ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವುದಕ್ಕಾಗಿ ರಷ್ಯಾ (Russia- Ukraine Crisis) ಜಾಗತಿಕವಾಗಿ ಖಂಡನೆಯನ್ನು ಎದುರಿಸುತ್ತಿದೆ. ಈ ಕೋಪವು ಪಾಶ್ಚಾತ್ಯ ದೇಶಗಳ ನಿರ್ಬಂಧಗಳಿಗೆ ಕಾರಣವಾಯಿತು ಮತ್ತು ಕಂಪೆನಿಗಳು ಮಾಸ್ಕೋ ಮತ್ತು ರಷ್ಯಾದ ಇತರ ನಗರಗಳಲ್ಲಿ ತಮ್ಮ ಮಳಿಗೆಗಳನ್ನು ಮುಚ್ಚಿದವು. ಯೇಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಪ್ರಕಾರ, ಕಳೆದ ಎರಡು ವಾರಗಳಲ್ಲಿ 300ಕ್ಕೂ ಹೆಚ್ಚು ಕಂಪನಿಗಳು ರಷ್ಯಾವನ್ನು ತೊರೆದಿವೆ. ಸ್ಪೆಕ್ಟೇಟರ್ ಇಂಡೆಕ್ಸ್ ಪ್ರಕಾರ, ಐಷಾರಾಮಿ ವಾಚ್ ಬ್ರ್ಯಾಂಡ್ ರೋಲೆಕ್ಸ್ ಇತ್ತೀಚೆಗೆ ರಷ್ಯಾದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಮೆಕ್ ಡೊನಾಲ್ಡ್ಸ್ (McDonald’s), ಪಿಜ್ಜಾ ಹಟ್ (Pizza Hut) ಮತ್ತು ಪಾನೀಯಗಳ ತಯಾರಕ ಕೋಕಾ-ಕೋಲಾದಂಥದ್ದು ಈಗಾಗಲೇ ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಉಕ್ರೇನ್‌ನ ಮೇಲೆ ರಷ್ಯಾ ದಾಳಿಯನ್ನು ವಿರೋಧಿಸಿದ ಕಾರ್ಪೊರೇಟ್ಗಳಿಗೆ ಬೆಂಬಲವಾಗಿ ಇವುಗಳು ಸಹ ಸೇರ್ಪಡೆ ಆಗಿವೆ.
ಇನ್ನು ಈ ಮಧ್ಯೆ, ರಷ್ಯಾದ ಇಂಧನ ವಿರುದ್ಧ ಅಮೆರಿಕವು ರಷ್ಯಾದ ಇಂಧನ ಆಮದುಗಳ ಮೇಲೆ ತಕ್ಷಣದ ನಿಷೇಧವನ್ನು ವಿಧಿಸಿದ್ದು, ಇದರಿಂದಾಗಿ ತೈಲ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವನ್ನು ಉಂಟುಮಾಡಿದೆ. ಇದು ಮಂಗಳವಾರ ಸುಮಾರು ಶೇ 4ರಷ್ಟನ್ನು ಏರಿಕೆ ಮಾಡಿದೆ. ಫೆಬ್ರವರಿ 24ರಂದು ರಷ್ಯಾ ತನ್ನ ನೆರೆಯ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಬೆಲೆಗಳು ಶೇಕಡಾ 30ಕ್ಕಿಂತ ಹೆಚ್ಚಿವೆ. ರಷ್ಯಾ ದೇಶವು ವಿಶ್ವದ ಎರಡನೇ ಅತಿದೊಡ್ಡ ಕಚ್ಚಾ ರಫ್ತುದಾರ – ಪಶ್ಚಿಮವು ನಿಷೇಧವನ್ನು ಜಾರಿಗೊಳಿಸಿದರೆ ವೆಚ್ಚವು ಮತ್ತಷ್ಟು ಗಗನಕ್ಕೇರುತ್ತದೆ ಎಂದು ಎಚ್ಚರಿಸಿದೆ. 2022ರ ಅಂತ್ಯದ ವೇಳೆಗೆ ರಷ್ಯಾದ ತೈಲದ ಆಮದುಗಳನ್ನು ಹಂತಹಂತವಾಗಿ ನಿಲ್ಲಿಸುವ ಗುರಿಯ ಬಗ್ಗೆ ಬ್ರಿಟನ್ ಹೇಳಿದೆ. ಯುರೋಪಿಯನ್ ಒಕ್ಕೂಟ (EU) ಈ ವರ್ಷ ರಷ್ಯಾದ ಅನಿಲದ ಮೇಲಿನ ಅವಲಂಬನೆಯನ್ನು ಮೂರನೇ ಎರಡರಷ್ಟು ಕಡಿತಗೊಳಿಸಲು ಯೋಜಿಸಿದೆ.
ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಕೆಲವು ದೊಡ್ಡ ಕಂಪೆನಿಗಳ ಪಟ್ಟಿ ಇಲ್ಲಿದೆ:
ರೋಲೆಕ್ಸ್
ಮೆಕ್ ಡೊನಾಲ್ಡ್ಸ್
ಕೋಕಾ ಕೋಲಾ
ಪೆಪ್ಸಿಕೋ
ಸ್ಟಾರ್‌ಬಕ್ಸ್
ನೆಟ್‌ಫ್ಲಿಕ್ಸ್
ಟಿಕ್ ಟಾಕ್
ಸ್ಯಾಮ್ಸಂಗ್
ವೀಸಾ
ಮಾಸ್ಟರ್ ಕಾರ್ಡ್
ಅಮೆರಿಕನ್ ಎಕ್ಸ್ಪ್ರೆಸ್
ಜನರಲ್ ಎಲೆಕ್ಟ್ರಿಕ್
ಜನರಲ್ ಮೋಟಾರ್ಸ್
ಫೋರ್ಡ್ ಮೋಟಾರ್ ಕಂ
ಫೋಕ್ಸ್‌ವ್ಯಾಗನ್ AG
ಟೊಯೊಟಾ ಮೋಟಾರ್ ಕಾರ್ಪೊರೇಶನ್
ವೋಲ್ವೋ ಎಬಿ
ಡೈಮ್ಲರ್ ಟ್ರಕ್ ಹೋಲ್ಡಿಂಗ್ AG
ಶೆಲ್
ಯೂನಿಲಿವರ್
ಲೆವಿ ಸ್ಟ್ರಾಸ್ ಮತ್ತು ಕಂ
ಮೈಕ್ರೋಸಾಫ್ಟ್
ಆಪಲ್
ನೈಕ್
ಕಾಂಡೆ ನಾಸ್ಟ್
ಹಾಲಿವುಡ್ ಸ್ಟುಡಿಯೋಗಳಾದ ವಾಲ್ಟ್ ಡಿಸ್ನಿ (Walt Disney Co), ಪಾರಾಮೌಂಟ್ ಪಿಕ್ಚರ್ಸ್ (Paramount Pictures), ಸೋನಿ ಕಾರ್ಪ್ (Sony Corp), ಮತ್ತು ವಾರ್ನರ್ ಮೀಡಿಯಾ (AT&T Inc’s WarnerMedia) ಮತ್ತು ಯೂನಿವರ್ಸಲ್ ಪಿಕ್ಚರ್ಸ್ (Comcast Corp’s Universal Pictures) ಕೂಡ ರಷ್ಯಾದಲ್ಲಿ ಚಲನಚಿತ್ರಗಳ ಬಿಡುಗಡೆಯನ್ನು ಸ್ಥಗಿತಗೊಳಿಸಿವೆ ಅಥವಾ ಮುಂದೂಡಿವೆ.
ಇದನ್ನೂ ಓದಿ: ರಷ್ಯಾ – ಉಕ್ರೇನ್ ಯುದ್ಧ: ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆ: ಮಾರಾಟಗಾರರ ಮೇಲೆ ಕೃತಕ ಅಭಾವ ಸೃಷ್ಟಿ ಆರೋಪ