ಕೇಂದ್ರ ಬಜೆಟ್​ನಲ್ಲಿ ಗ್ರಾಮೀಣ ಪ್ರದೇಶಕ್ಕೆ ಸಿಗಲಿದೆ ಭರ್ಜರಿ ಕೊಡುಗೆ, ಉದ್ಯೋಗ-ವಸತಿಗೆ ಆದ್ಯತೆ; ವರದಿ

ಕೋವಿಡ್ ಸಾಂಕ್ರಾಮಿಕದ ಹೊಡೆತದಿಂದ ಹೊರಬಂದಿರುವ ಭಾರತದ ಗ್ರಾಮೀಣ ಪ್ರದೇಶಗಳು ಈಗ ಬೆಲೆ ಏರಿಕೆ, ಸೀಮಿತ ಕೃಷಿಯೇತರ ಉದ್ಯೋಗಾವಕಾಶಗಳ ಸಮಸ್ಯೆಗಳನ್ನೆದುರಿಸುತ್ತಿವೆ.

ಕೇಂದ್ರ ಬಜೆಟ್​ನಲ್ಲಿ ಗ್ರಾಮೀಣ ಪ್ರದೇಶಕ್ಕೆ ಸಿಗಲಿದೆ ಭರ್ಜರಿ ಕೊಡುಗೆ, ಉದ್ಯೋಗ-ವಸತಿಗೆ ಆದ್ಯತೆ; ವರದಿ
ಸಾಂದರ್ಭಿಕ ಚಿತ್ರ
TV9kannada Web Team

| Edited By: Ganapathi Sharma

Nov 23, 2022 | 3:45 PM

ನವದೆಹಲಿ: ಮುಂದಿನ ಹಣಕಾಸು ವರ್ಷದಲ್ಲಿ ದೇಶದ ಗ್ರಾಮೀಣ ವೆಚ್ಚವನ್ನು (Rural Spending) ಕೇಂದ್ರ ಸರ್ಕಾರ ಶೇಕಡಾ 50ರಷ್ಟು, ಅಂದಾಜು 2 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. ಸಾರ್ವತ್ರಿಕ ಚುನಾವಣೆಗೂ ಹಿಂದಿ ವರ್ಷವಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಸೌಕರ್ಯ (Housing) ಕಲ್ಪಿಸುವುದು ಮತ್ತು ಉದ್ಯೋಗ ಸೃಷ್ಟಿಗೆ (Job Creation) ಸರ್ಕಾರ ಆದ್ಯತೆ ನೀಡಲಿದೆ ಎಂದು ಮೂಲಗಳು ಹೇಳಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು 2023-24ನೇ ಸಾಲಿನ ಬಜೆಟ್ (Budget) ಮಂಡನೆ ಮಾಡುವ ನಿರೀಕ್ಷೆ ಇದೆ. ಇದು 2024ರ ಲೋಕಸಭೆ ಚುನಾವಣೆಗೂ ಮೊದಲು ಸರ್ಕಾರ ಮಂಡಿಸುವ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿರಲಿದೆ.

ಪ್ರಸಕ್ತ ಹಣಕಾಸು ವರ್ಷಕ್ಕೆ ಗ್ರಾಮೀಣ ವೆಚ್ಚಕ್ಕಾಗಿ 1,36,000 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ, ಹಣಕಾಸು ವರ್ಷದ ಕೊನೆಯ ವೇಳೆಗೆ 1,60,000 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ಗ್ರಾಮೀಣ ಅನುದಾನ ಹೆಚ್ಚಿಸಿದ್ದರೂ ಸಾಂಕ್ರಾಮಿಕದಿಂದ ಉಂಟಾದ ಒತ್ತಡ ಬಗೆಹರಿಸುವುದಕ್ಕಾಗಿಯೇ ಹೆಚ್ಚು ಖರ್ಚಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: Income Tax: 8 ಲಕ್ಷ ರೂ.ಗಿಂತ ಕಡಿಮೆ ಆದಾಯಕ್ಕೆ ತೆರಿಗೆ ಬೇಡ; ಕೇಂದ್ರದ ಅಭಿಪ್ರಾಯ ಕೋರಿದ ಮದ್ರಾಸ್ ಹೈಕೋರ್ಟ್

