2025ರ ಬಜೆಟ್: ಮುಂದಿನ ತಿಂಗಳಿಂದಲೇ ತಯಾರಿ; ಅಕ್ಟೋಬರ್ ಎರಡನೇ ವಾರದಿಂದ ಪೂರ್ವಭಾವಿ ಸಭೆಗಳು

|

Updated on: Sep 22, 2024 | 5:36 PM

Union Budget 2025 preparations: 2025ರ ಫೆಬ್ರುವರಿ 1ರಂದು ಮಂಡನೆ ಆಗಲಿರುವ ಯೂನಿಯನ್ ಬಜೆಟ್ ತಯಾರಿಕೆಗೆ ಈಗಿನಿಂದಲೇ ಸಿದ್ಧತೆಗಳಾಗಲಿವೆ. ಅಕ್ಟೋಬರ್ ಎರಡನೇ ವಾರದಿಂದ ಬಜೆಟ್ ಪೂರ್ವಭಾವಿ ಸಭೆಗಳು ನಡೆಯಲಿವೆ. ನವೆಂಬರ್ ತಿಂಗಳ ಮಧ್ಯಭಾಗದವರೆಗೂ ಈ ಸಭೆಗಳು ನಡೆಯುತ್ತವೆ.

2025ರ ಬಜೆಟ್: ಮುಂದಿನ ತಿಂಗಳಿಂದಲೇ ತಯಾರಿ; ಅಕ್ಟೋಬರ್ ಎರಡನೇ ವಾರದಿಂದ ಪೂರ್ವಭಾವಿ ಸಭೆಗಳು
ಕೇಂದ್ರ ಬಜೆಟ್
Follow us on

ನವದೆಹಲಿ, ಸೆಪ್ಟೆಂಬರ್ 22: ಈ ಹಣಕಾಸು ವರ್ಷದ ಪೂರ್ಣ ಬಜೆಟ್ ಮಂಡನೆಯಾಗಿ ಎರಡು ತಿಂಗಳು ಕಳೆಯುವ ಮುನ್ನವೇ ಮುಂದಿನ ಬಜೆಟ್ ಬಗ್ಗೆ ಸರ್ಕಾರ ಆಲೋಚನೆ ನಡೆಸುತ್ತಿದೆ. ವಾಡಿಕೆಯಂತೆ ಬಜೆಟ್​ಗೆ ಆರು ತಿಂಗಳ ಮುನ್ನ ಬಜೆಟ್ ತಯಾರಿ ನಡೆಯುತ್ತದೆ. 2025ರ ಬಜೆಟ್​ಗೆ ಅಕ್ಟೋಬರ್​ನಿಂದ ಸಿದ್ಧತೆ ಆರಂಭವಾಗಲಿದೆ. ವರದಿ ಪ್ರಕಾರ ಅಕ್ಟೋಬರ್ ಎರಡನೇ ವಾರದಿಂದ ಪ್ರಕ್ರಿಯೆ ಶುರುವಾಗುವ ನಿರೀಕ್ಷೆ ಇದೆ. ಕೋವಿಡ್ ಸಂಕಷ್ಟದ ವರ್ಷದ ಬಳಿಕ ನಾಲ್ಕು ವರ್ಷಗಳಿಂದಲೂ ಭಾರತದ ಆರ್ಥಿಕತೆ ಶೇ. 7ಕ್ಕಿಂತ ಹೆಚ್ಚಿನ ದರದಲ್ಲಿ ಬೆಳವಣಿಗೆ ಹೊಂದುತ್ತಿದೆ. ಅದೇ ಮಟ್ಟ ಕಾಯ್ದುಕೊಳ್ಳುವ ಸವಾಲು ಸರ್ಕಾರದ ಮುಂದಿದೆ. ಈ ಹಿನ್ನೆಲೆಯಲ್ಲಿ 2025-26ರ ಹಣಕಾಸು ವರ್ಷದ ಬಜೆಟ್ ಬಗ್ಗೆ ಸಾಕಷ್ಟು ಕುತೂಹಲವಂತೂ ಇದೆ.

