TV9 Travel and Tourism Summit: ಭಾರತದ ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡುವ ಟಿವಿ9 ಪ್ರವಾಸ ಶೃಂಗಸಭೆ

TV9 Travel and Tourism Summit: Icon Awards 2025: ಟಿವಿ9 ನೆಟ್ವರ್ಕ್ ವತಿಯಿಂದ ಮತ್ತೊಂದು ಮಹತ್ವದ ಶೃಂಗಸಭೆ ನಡೆಯಿತು. ಟಿವಿ9 ಟ್ರಾವಲ್ ಮತ್ತು ಟೂರಿಸಂ ಸಮಿಟ್ 2025 ಸಾಕಷ್ಟು ಗಮನ ಸೆಳೆದಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಗಣ್ಯರು, ಉದ್ಯಮಿಗಳು ಈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇತರ ಹಲವು ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಪ್ರವಾಸೋದ್ಯಮ ಶಕ್ತಿ ಎಷ್ಟು ದೊಡ್ಡದು ಎಂಬುದನ್ನು ವಿಶದಪಡಿಸಲಾಯಿತು.

TV9 Travel and Tourism Summit: ಭಾರತದ ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡುವ ಟಿವಿ9 ಪ್ರವಾಸ ಶೃಂಗಸಭೆ
ಟಿವಿ9 ಟ್ರಾವಲ್ ಅಂಡ್ ಟೂರಿಸಂ ಸಮಿಟ್

Updated on: Aug 26, 2025 | 4:41 PM

ನವದೆಹಲಿ, ಆಗಸ್ಟ್ 26: ವೈವಿಧ್ಯಮಯ ಸಮಾಜ, ಸಂಸ್ಕೃತಿ, ಸಂಪ್ರದಾಯಗಳ ನೆಲವೀಡಾದ ಭಾರತವು ವಿವಿಧತೆಯಲ್ಲಿ ಏಕತೆ ಸಾಧಿಸುವುದಕ್ಕೆ ಉತ್ತಮ ಮಾದರಿ ಎನಿಸಿದೆ. ಪ್ರತಿಯೊಂದು ರಾಜ್ಯದ್ದೂ ವಿಭಿನ್ನ ಸಂಸ್ಕೃತಿ. ರಾಜ್ಯಗಳ ಪ್ರತಿಯೊಂದು ಜಿಲ್ಲೆಯಲ್ಲೂ ವಿಭಿನ್ನ ಆಚಾರ ವಿಚಾರ, ಪರಂಪರೆ. ಭಾರತದ ಪ್ರವಾಸೀ ಸ್ಥಳಗಳೂ ಕೂಡ ಪ್ರತೀ ರಾಜ್ಯದಲ್ಲಿ ಹೇರಳವಾಗಿವೆ. ಒಂದೊಂದು ರಾಜ್ಯದಲ್ಲೂ ಅದ್ಭುತವಾದ ಪ್ರವಾಸೀ ಸ್ಥಳಗಳಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಪ್ರವಾಸೋದ್ಯಮ ಅಮೋಘವಾಗಿ ಬೆಳೆದಿದೆ. ಈ ಹಿನ್ನೆಲೆಯಲ್ಲಿ ‘ಟಿವಿ9 ನೆಟ್ವರ್ಕ್ ಪ್ರಯಾಣ ಮತ್ತು ಪ್ರವಾಸೋದ್ಯಮ ಶೃಂಗಸಭೆ: ಅವಾರ್ಡ್ಸ್ 2025’ (TV9 Network Travel and Tourism Summit: Iconic Awards 2025) ಕಾರ್ಯಕ್ರಮ ಗಮನ ಸೆಳೆಯಿತು.

ದೇಶದ ಪ್ರವಾಸೋದ್ಯಮ ವಲಯ ಇತ್ತೀಚಿನ ವರ್ಷಗಳಲ್ಲಿ ಸಾಧಿಸಿದ ಬೆಳವಣಿಗೆಯನ್ನು ಈ ಸಮಿಟ್​ನಲ್ಲಿ ಗುರುತಿಸಲಾಯಿತು. ಬಹಳ ವೇಗವಾಗಿ ಬೆಳೆಯುತ್ತಿರುವ ಈ ಉದ್ಯಮದ ಈಗಿನ ಮತ್ತು ಭವಿಷ್ಯದ ಸ್ಥಿತಿ ಬಗ್ಗೆ ಈ ಸಮಿಟ್​ನಲ್ಲಿ ಚರ್ಚೆ, ವಿಚಾರ ವಿನಿಮಯಗಳಾದವು. ಈ ಕ್ಷೇತ್ರದ ಹಲವು ಗಣ್ಯರು ಈ ಸಂವಾದದಲ್ಲಿ ಪಾಲ್ಗೊಂಡರು.

