Union Budget 2023: ಬಜೆಟ್ ಕಾಪಿಯನ್ನು ಕನ್ನಡದಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
ಅಧಿಕೃತ ವೆಬ್ಸೈಟ್ನ ಲಿಂಕ್ನಲ್ಲಿ ಪ್ರಾದೇಶಿಕ ಭಾಷೆಗಳ ಆಯ್ಕೆ ಇರುತ್ತದೆ. ಬಜೆಟ್ ಮಂಡನೆ ಬಳಿಕ ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಬಜೆಟ್ ಭಾಷಣ ಲಭ್ಯವಾಗಲಿದೆ.
Budget 2023: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಇಂದು (ಫೆಬ್ರವರಿ 1) ಸಂಸತ್ತಿನಲ್ಲಿ ಬಜೆಟ್ 2023 (Union Budget) ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕೇಂದ್ರ ಬಜೆಟ್ ಭಾಷಣವು ಸರ್ಕಾರದ ಅಧಿಕೃತ ಯೂಟ್ಯೂಬ್ (YouTube) ಚಾನಲ್‌ನಲ್ಲಿ ಲಭ್ಯವಿರುತ್ತದೆ. 2023ರ ಬಜೆಟ್ ಮಂಡನೆಯ ನಂತರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಪೂರ್ಣ ಬಜೆಟ್ ಭಾಷಣವು ಬಜೆಟ್ 2023ರ ಅಧಿಕೃತ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿರುತ್ತದೆ.
ಬಜೆಟ್ 2023ರ ಕೇಂದ್ರ ಹಣಕಾಸು ಸಚಿವರ ಭಾಷಣವನ್ನು ಡೌನ್‌ಲೋಡ್ ಮಾಡುವುದು ಹೇಗೆ?: – ಮೊದಲು ಬಜೆಟ್‌ನ ಅಧಿಕೃತ ವೆಬ್ಸೈಟ್ https://www.indiabudget.gov.in/ ಗೆ ಭೇಟಿ ನೀಡಿ.
– ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಬಜೆಟ್ ಭಾಷಣಗಳು ಎಂಬಲ್ಲಿ ಕ್ಲಿಕ್ ಮಾಡಿ.
– ನಿರ್ಮಲಾ ಸೀತಾರಾಮನ್ ಅವರ ಭಾಷಣವನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಬಹುದು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪೂರ್ಣ ಬಜೆಟ್ ಭಾಷಣದ ಹೊರತಾಗಿಯೂ www.indiabudget.gov.in ಬಜೆಟ್‌ನ ಭಾಗವಾಗಿರುವ 14 ಪ್ರಮುಖ ದಾಖಲೆಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಸಾರ್ವಜನಿಕರು ಬಜೆಟ್ 2023 ಡಾಕ್ಯುಮೆಂಟ್‌ಗಳನ್ನು ವೀಕ್ಷಿಸಬಹುದು.
ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಮಂಡನೆ ಮಾಡಿದ ನಂತರ https://www.indiabudget.gov.in/ ನಲ್ಲಿ ಭಾಷಣವನ್ನು ಡೌನ್‌ಲೋಡ್ ಮಾಡಬಹುದು. ಬಜೆಟ್ ಮಂಡನೆ ಬಳಿಕ ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಬಜೆಟ್ ಭಾಷಣ ಲಭ್ಯವಾಗಲಿದೆ. ಅಧಿಕೃತ ವೆಬ್ಸೈಟ್ನ ಲಿಂಕ್ನಲ್ಲಿ ಪ್ರಾದೇಶಿಕ ಭಾಷೆಗಳ ಆಯ್ಕೆ ಇರುತ್ತದೆ. ನಿಮಗೆ ಯಾವ ಭಾಷೆ ಬೇಕೋ ಅದನ್ನು ಆಯ್ಕೆ ಮಾಡಿಕೊಂಡು, ನಿಮ್ಮದೇ ಭಾಷೆಯಲ್ಲಿ ಬಜೆಟ್ ಕಾಪಿಯನ್ನು ಓದಬಹುದು. ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್ ಅನ್ನು ಸಂಸದ್ ಟಿವಿ ಮತ್ತು ದೂರದರ್ಶನದಲ್ಲಿ ಲೈವ್ ಆಗಿ ವೀಕ್ಷಿಸಬಹುದು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣವನ್ನು ಸುದ್ದಿ ವಾಹಿನಿಗಳು ನೇರ ಪ್ರಸಾರ ಮಾಡಲಿವೆ. ಇದು ಸಂಸದ್ ಟಿವಿ, ದೂರದರ್ಶನ ಮತ್ತು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB)ದಲ್ಲಿ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರವಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:04 am, Wed, 1 February 23