ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟಪ್​ಗಳಿಗೆ ಫಂಡ್ ಮತ್ತು ಎರಡು ರೈಲ್ವೆ ಯೋಜನೆಗಳಿಗೆ ಸಂಪುಟ ಅನುಮೋದನೆ

|

Updated on: Oct 24, 2024 | 5:50 PM

Railway projects and space startups venture fund: ಎರಡು ಮಹತ್ವದ ರೈಲ್ವೆ ಯೋಜನೆಗಳು ಹಾಗೂ ಸ್ಪೇಸ್ ಸ್ಟಾರ್ಟಪ್​ಗಳಿಗೆ ಫಂಡಿಂಗ್ ಕೊಡುವ ಸ್ಕೀಮ್​ಗೆ ಕೇಂದ್ರ ಸಂಪುಟ ಅಕ್ಟೋಬರ್ 24ರಂದು ಅನುಮೋದನೆ ನೀಡಿದೆ. ಆಂಧ್ರ ಮತ್ತು ಬಿಹಾರದಲ್ಲಿ ಈ ರೈಲ್ವೆ ಯೋಜನೆಗಳ ಮೌಲ್ಯ 6,798 ಕೋಟಿ ರೂ.

ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟಪ್​ಗಳಿಗೆ ಫಂಡ್ ಮತ್ತು ಎರಡು ರೈಲ್ವೆ ಯೋಜನೆಗಳಿಗೆ ಸಂಪುಟ ಅನುಮೋದನೆ
ರೈಲ್ವೆ ಯೋಜನೆ
Follow us on

ನವದೆಹಲಿ, ಅಕ್ಟೋಬರ್ 24: ಕೇಂದ್ರ ಸಂಪುಟ ಇಂದು ಗುರುವಾರ ಹಲವು ಯೋಜನೆಗಳಿಗೆ ಅನುಮೋದನೆ ನೀಡಿದೆ. ಅದರಲ್ಲಿ ಪ್ರಮುಖವಾಗಿ ಎರಡು ದೊಡ್ಡ ರೈಲ್ವೆ ಮೂಲಸೌಕರ್ಯ ಯೋಜನೆಗಳಿಗೆ ಹಸಿರು ನಿಶಾನೆ ಸಿಕ್ಕಿದೆ. ವರದಿ ಪ್ರಕಾರ ಬಿಹಾರ ಮತ್ತು ಆಂಧ್ರಪ್ರದೇಶದಲ್ಲಿ ರೈಲ್ವೆ ಕನೆಕ್ಟಿವಿಟಿ ಹೆಚ್ಚಿಸಲು ಎರಡು ಯೋಜನೆಗಳನ್ನು ರೂಪಿಸಲಾಗಿದೆ. ಇವುಗಳ ಒಟ್ಟು ಮೊತ್ತ 6,798 ಕೋಟಿ ರೂ.

ಬಿಹಾರದಲ್ಲಿ ನರಕಾತಿಯಗಂಜ್, ರಾಕ್ಸೋಲ್, ಸೀತಾಮಡಿ, ದರ್ಬಾಂಗ ಮಾರ್ಗದ ರೈಲು ಡಬ್ಲಿಂಗ್ ಯೋಜನೆ. ಹಾಗೂ ಸೀತಾಮಡಿ, ಮುಜಾಫರ್​ಪುರ್ ರೈಲ್ವೆ ಸೆಕ್ಷನ್​ನ ಡಬ್ಲಿಂಗ್ ಯೋಜನೆ ಇದೆ. ಇವೆರಡೂ ಸೇರಿ 256 ಕಿಮೀ ಮಾರ್ಗದ ರೈಲು ಡಬ್ಲಿಂಗ್ ಕೆಲಸ ನಡೆಯಲಿದೆ.

ಇದನ್ನೂ ಓದಿ: ಓದಲು ನೆರವಾಗಿ ಸಾಕು..! ಜಿಯೋ ಹಾಟ್​ಸ್ಟಾರ್ ಡೊಮೈನ್ ನೊಂದಾಯಿಸಿದ್ದ ಟೆಕ್ಕಿಯ ಬೇಡಿಕೆಗೆ ಬಗ್ಗದ ರಿಲಾಯನ್ಸ್

ಕ್ಯಾಬಿನೆಟ್​ನಿಂದ ಅನುಮೋದನೆ ಪಡೆದ ಮತ್ತೊಂದು ಯೋಜನೆ ಆಂಧ್ರದ್ದು. ಎರ್ರುಪಲಂ, ಅಮರಾವತಿ ಮತ್ತು ನಂಬೂರು ನಡುವೆ 57 ಕಿಮೀ ದೂರದ ನೂತನ ರೈಲ್ವೆ ಲೈನ್ ನಿರ್ಮಾಣದ ಯೋಜನೆ ಇದು. ವಿಜಯವಾಡ, ಗುಂಟೂರು ಜಿಲ್ಲೆಗಳಲ್ಲಿ ಇದು ಹಾದು ಹೋಗುತ್ತದೆ. ತೆಲಂಗಾಣ ಜಿಲ್ಲೆಯ ಖಮ್ಮಮ್ ಜಿಲ್ಲೆಯೂ ಈ ಮಾರ್ಗದಲ್ಲಿ ಸಿಗುತ್ತದೆ.

ಬಿಹಾರ ಮತ್ತು ಆಂಧ್ರದಲ್ಲಿನ ಈ ರೈಲ್ವೆ ಯೋಜನೆಗಳಿಂದ ಆ ಎರಡು ರಾಜ್ಯಗಳಲ್ಲಿ ಸಂಪರ್ಕ ಗಾಢಗೊಳ್ಳುವ ನಿರೀಕ್ಷೆ ಇದೆ.

ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟಪ್​ಗಳಿಗೆ ಫಂಡಿಂಗ್

ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸ್ಟಾರ್ಟಪ್​ಗಳಿಗೆ ಉತ್ತೇಜನ ನೀಡಲೆಂದು 1,000 ರೂ ಮೊತ್ತದ ವೆಂಚರ್ ಕ್ಯಾಪಿಟಲ್ ಫಂಡ್ ರೂಪಿಸಲಾಗಿದೆ. ಈ ಸ್ಕೀಮ್​ಗೆ ಸಂಪುಟ ಇಂದು ಅನುಮೋದನೆ ನೀಡಿದೆ. ಕಳೆದ ಬಾರಿಯ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಇಂತಹದ್ದೊಂದು ವೆಂಚರ್ ಫಂಡ್ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರು ಬಿಟ್ಟು ಆಂಧ್ರಕ್ಕೆ ಬನ್ನಿ ಎಂದ ಸಚಿವರ ಕರೆಗೆ ಸಿಲಿಕಾನ್ ಸಿಟಿ ಉದ್ಯಮಿಗಳ ರಿಯಾಕ್ಷನ್ ಹೀಗಿತ್ತು..!

ಐದು ವರ್ಷದವರೆಗೂ ಈ ಫಂಡ್ ಇರಲಿದ್ದು, ಪ್ರತೀ ವರ್ಷ ಸರಾಸರಿಯಾಗಿ 150ರಿಂದ 250 ಕೋಟಿ ರೂ ಹಣವನ್ನು ಬಳಕೆ ಮಾಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಒಂದು ಸ್ಟಾರ್ಟಪ್​ಗೆ 10ರಿಂದ 60 ಕೋಟ ರೂವರೆಗೂ ಫಂಡಿಂಗ್ ಸಿಗಬಹುದು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