News9 Summit: ಭಾರತಕ್ಕೆ ಜಾಗತಿಕ ಧ್ವನಿಯಾಗಿದೆ ಟಿವಿ9: ನ್ಯೂಸ್9 ಗ್ಲೋಬಲ್ ಸಮಿಟ್​​ಗೆ ಚಾಲನೆ ಕೊಟ್ಟ ಟಿವಿ9 ನೆಟ್ವರ್ಕ್ ಎಂಡಿ ಬರುಣ್ ದಾಸ್

TV9 Network MD & CEO Barun Das at News9 Global Summit: ಎರಡನೇ ಆವೃತ್ತಿಯ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮ ಜೂನ್ 19ರಂದು ಯುಎಇಯಲ್ಲಿ ಚಾಲನೆಗೊಂಡಿದೆ. ಮೊದಲ ಆವೃತ್ತಿಯು 2024ರಲ್ಲಿ ಜರ್ಮನಿಯಲ್ಲಿ ನಡೆದಿತ್ತು. ಯುಎಇಯಲ್ಲಿನ ಗ್ಲೋಬಲ್ ಸಮಿಟ್ ಕಾರ್ಯಕ್ರಮಕ್ಕೆ ಟಿವಿ9 ನೆಟ್ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ಚಾಲನೆ ನೀಡಿದರು. ಸ್ವಾಗತ ಭಾಷಣ ಮಾಡಿದ ಅವರು ಭಾರತ ಮತ್ತು ಯುಎಇ ನಡುವಿನ ವ್ಯಾಪಾರ ಸಂಬಂಧ ಮತ್ತು ನಾಯಕತ್ವವನ್ನು ಶ್ಲಾಘಿಸಿದರು.

News9 Summit: ಭಾರತಕ್ಕೆ ಜಾಗತಿಕ ಧ್ವನಿಯಾಗಿದೆ ಟಿವಿ9: ನ್ಯೂಸ್9 ಗ್ಲೋಬಲ್ ಸಮಿಟ್​​ಗೆ ಚಾಲನೆ ಕೊಟ್ಟ ಟಿವಿ9 ನೆಟ್ವರ್ಕ್ ಎಂಡಿ ಬರುಣ್ ದಾಸ್
ಬರುಣ್ ದಾಸ್

Updated on: Jun 19, 2025 | 12:24 PM

ದುಬೈ, ಜೂನ್ 19: ಟಿವಿ9 ನೆಟ್ವರ್ಕ್ ವತಿಯಿಂದ ಇಂದು ಯುಎಇ ಆವೃತ್ತಿಯ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮ (News9 Global Summit 2025) ಚಾಲನೆಗೊಂಡಿದೆ. ಟಿವಿ9 ನೆಟ್ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ (Barun Das) ಈ ಸಮಿಟ್​​​ಗೆ ಚಾಲನೆ ನೀಡಿದರು. ಸ್ವಾಗತ ಭಾಷಣ ಮಾಡಿದ ಬರುಣ್ ದಾಸ್, ಭಾರತ ಮತ್ತು ಯುಎಇ ನಡುವಿನ ಸಂಬಂಧ ಎಷ್ಟು ಪ್ರಬಲವಾಗಿದೆ. ಈ ಸಮಿಟ್ ಯಾಕೆ ಮಹತ್ವದ್ದಾಗಿದೆ ಎಂದು ವಿವರಿಸಿದರು.

ಭಾರತದ ಬಗ್ಗೆ ಜಾಗತಿಕವಾಗಿ ತಪ್ಪಾದ ಸಂಗತಿಗಳು ಬಿಂಬಿತವಾಗುತ್ತಿವೆ. ಭಾರತಕ್ಕೆ ಈಗ ಪ್ರಬಲ ಜಾಗತಿಕ ಧ್ವನಿಯ ಅಗತ್ಯತೆ ಇದೆ. ಟಿವಿ9 ನೆಟ್ವರ್ಕ್ ಈ ಜವಾಬ್ದಾರಿ ತೆಗೆದುಕೊಂಡಿದೆ ಎಂದು ಬರುಣ್ ದಾಸ್ ಈ ಸಂದರ್ಭದಲ್ಲಿ ಹೇಳಿದರು.

