Multibagger: ಐದೂವರೆ ತಿಂಗಳಲ್ಲಿ ಶೇ 221ರಷ್ಟು ಬೆಳೆದ ಈ ಮಲ್ಟಿಬ್ಯಾಗರ್ ರಿಫೈನರಿ ಕಂಪೆನಿ ಷೇರಿನ ಬಗ್ಗೆ ಗೊತ್ತೆ?

ಈ ರಿಫೈನಿಂಗ್ ವಲಯದ ಮಲ್ಟಿಬ್ಯಾಗರ್ ಸ್ಟಾಕ್ 2022ನೇ ಇಸವಿಯ ಐದೂವರೆ ತಿಂಗಳಲ್ಲಿ ಶೇ 221ರಷ್ಟು ರಿಟರ್ನ್ಸ್ ನೀಡಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Multibagger: ಐದೂವರೆ ತಿಂಗಳಲ್ಲಿ ಶೇ 221ರಷ್ಟು ಬೆಳೆದ ಈ ಮಲ್ಟಿಬ್ಯಾಗರ್ ರಿಫೈನರಿ ಕಂಪೆನಿ ಷೇರಿನ ಬಗ್ಗೆ ಗೊತ್ತೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 20, 2022 | 6:47 AM

ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಮೇ 19, 2022ರ ಗುರುವಾರದಂದು ಇಂಟ್ರಾ ಡೇ ವಹಿವಾಟಿನಲ್ಲಿ 52 ವಾರಗಳ ಗರಿಷ್ಠ ಮಟ್ಟವಾದ 329.45 ರೂಪಾಯಿ ಮುಟ್ಟಿತು. ಆ ಮೂಲಕ ಈ ಮಲ್ಟಿಬ್ಯಾಗರ್ (Multibagger) ಹೊಸ ದಾಖಲೆ ಬರೆಯಿತು. ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಮಾರಾಟದ ಹಿನ್ನೆಲೆಯಲ್ಲಿ ದೇಶೀಯವಾಗಿಯೂ ಷೇರುಪೇಟೆಯಲ್ಲಿ ತೀವ್ರ ಕುಸಿತ ದಾಖಲಿಸಿದ ಹೊರತಾಗಿಯೂ ಈ ದಾಖಲೆ ಆಯಿತು. ಇಯರ್ ಟು ಡೇಟ್ (YTD), ಈ ವರ್ಷದಲ್ಲಿ ಜನವರಿ 1ರಿಂದ ಇಲ್ಲಿಇ ತನಕ ಈ ಸ್ಟಾಕ್ ಅದ್ಭುತವಾದ ರಿಟರ್ನ್ ಶೇ 221ರಷ್ಟು ನೀಡಿದೆ. ಇನ್ನು 1 ತಿಂಗಳ ರಿಟರ್ನ್ಸ್ ಶೇ 67.4ರಷ್ಟು ನೀಡಿದೆ. ಅದೇ ನಿಫ್ಟಿ ಸೂಚ್ಯಂಕವನ್ನು ಗಮನಿಸಿದರೆ ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಶೇ 8.5ರ ತನಕ ಕುಸಿತ ಕಂಡಿದ್ದು, ಕೇವಲ ಒಂದು ತಿಂಗಳ ಸಮಯದಲ್ಲಿ ಶೇ 6ರಷ್ಟು ನೆಲ ಕಚ್ಚಿದೆ.