ಇದನ್ನೂ ಓದಿ: ಭಾರತದ ಇವಿ ಕ್ಷೇತ್ರಕ್ಕೆ ಮಹತ್ವದ ದಿನ; ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ತಯಾರಿಕೆ; ಇ-ವಿಟಾರಾದ ಜಾಗತಿಕ ರಫ್ತಿಗೆ ಚಾಲನೆ

ಆಂತರಿಕ ಪ್ರವಾಸೋದ್ಯಮವೇ ಭಾರತದ ಅತಿದೊಡ್ಡ ಶಕ್ತಿ: ಶೆಖಾವತ್

ಭಾರತದ ಪ್ರವಾಸೋದ್ಯಮದ ಅತಿದೊಡ್ಡ ಶಕ್ತಿಯೇ ಅದರ ಆಂತರಿಕ ಪ್ರವಾಸೋದ್ಯಮ. ಈ ವಿಚಾರದಲ್ಲಿ ಬೇರೆ ದೇಶಗಳಿಗಿಂತ ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಈ ಟಿವಿ9 ಸಮಿಟ್​ನಲ್ಲಿ ತಿಳಿಸಿದರು.

ಟಿವಿ9 ಪ್ರವಾಸೋದ್ಯಮ ಶೃಂಗಸಭೆಯಲ್ಲಿ ಐಕಾನಿಕ್ ಅವಾರ್ಡ್ಸ್ ಕಾರ್ಯಕ್ರಮದ ಝಲಕ

ದುಬೈ, ಸಿಂಗಾಪುರ್, ಥಾಯ್ಲೆಂಡ್ ಮೊದಲಾದ ದೇಶಗಳಲ್ಲಿ ಅಂತಾರಾಷ್ಟ್ರೀಯ ಪ್ರವಾಸಿಗರು ಹೆಚ್ಚಿರುತ್ತಾರೆ. ಭಾರತಕ್ಕೆ ಹೋಲಿಸಿದರೆ ಈ ದೇಶಗಳಲ್ಲಿ ದೇಶೀಯ ಪ್ರವಾಸಿಗರ ಪ್ರಮಾಣ ಕಡಿಮೆ ಎಂದು ಸಚಿವ ಶೆಖಾವತ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಮೋದಿ ಭೇಟಿ ವೇಳೆ 6 ಲಕ್ಷ ಕೋಟಿ ರೂ ಹೂಡಿಕೆ ಪ್ರಕಟಿಸಲಿದೆ ಜಪಾನ್

ಭಾರತದ ಪ್ರಗತಿಯಲ್ಲಿ ಪ್ರವಾಸೋದ್ಯಮ ಪಾತ್ರ ಮಹತ್ವ: ಅಮಿತಾಭ್ ಕಾಂತ್

ಟಿವಿ9 ಟ್ರಾವಲ್ ಅಂಡ್ ಟೂರಿಸಂ ಸಮಿಟ್​ನಲ್ಲಿ ಪಾಲ್ಗೊಂಡದ್ದ ಮಾಜಿ ನೀತಿ ಆಯೋಗ್ ಸಿಇಒ ಅಮಿತಾಭ್ ಕಾಂತ್, ಭಾರತದ ಭವಿಷ್ಯದ ಬೆಳವಣಿಗೆಗೆ ಪ್ರವಾಸೋದ್ಯಮವು ಅತಿದೊಡ್ಡ ಯಂತ್ರವೆನಿಸಿದೆ ಎಂದರು. ಈ ಸೆಕ್ಟರ್ 25 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿದೆ. 2047ರೊಳಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಪ್ರಧಾನಿ ಗುರಿ ಈಡೇರಿಕೆಗೆ ಪ್ರವಾಸೋದ್ಯಮ ಕ್ಷೇತ್ರದ ಪಾತ್ರ ಮಹತ್ವದ್ದಿದೆ ಎಂದು ಭಾರತದ ಜಿ20 ಶೆರ್ಪಾ ಕೂಡ ಆಗಿದ್ದ ಅಮಿತಾಭ್ ಕಾಂತ್ ತಿಳಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