ಯುಎಇ ಭಾರತದ ಪ್ರಮುಖ ಟ್ರೇಡಿಂಗ್ ಪಾರ್ಟ್ನರ್ ಆಗಿದೆ. ಗ್ಲೋಬಲ್ ಸೌತ್​​ನಲ್ಲಿ ಭಾರತಕ್ಕೆ ಅದು ಆಪ್ತ ದೇಶವಾಗಿದೆ ಎಂದು ಟಿವಿ9 ನೆಟ್ವರ್ಕ್ ಸಿಇಒ ಅಭಿಪ್ರಾಯಪಟ್ಟರು. ನಾಯಕನ ಮನಸ್ಥಿತಿಯನ್ನು ತಂಡವು ಪ್ರತಿನಿಧಿಸುತ್ತದೆ. ಭಾರತ ಮತ್ತು ಯುಎಇ ನಾಯಕತ್ವ ಇದಕ್ಕೆ ದ್ಯೋತಕವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಯುಎಇಯಲ್ಲಿ ನ್ಯೂಸ್9 ಗ್ಲೋಬಲ್ ಸಮಿಟ್; ಇಲ್ಲಿದೆ ಕಾರ್ಯಕ್ರಮದ ವಿವರ

ಹಲವು ಸವಾಲುಗಳ ನಡುವೆಯೂ ಯುಎಇ ಪ್ರಗತಿಗೆ ಒತ್ತು ಕೊಟ್ಟು ಬೆಳವಣಿಗೆ ಕಂಡಿದೆ. ಹಿಂದೆ ಯುಎಇ ಭಾರತಕ್ಕೆ ಪ್ರಮುಖ ಪಾರ್ಟ್ನರ್ ಆಗಿರಲಿಲ್ಲ. ಆದರೆ, ಕಳೆದ 10 ವರ್ಷದಲ್ಲಿ ಬದಲಾವಣೆ ಆಗಿದೆ. ಭಾರತ ಮತ್ತು ಯುಎಇ ನಡುವೆ ಮೈತ್ರಿ ಪ್ರಬಲಗೊಂಡಿದೆ ಎಂದು ಅವರು ತಿಳಿಸಿದರು.

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಭೇಟಿ ನೀಡಿದಾಗ ಬಹಳ ಜನರು ಅಚ್ಚರಿ ಪಟ್ಟಿದ್ದರು. 34 ವರ್ಷದಲ್ಲಿ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಯುಎಇಗೆ ಹೋಗಿದ್ದರು. ಆದರೆ, ಭಾರತಕ್ಕೆ ಯುಎಇ ಎಷ್ಟು ಪ್ರಮುಖ ಎನ್ನುವ ಸಂದೇಶವನ್ನು ಅಂದು ಮೋದಿ ಸಾರಿ ಹೇಳಿದ್ದರು. ಅವರ ಆಶಯದಂತೆ ಎರಡೂ ದೇಶಗಳ ನಡುವಿನ ಸಂಬಂಧ ಗಾಢವಾಗಿದೆ ಎಂದು ಬರುಣ್ ದಾಸ್ ಹೇಳಿದರು.

ಈ ಬಾರಿಯ ನ್ಯೂಸ್9 ಗ್ಲೋಬಲ್ ಸಮಿಟ್​​ನ ಥೀಮ್ ‘ಭಾರತ-ಯುಎಇ: ಸಮೃದ್ಧಿ ಮತ್ತು ಪ್ರಗತಿಗೆ ಜೊತೆಗಾರಿಕೆ’ ಎಂದು ಇಡಲಾಗಿದೆ. ಈ ಸಮಿಟ್​​ನಲ್ಲಿ ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಮಾತನಾಡಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:12 pm, Thu, 19 June 25