ಆರ್ಥಿಕ ವ್ಯವಹಾರಗಳ ಇಲಾಖೆ ಹೊರಡಿಸಿದ ಸುತ್ತೋಲೆ ಪ್ರಕಾರ, 2024ರ ಅಕ್ಟೋಬರ್ ಎರಡನೇ ವಾರದಿಂದ ಹಣಕಾಸು ಸಚಿವಾಲಯದ ವೆಚ್ಚ ವಿಭಾಗದ ಕಾರ್ಯದರ್ಶಿ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿ ಸಭೆಗಳು ನಡೆಯುತ್ತವೆ. ಯೂನಿಯನ್ ಬಜೆಟ್ ಇನ್ಫಾರ್ಮೇಶನ್ ಸಿಸ್ಟಂಗೆ (ಯುಬಿಐಎಸ್) ಎಲ್ಲಾ ಅಗತ್ಯ ಮಾಹಿತಿ ದಾಖಲಾಗಬೇಕು. ಹಣಕಾಸು ಸಲಹೆಗಾರರು 2024ರ ಅಕ್ಟೋಬರ್ 7ರ ಒಳಗೆ ಯುಬಿಐಎಸ್​ಗೆ ಈ ಮಾಹಿತಿ ದಾಖಲಾಗಿವುದನ್ನು ಖಾತ್ರಿಪಡಿಸಬೇಕು. ಅದಾದ ಬಳಿಕ ಪೂರ್ವಭಾವಿ ಸಭೆಗಳು ನಡೆಯುತ್ತವೆ.

ಇದನ್ನೂ ಓದಿ: ಉತ್ಪಾದನಾ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೇರಲಿದೆ ಭಾರತ; 2030ರೊಳಗೆ 10 ಟ್ರಿಲಿಯನ್ ಡಾಲರ್ ಜಿಡಿಪಿ ಆಗಲಿದೆ: ವರದಿ

ಯುಬಿಐಎಸ್​ಗೆ ದಾಖಲುಪಡಿಸಲಾದ ದತ್ತಾಂಶದ ಭೌತಿಕ ಪ್ರತಿ ಅಥವಾ ಹಾರ್ಡ್ ಕಾಪಿಯನ್ನು ನಿಗದಿತ ಫಾರ್ಮ್ಯಾಟ್​ನಲ್ಲಿ ಸಲ್ಲಿಸಬೇಕು. ನಂತರ ಅದನ್ನು ಕ್ರಾಸ್ ವೆರಿಫೈ ಮಾಡಲಾಗುತ್ತದೆ. ಎಲ್ಲಾ ಸಚಿವಾಲಯ ಅಥವಾ ಇಲಾಖೆಗಳು ತಮ್ಮ ಸ್ವಾಯತ್ತ ಅನುಷ್ಠಾನ ಸಂಸ್ಥೆಗಳ ವಿವರಗಳನ್ನು ಸಲ್ಲಿಸಬೇಕು. ಬಳಿಕ ನಿರ್ದಿಷ್ಟ ಕಾರ್ಪಸ್ ಫಂಡ್ ಅನ್ನು ರಚಿಸಲಾಗುತ್ತದೆ.

ಬಜೆಟ್ ಪೂರ್ವಭಾಗಿ ಸಭೆ ಅಕ್ಟೋಬರ್ ಎರಡನೇ ವಾರದಲ್ಲಿ ಆರಂಭವಾಗಿ ನವೆಂಬರ್ ಮಧ್ಯಭಾಗದವರೆಗೂ ಮುಂದುವರಿಯಬಹುದು. ಈ ಸಭೆಗಳು ಮುಗಿದ ಬಳಿಕ ಬಜೆಟ್ ಎಸ್ಟಿಮೇಟ್​ನ ಅಂದಾಜು ಮಾಡಲಾಗುತ್ತದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗಿಗಳಿಗೆ ಶೀಘ್ರದಲ್ಲೇ ಶೇ. 3-4 ಡಿಎ ಹೆಚ್ಚಳ; ಮೂಲವೇತನದ ಜೊತೆ ವಿಲೀನವಾಗುತ್ತಾ ತುಟ್ಟಿಭತ್ಯೆ?

2025-26ರ ಹಣಕಾಸು ವರ್ಷಕ್ಕೆ ರೂಪಿಸಲಾಗುವ ಕೇಂದ್ರ ಬಜೆಟ್ ಅನ್ನು ಫೆಬ್ರುವರಿ 1ರಂದು ಮಂಡನೆ ಮಾಡಲಾಗುತ್ತದೆ. ಹಣಕಾಸು ವರ್ಷ ಏಪ್ರಿಲ್​ನಿಂದ ಆರಂಭವಾದರೂ, ಎರಡು ತಿಂಗಳು ಮುಂಚೆಯೇ ಬಜೆಟ್ ಮಂಡನೆ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