವಾಲ್ಕಂ 3D ಸೋನಿಕ್ ಮ್ಯಾಕ್ಸ್ ಫಿಂಗರ್​ಪ್ರಿಂಟ್ ಅಳವಡಿಸಲಾಗಿದೆಯಂತೆ. ಇದರ ಮೂಲಕ ನೀವು ಕ್ಷಣಾರ್ಧದಲ್ಲಿ ಮೊಬೈಲ್ ಅನ್ನು ಅನ್ಲಾಕ್ ಮಾಡಬಹುದು.

ಗ್ಯಾಲಕ್ಸಿ S22 ಅಲ್ಟ್ರಾ ಹೇಗಿದೆ?:

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.8 ಇಂಚಿನ ಎಡ್ಜ್‌ QHD ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು ಜೊತೆಗೆ ಈ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದೆ. ಇದರೊಂದಿಗೆ ಐ ಕಂಫರ್ಟ್ ಶೀಲ್ಡ್‌ ಸೌಲಭ್ಯ ಇದೆ. ಈ ಫೋನ್ ಆಕ್ಟಾ ಕೋರ್ 4 nm SoC ಪ್ರೊಸೆಸರ್‌ ಬೆಂಬಲ ಹೊಂದಿದ್ದು, 12 GB RAM ಮತ್ತು ವೇರಿಯಂಟ್ ಆಯ್ಕೆ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಪಡೆದಿದೆ.

ಈ ಫೋನ್ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಜೊತೆಗೆ 12MP+ 10MP+ 10MP ಸ್ಪೋರ್ಟ್ಸ್ ಕ್ಯಾಮೆರಾ ನೀಡಲಾಗಿದೆ. 40 ಮೆಗಾಫಿಕ್ಸೆಲ್​ನ ಸೆಲ್ಫೀ ಕ್ಯಾಮೆರಾ ಕೂಡ ಇದೆ. 100X ಜೂಮ್ ಫೀಚರ್ ಇದರ ಹೈಲೇಟ್. ಹಾಗೆಯೇ ಈ ಫೋನ್ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 45W ಫಾಸ್ಟ್‌ ಚಾರ್ಜಿಂಗ್ ಬೆಂಬಲ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಅನ್ನು ಸಹ ಬೆಂಬಲಿಸುತ್ತದೆ.

Published On - 11:54 am, Sat, 21 January 23

TV9 Web

TV9 Kannada

Read More
Loading...
Unable to load recommendations.
Follow Us