ಯಾರಿಂದ ಯಾರಿಗೆ ಹೋಗುತ್ತೆ ಗೊತ್ತಾಗಲ್ಲ; ಆಭರಣ ಉದ್ಯಮ ದುರ್ಬಳಕೆ ಆಗಬಹುದು: ಭಾರತವನ್ನು ಎಚ್ಚರಿಸಿದ ಎಫ್​ಎಟಿಎಫ್

FATF report on vulnerability of India's Jems, Jewel sector: ಹವಳ, ಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯ ಅಲಂಕಾರಿಕ ವಸ್ತುಗಳ ಟ್ರೇಡಿಂಗ್ ಉದ್ಯಮದ ಕೆಲ ಕಾನೂನು ದೌರ್ಬಲ್ಯಗಳು ದುರುಪಯೋಗಗೊಳ್ಳಬಹುದು. ಟೆರರ್ ಫೈನಾನ್ಸಿಂಗ್, ಮನಿ ಲಾಂಡರಿಂಗ್​ಗೆ ಇದನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಎಫ್​ಎಟಿಎಫ್​ನ ವರದಿಯಲ್ಲಿ ಭಾರತವನ್ನು ಎಚ್ಚರಿಸಲಾಗಿದೆ. ಭಾರತದಲ್ಲಿ ಈ ಉದ್ಯಮ ಬಹಳ ವಿಸ್ತಾರವಾಗಿರುವುದರಿಂದ ದುರ್ಬಳಕೆ ಅಪಾಯ ಹೆಚ್ಚು ಎನ್ನಲಾಗಿದೆ.

ಯಾರಿಂದ ಯಾರಿಗೆ ಹೋಗುತ್ತೆ ಗೊತ್ತಾಗಲ್ಲ; ಆಭರಣ ಉದ್ಯಮ ದುರ್ಬಳಕೆ ಆಗಬಹುದು: ಭಾರತವನ್ನು ಎಚ್ಚರಿಸಿದ ಎಫ್​ಎಟಿಎಫ್
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 22, 2024 | 12:45 PM

ನವದೆಹಲಿ, ಸೆಪ್ಟೆಂಬರ್ 22: ಮುತ್ತು, ಹವಳ, ಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯ ವಸ್ತುಗಳ ಟ್ರೇಡಿಂಗ್​ನಲ್ಲಿ ಹಣದ ಹರಿವನ್ನು ಟ್ರ್ಯಾಕ್ ಮಾಡುವುದು ಕಷ್ಟ. ಯಾರಿಂದ ಯಾರಿಗೆ ವಸ್ತುಗಳು ಮಾರಾಟ ಆಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ, ಈ ಉದ್ದಿಮೆಯನ್ನು ಕಾಳಸಂತೆಕೋರರು ದುರ್ಬಳಕೆ ಮಾಡಿಕೊಳ್ಳುವುದುಂಟು. ಸರ್ಕಾರಕ್ಕೂ ಇದೇ ತಲೆನೋವಾಗಿದೆ. ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್​ಎಟಿಎಫ್) ಪ್ರಕಾರ, ಒಡವೆ ಉದ್ಯಮವನ್ನು ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆ ನೆರವಿಗೆ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಭಾರತದಲ್ಲಿ ಆಭರಣ ಮತ್ತು ಅಮೂಲ್ಯ ವಸ್ತುಗಳ ಉದ್ದಿಮೆ ಬಹಳ ದೊಡ್ಡದಿದೆ. ಇಲ್ಲಿ ಕಳ್ಳಸಾಗಾಣಿಕೆ ಸಾಧ್ಯತೆ ಹೆಚ್ಚಾಗಿದೆ. ವ್ಯವಹಾರಗಳಲ್ಲೂ ಅಕ್ರಮ ಹಣ ವರ್ಗಾವಣೆ ಸಾಧ್ಯತೆ ಹೆಚ್ಚಿದೆ ಎಂದು ಎಫ್​ಎಟಿಎಫ್ ಎಚ್ಚರಿಸಿದೆ. ಇದರ ವರದಿಯಲ್ಲಿ ಕುತೂಹಲಕಾರಿ ಅಂಶವೊಂದನ್ನು ಉಲ್ಲೇಖಿಸಲಾಗಿದೆ. ಭಾರತದಲ್ಲಿ ಈ ಅಮೂಲ್ಯ ವಸ್ತುಗಳ ಉದ್ದಿಮೆಯಲ್ಲಿ ಮುಖ್ಯ ಸಂಘಟನೆಯಾದ ಜಿಜೆಇಪಿಸಿ (ಜೆಮ್ಸ್ ಅಂಡ್ ಜ್ಯುವೆಲರಿ ಎಕ್ಸ್​ಪೋರ್ಟ್ ಪ್ರೊಮೋಶನ್ ಕೌನ್ಸಿಲ್) ಅನುಮೋದಿಸಿದ ಟ್ರೇಡರ್​ಗಳ ಸಂಖ್ಯೆ 9,500 ಇದೆ. ಅದರೆ, ಒಟ್ಟಾರೆ ಡೀಲರ್ಸ್ ಸಂಖ್ಯೆ 1.75 ಲಕ್ಷ ಇದೆ. ಇಲ್ಲಿ ಜೆಜೆಇಪಿಸಿ ಸದಸ್ಯರಾದವರು ಮಾತ್ರ ಭಾರತದಲ್ಲಿ ಹರಳುಗಳ ರಫ್ತು ಮತ್ತು ಮಾರಾಟ ಮಾಡಬಹುದು. ಆದಾಗ್ಯೂ ಇತರರಿಂದಲೂ ಆಮದು ರಫ್ತು ವ್ಯವಹಾರ ನಡೆಯುತ್ತಿರುವ ಶಂಕೆ ಇದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗಿಗಳಿಗೆ ಶೀಘ್ರದಲ್ಲೇ ಶೇ. 3-4 ಡಿಎ ಹೆಚ್ಚಳ; ಮೂಲವೇತನದ ಜೊತೆ ವಿಲೀನವಾಗುತ್ತಾ ತುಟ್ಟಿಭತ್ಯೆ?

