ನವದೆಹಲಿ, ಮೇ 26: ವೇಗವಾಗಿ ಪ್ರಗತಿ ಹೊಂದುತ್ತಿರುವ ಭಾರತದ ಆರ್ಥಿಕತೆಯಲ್ಲಿ ಅಸಮಾನ ಬೆಳವಣಿಗೆಯೂ (inequal growth) ಆಗುತ್ತಿದೆ. ಭಾರತ ವಿಶ್ವದಲ್ಲೇ ಐದನೇ ಅತಿದೊಡ್ಡ ಆರ್ಥಿಕ ದೇಶವಾದರೂ ತಲಾದಾಯದ (per capita income) ವಿಚಾರಕ್ಕೆ ಬಂದರೆ ಪಾಕಿಸ್ತಾನದ ಮಟ್ಟದಲ್ಲೇ ಇದೆ. ಶ್ರೀಮಂತಿಕೆಯ ಪಟ್ಟಿ ಮಾಡಿದರೆ ಮೇಲಿನ ಶೇ. 1ರಷ್ಟು ಜನರ ಬಳಿಯೇ ಬಹುಭಾಗದ ಸಂಪತ್ತು ಇದೆ ಎಂದು ಹಲವು ವರದಿಗಳು ಹೇಳುತ್ತಿವೆ. ಇನ್ನು, ಭಾರತದಲ್ಲಿ ಪ್ರಗತಿಯಲ್ಲಿ ಪ್ರಾದೇಶಿಕವಾರು ಅಸಮಾನತೆ (regional inequality) ಇದೆ. ದಕ್ಷಿಣ ರಾಜ್ಯಗಳು ಸರಾಸರಿಯಾಗಿ ಹೆಚ್ಚು ಆದಾಯ ಹೊಂದಿವೆ. ಇನ್ನು, ನಗರಗಳನ್ನು ಗಣನೆಗೆ ತೆಗೆದುಕೊಂಡಾಗ ದೇಶಾದ್ಯಂತ ಇರುವ 700ಕ್ಕೂ ಹೆಚ್ಚು ಜಿಲ್ಲೆಗಳ ಪೈಕಿ 13 ಜಿಲ್ಲೆ ಅಥವಾ ನಗರಗಳಲ್ಲಿ ಶೇ. 50ರಷ್ಟು ಜಿಡಿಪಿ ನಿಂತಿದೆ ಎನ್ನುವಂತಹ ಅಚ್ಚರಿಯ ಅಂಕಿ ಅಂಶವನ್ನು ಪತ್ರಕರ್ತ ಪಂಕಜ್ ಪಚೋರಿ ತೆರೆದಿಟ್ಟಿದ್ದಾರೆ.
ಭಾರತದ ಅರ್ಧದಷ್ಟು ಜಿಡಿಪಿ 13 ನಗರಗಳಲ್ಲಿ ಕೇಂದ್ರಿತವಾಗಿದೆ. ಭವಿಷ್ಯದ ಸಂಪತ್ತಿನ ಸೃಷ್ಟಿ ಅಥವಾ ಮರುಹಂಚಿಕೆ ಹೆಚ್ಚು ವ್ಯಾಪಕವಾಗಿರಬೇಕು. ಇದರಿಂದ ವಲಸೆ ತಪ್ಪಿಸಬಹುದು, ಪ್ರಾದೇಶಿಕ ಅತ್ಮವಿಶ್ವಾಸ ಹೆಚ್ಚುತ್ತದೆ. ರಾಷ್ಟ್ರೀಯ ಐಕ್ಯತೆಗೆ ಉತ್ತೇಜನ ಸಿಗುತ್ತದೆ ಎಂದು ಪಂಕಜ್ ಪಚೋರಿ ಅಭಿಪ್ರಾಯಪಟ್ಟಿದ್ದಾರೆ.
2020-21ರಲ್ಲಿ ಸರ್ಕಾರ ಅಂದಾಜು ಮಾಡಿದ ಜಿಲ್ಲಾ ಜಿಡಿಪಿ ಅಂಕಿ ಅಂಶ ಪ್ರಕಾರ ಮುಂಬೈ, ದೆಹಲಿ, ಕೋಲ್ಕತಾ ಟಾಪ್ 3 ರಾಜ್ಯಗಳಾಗಿವೆ. ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಭಾರತದ ಷೇರು ಮಾರುಕಟ್ಟೆಯ ಈ ಸ್ಫೋಟಕ ಬೆಳವಣಿಗೆ ಯಾಕಾಗುತ್ತಿದೆ, ಹೇಗಾಗುತ್ತಿದೆ?
ಪಂಕಜ್ ಪಚೋರಿ ಅವರ ಈ ಎಕ್ಸ್ ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಕೆಲವರು ಈ ಅಂಕಿ ಅಂಶವನ್ನು ವಿರೋಧಿಸಿದ್ದಾರೆ. ವಿಶ್ವದ ಯಾವುದೇ ದೇಶ ನೋಡಿದರೂ ಈ ರೀತಿಯ ಅಸಮಾನ ಚಿತ್ರಣ ಕಾಣಬಹುದು. ಅಮೆರಿಕದ 50 ರಾಜ್ಯಗಳಲ್ಲಿ ಏಳು ರಾಜ್ಯಗಳು ಜಿಡಿಪಿಗೆ ಕೊಡುತ್ತಿರುವ ಕೊಡುಗೆ ಶೇ. 50ರಷ್ಟಿದೆ ಎಂದು ಒಬ್ಬರು ಕಾಮೆಂಟಿಸಿದ್ದಾರೆ.
Sunday Surprise:
Half of India’s GDP is concentrated in 13 districts/cities.
Creation or redistribution of future wealth should be diverse. It will stem migration, increase regional self confidence and spur national integration.
What do you think? pic.twitter.com/QhcRhIsp3V— Pankaj Pachauri (@PankajPachauri) May 26, 2024
ಜಾಗತಿಕವಾಗಿ ಶೇ. 60ರಷ್ಟು ಸಂಪತ್ತು ಒಂದು ಸಾವಿರ ನಗರಗಳಲ್ಲಿ ಕೇಂದ್ರಿತವಾಗಿದೆ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Sun, 26 May 24