ಐಇಎ ದೃಷ್ಟಿಕೋನದಂತೆ, ಉಕ್ರೇನ್- ರಷ್ಯಾ ಬಿಕ್ಕಟ್ಟಿನ ಮಧ್ಯೆ ರಿಫೈನಿಂಗ್ ಉತ್ಪಾದನೆಯಲ್ಲಿ 1.1 ಎಂಎನ್​ಬಿಒಪಿಡಿ ಹಿನ್ನಡೆ ಆಗಿದೆ. ಆದ್ದರಿಂದ ಸದ್ಯದ ಸನ್ನಿವೇಶದಲ್ಲಿ ಪೂರೈಕೆ ಸ್ಥಿತಿ ಸುಧಾರಣೆ ಕಾಣುವ ತನಕ ರಿಫೈನಿಂಗ್ ಮಾರ್ಜಿನ್ ಸನ್ನಿವೇಶ ಹೆಚ್ಚಿಗೆ ಇರಲಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಇದ್ದಂತೆ, ಸಿಂಗಾಪೂರ ಜಿಆರ್​ಎಂ ಅಥವಾ ಗ್ರಾಸ್ ರಿಫೈನಿಂಗ್ ಮಾರ್ಜಿನ್ 4 ವರ್ಷದ ಗರಿಷ್ಠ ಮಟ್ಟವಾದ ಬ್ಯಾರೆಲ್​ಗೆ 7.8 ಯುಎಸ್​ಡಿ ಮುಟ್ಟಿತ್ತು. ಯಾವ ಕಂಪೆನಿಗಳು ಕೇವಲ ರಿಫೈನಿಂಗ್​ನಲ್ಲಿ ತೊಡಗಿರುತ್ತವೋ, ಅಂದರೆ ಮಾರ್ಕೆಟಿಂಗ್​ನಲ್ಲಿ ಇರುವುದಿಲ್ಲವೋ, ಅಂದರೆ ಚೆನ್ನೈ ಪೆಟ್ರೋಲಿಯಂನಂಥ ಕಂಪೆನಿಗಳ ಮಾರ್ಜಿನ್ ಮೇಲೆ ಈಗಿನ ಸನ್ನಿವೇಶ ಉತ್ತಮವಾಗಿದೆ. ಜತೆಗೆ, ನಾಲ್ಕನೇ ತ್ರೈಮಾಸಿಕ ಹೊರತುಪಡಿಸಿ, ಹಣಕಾಸು ವರ್ಷ 2023ರ ಮೊದಲನೇ ತ್ರೈಮಾಸಿಕ ಸಹ ಪ್ರಮುಖ ರಿಫೈನಿಂಗ್ ಕಂಪೆನಿಗಳಿಗೆ ಭರವಸೆದಾಯಕವಾಗಿದೆ.

ಈಚಿನ ಮಾರ್ಚ್ ತ್ರೈಮಾಸಿಕ ಕೊನೆಗೆ ಚೆನ್ನೈ ತ್ರೈಮಾಸಿಕದ ಆದಾಯವು ವರ್ಷದಿಂದ ವರ್ಷಕ್ಕೆ ಹತ್ತಿರ ಹತ್ತಿರ ದುಪ್ಪಟ್ಟು ಆಗಿ, 16,413 ಕೋಟಿ ರೂಪಾಯಿ ಆಗಿತ್ತು. ಇನ್ನು ನಿವ್ವಳ ಲಾಭವು ಸಹ ವರ್ಷದಿಂದ ವರ್ಷಕ್ಕೆ ಕಳೆದ ವರ್ಷದ ಇದೇ ಅವಧಿಯಲ್ಲಿ ಇದ್ದ 231.79 ಕೋಟಿ ರೂಪಾಯಿಯಿಂದ ಈ ಬಾರಿಗೆ 994.42 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಅಂದಹಾಗೆ ಈ ಷೇರನ್ನು ಕಳೆದ ತಿಂಗಳು ಸೆಲೆಬ್ರಿಟಿ ಹೂಡಿಕೆದಾರ ಡಾಲಿ ಖನ್ನಾ ಬಲ್ಕ್ ಡೀಲ್​ನಲ್ಲಿ ತಲಾ 263.15 ರೂಪಾಯಿಯಂತೆ 10 ಲಕ್ಷ ಷೇರುಗಳನ್ನು 26.31 ಕೋಟಿಗೆ ಖರೀದಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Multibagger Stocks: ಏನಿದು ಮಲ್ಟಿಬ್ಯಾಗರ್ ಸ್ಟಾಕ್? ಇದನ್ನು ಗುರುತಿಸುವುದು ಹೇಗೆ ತಿಳಿಯಿರಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