ಈ ಉದ್ದಿಮೆಯಲ್ಲಿ ಆಗುವ ಟ್ರೇಡಿಂಗ್​ನಲ್ಲಿ ಮಾರುವವರು ಮತ್ತು ಖರೀದಿಸುವವರ ಜಾಡು ಹಿಡಿಯುವುದು ಕಷ್ಟ. ಹೀಗಾಗಿ, ಅಕ್ರಮ ವ್ಯವಹಾರಗಳು ಹೆಚ್ಚಿರಬಹುದು. ಈ ಬಗ್ಗೆ ಭಾರತ ನಿಗಾ ಇರಿಸಿ ಸೂಕ್ತ ವ್ಯವಸ್ಥೆ ಏರ್ಪಡಿಸಬೇಕು ಎಂದು ಎಫ್​ಎಟಿಎಫ್ ಸಲಹೆ ನೀಡಿದೆ.

ಚೀನಾ ಬಿಟ್ಟರೆ ಭಾರತವೇ ಚಿನ್ನಕ್ಕೆ ಅತಿದೊಡ್ಡ ಮಾರುಕಟ್ಟೆಯಾಗಿದೆ. ಭಾರತ ಅತಿಹೆಚ್ಚು ಚಿನ್ನಾಭರಣ ರಫ್ತು ಮಾಡುತ್ತದೆ. ಈ ಉದ್ಯಮವು ದೇಶದ ಜಿಡಿಪಿಯ ಶೇ. 7ರಷ್ಟು ಗಾತ್ರದ್ದಾಗಿ ಎನ್ನುವುದು ಗಮನಾರ್ಹ.

ಇದನ್ನೂ ಓದಿ: ವೈಯಕ್ತಿಕ ಸಾಲಕ್ಕೆ ಯಾಕೆ ಬಡ್ಡಿ ಎಷ್ಟು? ತೀರಾ ಹೆಚ್ಚು ಮೊತ್ತದ ಸಾಲ ಯಾಕೆ ಸಿಗಲ್ಲ?

ಭಾರತ ಇತ್ತೀಚೆಗೆ ಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯ ವಸ್ತುಗಳ ಮೇಲೆ ಆಮದು ತೆರಿಗೆಯನ್ನು ಇಳಿಸಿತ್ತು. ಇದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಣನೀಯವಾಗಿ ಇಳಿಕೆ ಆಗಿದ್ದವು. ಈ ಮುಂಚೆ ಬೇರೆ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ ಬಹಳ ಹೆಚ್ಚಿತ್ತು. ಈಗ ಈ ಅಂತರ ಬಹಳ ಕಡಿಮೆ ಆಗಿದೆ. ಇದರಿಂದ ಬೇರೆ ದೇಶಗಳಿಂದ ಭಾರತಕ್ಕೆ ಚಿನ್ನ ಸಾಗಿಸುವ ಕೆಲಸ ಮತ್ತು ಸ್ಮಗ್ಲಿಂಗ್ ಕಡಿಮೆ ಆಗಬಹುದು ಎನ್ನುವ ಆಶಯ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