ಈ ವಿಚಾರವಾಗಿ ಹಣಕಾಸು ಸಚಿವಾಲಯವಾಗಲೀ ಗ್ರಾಮೀಣಾಭಿವೃದ್ಧಿ ಸಚಿವಾಲಯವಾಗಲೀ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದೂ ವರದಿ ಉಲ್ಲೇಖಿಸಿದೆ. ಕೋವಿಡ್ ಸಾಂಕ್ರಾಮಿಕದ ಹೊಡೆತದಿಂದ ಹೊರಬಂದಿರುವ ಭಾರತದ ಗ್ರಾಮೀಣ ಪ್ರದೇಶಗಳು ಈಗ ಬೆಲೆ ಏರಿಕೆ, ಸೀಮಿತ ಕೃಷಿಯೇತರ ಉದ್ಯೋಗಾವಕಾಶಗಳ ಸಮಸ್ಯೆಗಳನ್ನೆದುರಿಸುತ್ತಿದೆ. ಪರಿಣಾಮವಾಗಿ ಹೆಚ್ಚಿನವರು ಸರ್ಕಾರದ ಉದ್ಯೋಗ ಖಾತರಿ ಯೋಜನೆ ನರೇಗಾ ಸೇರಲು ಮುಂದಾಗುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಹೆಚ್ಚಿದ ಗ್ರಾಮೀಣ ನಿರುದ್ಯೋಗ

ದೇಶದಲ್ಲಿ ಗ್ರಾಮೀಣ ನಿರುದ್ಯೋಗ ಪ್ರಮಾಣ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 7ಕ್ಕಿಂತ ಹೆಚ್ಚಿರುವುದು ಭಾರತೀಯ ಆರ್ಥಿಕತೆಯ ನಿರ್ವಹಣಾ ಕೇಂದ್ರದ (ಸಿಎಂಐಇ) ದತ್ತಾಂಶಗಳಿಂದ ತಿಳಿದುಬಂದಿದೆ. ಅಕ್ಟೋಬರ್​ನಲ್ಲಿ ಗ್ರಾಮೀಣ ನಿರುದ್ಯೋಗ ಪ್ರಮಾಣ ಶೇಕಡಾ 8.04ರಷ್ಟಿತ್ತು ಎಂಬುದು ಸಿಎಂಐಇ ದತ್ತಾಂಶಗಳಿಂದ ಗೊತ್ತಾಗಿದೆ.

ಈ ವರ್ಷದ ಅನುದಾನ ಎಷ್ಟಿದೆ?

ಪ್ತಸಕ್ತ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರ ಆರಂಭದಲ್ಲಿ ಉದ್ಯೋಗ ಖಾತರಿ ಯೋಜನೆಗಾಗಿ 73,000 ಕೋಟಿ ರೂ. ನಿಗದಿಪಡಿಸಿತ್ತು. 20,000 ಕೊಟಿ ರೂ. ವಸತಿ ಯೋಜನೆಗಾಗಿ ನಿಗದಿಪಡಿಸಿತ್ತು. 63,260 ಕೋಟಿ ರೂ. ಈಗಾಗಲೇ ಉದ್ಯೋಗ ಯೋಜನೆಗಾಗಿ ವ್ಯಯಿಸಿದೆ ಎಂಬುದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ವೆಬ್​ಸೈಟ್​ನಲ್ಲಿರುವ ಮಾಹಿತಿಯಿಂದ ತಿಳಿದುಬಂದಿದೆ.

ಈ ಮಧ್ಯೆ, ಮುಂದಿನ ಹಣಕಾಸು ವರ್ಷದ ಮುಂಗಡ ಪತ್ರಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿದ್ಧತೆ ಆರಂಭಿಸಿದ್ದಾರೆ. ಸೋಮವಾರ ಅವರು ಕೈಗಾರಿಕೋದ್ಯಮಿಗಳು ಮತ್ತು ಹವಾಮಾನ ಬದಲಾವಣೆ ತಜ್ಞರ ಜತೆ ಸಭೆ ನಡೆಸಿದ್ದರು. ವಿವಿಧ ಕ್ಷೆತ್ರಗಳ ತಜ್ಞರ ಜತೆ ಮುಂದಿನ ದಿನಗಳಲ್ಲಿ ಸಮಾಲೋಚನೆ ನಡೆಸಲಿದ್ದಾರೆ.

ಇದನ್ನೂ ಓದಿ

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada