Central Government Employees: ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಪರಿಷ್ಕೃತ ಡಿ.ಎ. ಘೋಷಣೆ

| Updated By: Srinivas Mata

Updated on: Aug 20, 2021 | 11:53 AM

ಕೇಂದ್ರ ಸರ್ಕಾರದಿಂದ ಈ ಉದ್ಯೋಗಿಗಳಿಗಾಗಿ ಡಿ.ಎ. ಪರಿಷ್ಕೃತ ದರವನ್ನು ಘೋಷಣೆ ಮಾಡಲಾಗಿದೆ. ಯಾವ ಉದ್ಯೋಗಿಗಳು ಮತ್ತು ಎಷ್ಟು ಪರಿಷ್ಕರಣೆ ಎಂಬ ವಿವರ ಇಲ್ಲಿದೆ.

Central Government Employees: ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಪರಿಷ್ಕೃತ ಡಿ.ಎ. ಘೋಷಣೆ
ಪ್ರಾತಿನಿಧಿಕ ಚಿತ್ರ
Follow us on

ಆರನೇ ವೇತನ ಆಯೋಗ ಮತ್ತು ಐದನೇ ವೇತನ ಆಯೋಗದ ಶಿಫಾರಸಿನಂತೆ ಈಗಲೂ ತಮ್ಮ ವೇತನ ಪಡೆಯುತ್ತಿರುವ ಕೇಂದ್ರ ಸರ್ಕಾರಿ ಮತ್ತು ಕೇಂದ್ರ ಕೇಂದ್ರ ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿನ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಪರಿಷ್ಕೃತ ತುಟ್ಟಿ ಭತ್ಯೆ (Dearness Allowance- DA) ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳ ಈ ಸಿಬ್ಬಂದಿಗೆ ಪರಿಷ್ಕೃತ ಡಿ.ಎ. ಅನ್ನು ಜುಲೈ 1, 2021ರಿಂದ ಅನ್ವಯ ಆಗುವಂತೆ ನೀಡಲಾಗುವುದು. ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಈ ಬಗ್ಗೆ ಹೊರಡಿಸಿದ ಕಚೇರಿ ಸುತ್ತೋಲೆಯಲ್ಲಿ ಇದನ್ನು ತಿಳಿಸಲಾಗಿದೆ.

ಈ ನಿರ್ಧಾರದ ಬಗ್ಗೆ ತಿಳಿಸುತ್ತಾ ವೆಚ್ಚ ಇಲಾಖೆಯು ತಿಳಿಸಿರುವಂತೆ, ಮೇಲ್ಕಂಡ ವಿಭಾಗದಲ್ಲಿ ಬರುವ ಉದ್ಯೋಗಿಗಳಿಗೆ ಅನ್ವಯಿಸುತ್ತಿರುವ ತುಟ್ಟಿ ಭತ್ಯೆಯ ದರವು (ಆರನೇ ವೇತನ ಆಯೋಗದ ಮುಂಚಿತವಾಗಿ ಪಡೆಯುತ್ತಿದ್ದ ಸಂಬಳ) ಸದ್ಯಕ್ಕೆ ಇರುವ ಮೂಲವೇತನದ ಶೇ 164ರಷ್ಟು ಇರುವುದು ಶೇ 189ಕ್ಕೆ ವಿಸ್ತರಣೆಯಾಗಿದ್ದು, ಜುಲೈ 1, 2021ರಿಂದ ಜಾರಿ ಆಗುತ್ತದೆ ಎಂದು ಹೇಳಲಾಗಿದೆ.

ಈ ಕಚೇರಿ ಸುತ್ತೋಲೆಯಲ್ಲಿ ಮತ್ತೂ ಮುಂದುವರಿದು, ಮೇಲ್ಕಂಡ ವಿಭಾಗದಲ್ಲಿ ಬರುವ ಉದ್ಯೋಗಿಗಳಿಗೆ ಅನ್ವಯಿಸುತ್ತಿರುವ ತುಟ್ಟಿ ಭತ್ಯೆಯ ದರವು (ಐದನೇ ವೇತನ ಆಯೋಗದ ಮುಂಚಿತವಾಗಿ ಪಡೆಯುತ್ತಿದ್ದ ಸಂಬಳ) ಸದ್ಯಕ್ಕೆ ಇರುವ ಮೂಲವೇತನದ ಶೇ 312ರಷ್ಟು ಇರುವುದು ಶೇ 356ಕ್ಕೆ ವಿಸ್ತರಣೆಯಾಗಿದ್ದು, ಜುಲೈ 1, 2021ರಿಂದ ಜಾರಿ ಆಗುತ್ತದೆ ಎಂದು ಹೇಳಲಾಗಿದೆ.

ವೆಚ್ಚ ಇಲಾಖೆಯು ಸ್ಪಷ್ಟಪಡಿಸಿರುವಂತೆ, 1.1.2020, 1.7.2020 ಮತ್ತು 1.1.2021ರ ಹೆಚ್ಚುವರಿಯಾಗಿ ಉದ್ಭವಿಸುವ ಕಂತಿನಲ್ಲೇ ತುಟ್ಟಿ ಭತ್ಯೆ ದರವು ಸೇರಿಹೋಗುತ್ತದೆ. ಇನ್ನು ವಿವರಣೆ ನೀಡಿರುವಂತೆ, ಜನವರಿ 1, 2020ರಿಂದ ಜೂನ್ 30, 2021ರ ತನಕದ ಅವಧಿಗೆ ಐದನೇ ವೇತನ ಆಯೋಗದ ಉದ್ಯೋಗಿಗಳಿಗೆ ಕ್ರಮವಾಗಿ ಶೇ 312 ಮತ್ತು ಶೇ 164 ಆಗುತ್ತದೆ. ಅದರರ್ಥ ಏನೆಂದರೆ, ಜನವರಿ 1, 2020ರಿಂದ ಜೂನ್ 30, 2021ರ ತನಕದ ಅವಧಿಯ ಬಾಕಿ ಡಿ.ಎ. ಪಾವತಿ ಮಾಡುವುದಿಲ್ಲ.

ಇದನ್ನೂ ಓದಿ: DA News Today: ಕೇಂದ್ರ ಸರ್ಕಾರಿ ನೌಕರರು, ಪೆನ್ಷನರ್ಸ್​ಗಳಿಗೆ ಡಿಎ, ಡಿಆರ್ ಹೆಚ್ಚಳಕ್ಕೆ ಅನುಮತಿ; ಶೇ 17ರಿಂದ 28ಕ್ಕೆ ಏರಿಕೆ

(These Central Government Employees DA Revision Announced By Finance Ministry Expenditure Department )